ಗುಟಮಟ್ಟದ ಕಾಮಗಾರಿ ಕೈಗೊಳ್ಳಲು ತಾಕೀತು: ಶಾಸಕ ಪಾಟೀಲ್
ಸಂಜೆವಾಣಿ ವಾರ್ತೆ
ಹುಮನಾಬಾದ್:ಮಾ.7:ಸರಕಾರದ ವಿವಿಧ ಯೋಜನೆಗಳಲ್ಲಿ ನೀಡಲಾದ ಅನುದಾನದಲ್ಲಿ ಕೈಗೊಳ್ಳುತ್ತಿರುವ ಕಾಮಗಾರಿಗಳು ಗುಣಮಟ್ಟದಿಂದ ಕೈಗೊಳ್ಳಬೇಕು ಎಂದು ಶಾಸಕ ಡಾ. ಸಿದ್ದು ಪಾಟೀಲ್ ತಾಕೀತು ಮಾಡಿದರು.
ತಾಲೂಕಿನ ಹುಡುಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ವತಿಯಿಂದಪ ಮಂಗಳವಾರ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಬಳಿಕ ಮಾತನಾಡಿದರು.
ಕ್ಷೇತ್ರದ ಸವಾರ್ಂಗೀಣ ಅಭಿವೃದ್ಧಿಗೆ ಪೂರಕವಾದ ಉದ್ದೇಶಗಳನ್ನು ಗುರಿ ಮಾಡಿಕೊಂಡು ಬಡ ಜನರ ಕಲ್ಯಾಣಕ್ಕೆ ಗುಣಮಟ್ಟದ ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತಿದೆ. ಆರೋಗ್ಯ, ಶಿಕ್ಷಣ, ರಸ್ತೆ ಸುಧಾರಣೆ, ಚರಂಡಿ, ಕುಡಿಯುವ ನೀರು ಪೂರೈಕೆ ಸೇರಿ ಅಗತ್ಯ ಸೌಲಭ್ಯ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ದೇಶದ ಅಭಿವೃದ್ಧಿ ಕೇವಲ ಯುವ ಸಮುದಾಯದವರ ಕೈಯಲ್ಲಿದೆ. ಹೀಗಾಗಿ ಯುವ ಪೀಳಿಗೆಗೆ ಉತ್ತಮ ಶಿಕ್ಷಣ ನೀಡಲು ಪೆÇೀಷಕರು ಮುಂದಾಗಬೇಕು. ಜತೆಗೆ ಸರಕಾರಿ ಶಾಲೆಯಲ್ಲಿ ಮಕ್ಕಳಿಗೆ ಗಣಕಯಂತ್ರ ವಿಷಯದ ಜ್ಞಾನ ನೀಡುವಂತೆ ಶಿಕ್ಷಕರಿಗೆ ಸೂಚಿಸಲಾಗುವುದು. ಅಲ್ಲದೇ ಮಕ್ಕಳು ಕೂಡ ಗುಣ ಮಟ್ಟದ ಶಿಕ್ಷಣ ಪಡೆದು ಉತ್ತಮ ಸಾಧನೆ ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹುಡುಗಿ ಗ್ರಾಮ ಪಂಚಾಯತ ಅಧ್ಯಕ್ಷೆ , ಉಪಾಧ್ಯಕ್ಷ , ಗ್ರಾಪಂ. ಸದಸ್ಯರಾದ , ಗ್ರಾಪಂ. ಅಭಿವೃದ್ಧಿ ಶಿವರಾಜ್, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್, ಮುಖಂಡರಾದ ಸಂತೋಷ ಪಾಟೀಲ್, ಗಿರೀಶ ತುಂಬಾ, ಮಲ್ಲಿಕಾರ್ಜುನ್ ಸೀಗಿ, ಗೌತಮ್ ಚಿಟ್ಟಾ, ಬಸವರಾಜ ಮೇತ್ರೆ ಸೇರಿದಂತೆ ಅನೇಕರು ಇದ್ದರು.
ನಾನಾ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ
ತಾಲೂಕಿನ ನಂದಗಾಂವ ಗ್ರಾಮದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ 20, ಹೈಮಸ್ಟ್ ದೀಪ 15, ಎಎನ್‍ಎಂ ಸೆಂಟರ್ ನಿರ್ಮಾಣಕ್ಕೆ 33, ಹುಡಗಿ ಗ್ರಾಮದ ಸರಕಾರಿ ಆಸ್ಪತ್ರೆಯಲ್ಲಿ ಹೆಚ್ಚುವರಿ ಓಪಿಡಿ ಕೋಣೆ ನಿರ್ಮಾಣಕ್ಕಾಗಿ 40, ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ 20, ರಾಮಲಿಂಗೇಶ್ವರ ಮತ್ತು ಕರಿಬಸವೇಶ್ವರ ದೇವಾಲಯದ ಹತ್ತಿರ ಸೋಲಾರ್ ಹೈಮಸ್ಟ್ ನಿರ್ಮಾಣಕ್ಕೆ 30, ಎಎನ್‍ಎಂ ಸೆಂಟರ್‍ಗೆ 33, ಸೀತಾಳಗೇರಾ ಗ್ರಾಮದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ 20, ಶುದ್ಧ ನೀರಿನ ಘಟಕ ನಿರ್ಮಾಣಕ್ಕೆ 15, ಸರಕಾರಿ ಶಾಲೆಗೆ ಹೊಸ ಕೋಣೆಯ ನಿರ್ಮಾಣಕ್ಕೆ 7 ಹಾಗೂ ಮರಕಲ್ ಗ್ರಾಮದಲ್ಲಿ ಎಎನ್‍ಎಂ ಸಬ್ ಸೆಂಟರ್ ಕಚೇರಿ ನಿರ್ಮಾಣಕ್ಕೆ 33, ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ 20 ಲಕ್ಷ ರೂಪಾಯಿಗಳ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಸಲ್ಲಿಸಿ ಶಾಸಕ ಡಾ. ಸಿದ್ದು ಪಾಟೀಲ್ ಚಾಲನೆ ನೀಡಿದರು.