ಧರ್ಮ ಸಮನ್ವಯಗೊಂಡಾಗ ದೇಶದಲ್ಲಿ ಸಮಾನತೆ ಸಾಧ್ಯ
ಮುದ್ದೇಬಿಹಾಳ:ಮಾ.7: ಧರ್ಮವೂ ಸಮನ್ವಯಗೊಂಡಾಗ ದೇಶದಲ್ಲಿ ಸಮಾನತೆ ಹಾಗೂ ಶಾಂತಿ ಮಾನವಿಯ ಮೌಲ್ಯಗಳು ಉಳಿದುಕೊಳ್ಳುತ್ತವೇ ಒಂದು ವೇಳೆ ಧರ್ಮದಲ್ಲಿ ಸಮನ್ವಯತೆ ಬಾರದೇ ಇದ್ದಲ್ಲಿ ಲೋಕವು ನರಕದಂತಾಗುತ್ತದೆ ಈ ನಿಟ್ಟಿನಲ್ಲಿ ನಾವೇಲ್ಲರೂ ನಮ್ಮ ಧರ್ಮ ಸಂಸ್ಕøತಿ, ಆಚಾರ ವಿಚಾರಗಳನ್ನು ಮತ್ತು ಗುರುವನ್ನು ಗೌರವಿಸುವ ಮೂಲಕ ನಿಜವಾದ ಮನುಷ್ಯರಾಗಿ ಬಾಳಿ ಬದುಕಬೇಕಿದೆ ಎಂದು ಶಿರಹಟ್ಟಿ ಭಾವೈಕ್ಯತಾ ಮಹಾಸಂಸ್ಥಾನಮಠದ ಜಗದ್ಗುರು ಶ್ರೀ ಪಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಸೂಕ್ಷೇತ್ರ ಕುಂಟೋಜಿ ಸಂಸ್ಥಾನ ಹಿರೇಮಠದ ಶ್ರೀ ಚನ್ನವೀರ ದೇವರು ಅವರು ಗುರು ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ಧರ್ಮ ಸಮನ್ವಯ ಸಮಾರಂಭ ಹಾಗೂ ಶ್ರೀ ಶರಣಬಸವೇಶ್ವರ ಪುರಾಣ ಮಂಗಲೋತ್ಸವ ಕಾರ್ಯದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕುಂಟೋಜಿ ಗ್ರಾಮವೂ ಪುಣ್ಯ ಕ್ಷೇತ್ರವಾಗಿದ್ದು ಹಿರೇಮಠದಂತ ಮಠದ ಪರಂಪರೆಯು ಇತಿಹಾಸವನ್ನು ಹೊಂದಿದ್ದು ಮಾತ್ರವಲ್ಲದೇ ಅಪಾರ ಪ್ರಮಾಣದಲ್ಲಿ ಭಕ್ತರವನ್ನು ಹೊಂದಿದ ಏಕೈಕ ಮಠ ಇದಾಗಿದೆ. ಸಧ್ಯ ಮಠದ ಬಹುತೇಕ ಎಲ್ಲ ಭಕ್ತ ಆಶಯದಂತೆ ಹಿರೇಮಠದ ಶ್ರೀ ಚನ್ನವೀರ ದೇವರು ಅವರು ಗುರು ಪಟ್ಟಾಧಿಕಾರ ಮಹೋತ್ಸವ ಜರುಗುತ್ತಿರುವುದು ಸಂತಸವನ್ನುಂಟು ಮಾಡಿದೆ ಇದರಿಂದ ಕುಂಟೋಜಿ ಗ್ರಾಮಕ್ಕೆ ಒಳ್ಳೆಯ ಹೆಸರು ಕೀರ್ತಿ ಘನತೆ ಹೆಚ್ಚಾಗಿದೆ.ಚನ್ನವೀರ ದೇವರು ಬಾಲ್ಯದಿಂದಲೂ ಸಾಕಷ್ಟು ಏರು ಪೇರುಗಳನ್ನು ಅನುಭವಿಸಿದ್ದಲ್ಲದೇ ಭಕ್ತರ ಹೃದಯದಲ್ಲಿ ನೆಲಿಸಿದ್ದಾರೆ ಈ ನಿಟ್ಟಿನಲ್ಲಿ ಅವರ ಗುರು ಪಟ್ಟಾಧಿಕಾರ ಕಾರ್ಯಕ್ರಮ ಕೊನೆ ದಿನದವರೆಗೂ ಗ್ರಾಮದ ಎಲ್ಲ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು
ಈ ವೇಳೆ ಯರನಾಳ ವಿರಕ್ತಮಠದ ಶ್ರೀ ಸಂಗನಬಸವ ಮಹಾಸ್ವಾಮಿಗಳು ಮಾತನಾಡಿ ಇಡಿ ಕರ್ನಾಟಕದಲ್ಲಿ ವೀರಶೈವ ಲಿಂಗಾಯತ ಸಮಾಜ ಬೆಳೆದು ನಿಲ್ಲಲು ಮತ್ತು ಗೌರವಹೊಂದಿದೆ ಎಂದರೆ ಶಿವಯೋಗ ಮಂದಿರದಿಂದ ಅಂತಹ ವ್ಯವಸ್ಥೆಯಲ್ಲಿ ಬೆಳೆದು ನಿಂತವರು ಕುಂಟೋಜಿ ಹಿರೇಮಠದ ಶ್ರೀ ಚನ್ನವೀರ ದೇವರು ಸಧ್ಯ ಅವರ ಪಟ್ಟಾಧಿಕಾರ ನಡೆಯುತ್ತಿರುವುದು ಎಲ್ಲೇಡೆ ಸಂಭ್ರಮ ಮನೆ ಮಾಡಿದೆ. ಯಾವ ಸಂತ ತನ್ನ ಸಂಸಾರವನ್ನು ತ್ಯಾಗಮಾಡಿ ಲೋಕ ಕಲ್ಯಾಣಕ್ಕಾಗಿ ಈ ಸಮಾಜದ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಲ್ಲುವ ಮೂಲಕ ಸಮ ಸಮಾಜ ಕಟ್ಟುವಲ್ಲಿ ಶ್ರಮಿಸುತ್ತಾನೋ ಅಂತಹವನು ನಿಜವಾದ ಮಠಾಧೀಶರು ಶರಣರಾಗಿ ಉಳಿಯಲು ಸಾಧ್ಯ ಎಂದು ಹನ್ನೇಡರನೆ ಶತಮಾನದ ಎಲ್ಲ ಶರಣು ಹೇಳಿದ್ದಾರೆ. ಸನ್ಯಾಸಿಗಳು ಸಂಸಾರಿಗಳು ಹೇಗಿರಬೇಕು ಎಂದು ತಿಳಿಸಿ ಕೊಟ್ಟವರು ಹಾನಗಲ್ಲ ಕುಮಾರಸ್ವಾಮಿಗಳು ಕಲಿಸಿಕೊಟ್ಟಿದ್ದಾರೆ ಎಂದರು.
ಈ ವೇಳೆ ಜೇವರಗಿ ಸೊನ್ನದ ದಾಸೋಹ ಮಠದ ಶ್ರೀ ಶಿವಾನಂದ ಮಹಾಸ್ವಾಮಿಗಳು, ಬೆಂಗಳೂರಿನ ವಿಭೂತಿಮಮಠದ ಡಾ, ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು, ಗಡಿಗೌಡಗಾಂವಹಾವಗೀಲಿಂಗೇಶ್ವರ ಮಠದ ಶ್ರೀ ಶಾಣಂತಲಿಂಗ ಶಿವಾಚಾರ್ಯ ಸ್ವಾಮಿಗಳು, ಇಂಗಳೇಶ್ವರ ವಚನ ಶಿಲಾಮಂಟಪದ ಶ್ರೀ ವಚನ್ನಬಸವ ಮಹಾಸ್ವಾಮಿಗಳು ಸಂತೇಕೆಲ್ಲೂರು ಗುರುಬಸವ ಮಹಾಸ್ವಾಮಿಗಳು, ಗದಗ ಕಪ್ಪತ್ತಗುಡ್ಡದ ನಂದಿವೇರಿಮಠದ ಶಿವಕುಮಾರ ಮಹಾಸ್ವಾಮಿಗಳು, ಬೆಳಗಾಂವಿ ಜಿಲ್ಲೆಯ ತೋರಗಲ್ಲ ಗಚ್ಚಿನಮಠದ ಹೀರೇಮಠದ ಶ್ರೀ ಚನ್ನಮಲ್ಲ ಶಿವಾಚಾರ್ಯ ಸ್ವಾಮಿಗಳು, ಯಕ್ಕುಂಡಿ ಶ್ರೀ ಕುಮಾರೇಶ್ವರ ಸಂಸ್ಥಾನ ವೀರಕ್ತಮಠದ ಶ್ರೀ ಪಂಚಾಕ್ಷರ ಮಹಾಸ್ವಾಮಿಗಳು, ಸವವಣೂರದ ಚನ್ನಬಸವ ಮಹಾಸ್ವಾಮಿಗಳು, ಉಪ್ಪಿನ ಬೆಟಗೇರಿಯ ಕುಮಾರ ವಿರೂಪಾಕ್ಷ ಮಹಾಸ್ವಾಮಿಗಳು, ಕಮತಗಿ ಶ್ರೀ ಹೆಚ್ಚೇಶ್ವರ ಮಹಾಸ್ವಾಮಿಗಳು, ಮಸಬಿನಾಳದ ಸಿದ್ಧರಾಮ ಮಹಾಸ್ವಾಮಿಗಳು, ಕನಕಗಿರಿ ಶ್ರೀ ಚನ್ನಮಲ್ಲ ಮಹಾಸ್ವಾಮಿಗಳು, ಅಮೀನಗಡದ ಶಂಕರರಾಜೇಂದ್ರ ಮಹಾಸ್ವಾಮಿಗಳು, ಗುಳೇದಗುಡ್ಡದ ಶ್ರೀ ಒಪ್ಪತೇಶ್ವರ ಮಹಾಸ್ವಾಮಿಗಳು ಗುಳೇದಗುಡ್ಡ ಶ್ರೀ ಕಾಶಿನಾಥ ಮಾಸ್ವಾಮಿಗಳು, ಶಾಸಕ ಹಾಗೂ ಕರ್ನಾಟಕ ಸರಕಾರದ ಸಾಭೂನ ಮತ್ತು ಮಾರ್ಜಕ ನಿಯಮಿತದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಸೇರಿದಂತೆ ಅನೇಕ ಗಣ್ಯರು ಸಾಹಿತಿಗಳು, ಮಹಿಳಾ ಮುಖಂಡರು ಇದ್ದರು.