ಮಕ್ಕಳು ಶಿಕ್ಷಣಕ್ಕೆ ಮೂದಲ ಆದ್ಯತೆ ನೀಡಿ: ದಿಲೀಪಕುಮಾರ ತಾಳಂಪಳ್ಳಿ
ಸಂಜೆವಾಣಿ ವಾರ್ತೆ
ಹುಮನಾಬಾದ್:ಮಾ.7: ಆಧುನಿಕ ಯುಗದಲ್ಲಿ ಮಕ್ಕಳು ಶಿಕ್ಷಣಕ್ಕೆ ಮೊದಲ ಆಧ್ಯತೆ ನೀಡುವುದರ ಜತೆಗೆ ಸಾಹಿತ್ಯ, ಸಂಸ್ಕ್ರತಿ, ಮತ್ತು ಕ್ರೀಡೆಯಲ್ಲಿ ಭಾಗವಹಿಸಬೇಕು, ಎಂದು ಬಸವಕಲ್ಯಾಣ ಎಂಜಿನಿಯರಿಂಗ ಕಾಲೇಜು ಅಧ್ಯಕ್ಷ ದಿಲೀಪಕುಮಾರ ತಾಳಂಪಳ್ಳಿ ಹೇಳಿದರು.
ತಾಲ್ಲೂಕಿನ ಹಳ್ಳಿಖೇಡ(ಬಿ)ನ ಜ್ಞಾನ ಭಾರತಿ ಎಜ್ಯುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ನ ಅಡಿಯಲ್ಲಿ ನಡೆಯುತ್ತಿರುವ ಮಾತೋಶ್ರೀ ಕಸ್ತೂರಬಾಯಿ ತಾಳಂಪಳ್ಳಿ ಪ್ರೌಢ ಶಾಲೆ ಮತ್ತು ಶ್ರೀ ಜ್ಞಾನ ದೇವೇಂದ್ರ ಸ್ಮಾರಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದ ಶ್ರೀಮತಿ ಮಂಜುಳಾ ಎಸ್ ಗಂಗಾರವರು ಬರೆದ ಕಾವ್ಯ ಕಾರಂಜಿ ಕವನ ಸಂಕಲನ ಲೋಕಾರ್ಪಣೆ ಹಾಗೂ ಶಿವಗಾಂಗ ಆಂಗ್ಲ ಮಾಧ್ಯಮ ಶಾಲೆ ಉದ್ಘಾಟನೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಕ್ಕಳು, ಯುವಕ, ಯುವತಿಯರು, ಮನಸ್ಸು ಮಾಡಿದರೆ ಸಧೃಡ ಸಮಾಜ ನಿರ್ಮಾಣ ಮಾಡಬಹುದು. ಮಕ್ಕಳು ದೇಶಾಭಿಮಾನ ಮತ್ತು ತಂದೆ, ತಾಯಿ, ಗುರು, ಹಿರಿಯರನ್ನು ಗೌರವಂದಿಂದ ಕಾಣುವಂತಹ ಮನೋಭಾ ಬೆಳೆಸಿಕೊಳ್ಳಬೇಕು, ಪಾಲಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೋಡಿಸುವುದರ ಜತೆಗೆ ಸಂಸ್ಕಾರವಂತರಾಗಿ ಬೆಳೆಸಬೇಕು ಎಂದು ಸಲಹೆ ನೀಡಿದರು.
ಬೆಂಗಳೂರಿನ ಆಲ್ಕಾ ಮೀಡಿಯಾ ಸ್ಕೂಲ್ ಗೌರಿಶ ಅಕ್ಕಿ ಸ್ಟೋಡಿಯೋದ ಸಂಸ್ಥಾಪಕ ನಿರ್ದೇಶಕ, ನಿರೂಪಕರು ಹಾಗೂ ಪತ್ರಕರ್ತರಾದ ಗೌರಿಶ ಅಕ್ಕಿ ಅವರು ಉದ್ಘಾಟಿಸಿ ಮಾತನಾಡಿದರು. ನವದೆಹಲಿ ಕನ್ನಡ ಸಲಹಾ ಸಮಿತಿ ಕೇಂದ್ರ ಸಾಹಿತ್ಯ ಅಕಾಡಮಿ ಸದಸ್ಯೆ ಜಯದೇವಿ ಗಾಯಕವಾಡ, ಹಿರಿಯ ಸಾಹಿತಿ ಗವಿಸಿದ್ದಪ್ಪಾ ಪಾಟೀಲ, ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ, ರಾಷ್ಟ್ರೀಯ ಬುಡಕಟ್ಟು ಕಲಾ ಪರಿಷತ್ತು ಕಾರ್ಯದರ್ಶಿ ಡಾ.ರಾಜಕುಮಾರ ಹೆಬ್ಬಾಳೆ ಮಾತನಾಡಿದರು.
ಸಂಗೋಳ್ಳಿ ರಾಯಣ್ಣ ಗೊಂಡ ಸಮಾಜ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ್ ಮಲ್ಕಾಪುರೆ, ಕೊಂಚಾವರಂ ಸಮುದಾಯ ಆರೋಗ್ಯ ಕೇಂದ್ರದ ಅಡಳಿತ ವೈದ್ಯಾಧಿಕಾರಿ ಡಾ.ಬಾಲಾಜಿ ಪಾಟೀಲ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಸಿದ್ದಲಿಂಗ ನಿರ್ಣಾ, ಪಿಎಸ್‍ಐ ಅಯ್ಯಪ್ಪ, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ರಾಜ್ಯ ಪರಿಷತ್ ಸದಸ್ಯ ಸುಭಾಷ ಗಂಗಾ, ಗ್ರಾಪಂ ಮಾಜಿ ಅಧ್ಯಕ್ಷ ಶಿವಶರಣಪ್ಪಾ ಓಲದೋಡ್ಡಿ, ಮುಕ್ರಮ ಎ ಪಟೇಲ್, ಬಾಬಾ ಢಣಕೆ, ಇದ್ದರು. ಜ್ಞಾನ ಭಾರತಿ ಎಜ್ಯುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷೆ ಮಂಜುಳಾ ಎಸ್ ಗಂಗಾ ಸ್ವಾಗತಿಸಿದರು, ಮುಖ್ಯಗುರು ಹಾಗೂ ಅಡಳಿತಾಧಿಕಾರಿ ಶಿವಲಿಂಗ ಸರ್ ನಿರೂಪಿಸಿ, ವಂದಿಸಿದರು.