ವಿ.ಜೆ ಸಜೀತ್ ನೇತೃತ್ವದಲ್ಲಿ ನಗರದ ವಿವಿಧೆಡೆ ಪರಿಶೀಲನೆ
ಸಂಜೆವಾಣಿ ನ್ಯೂಸ್
ಮೈಸೂರು: ಮಾ.07:- ಕರ್ನಾಟಕ ಲೋಕಾಯುಕ್ತದ ಪೆÇಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಠಾಕೂರ್, ಪೆÇಲೀಸ್ ಮಹಾ ನಿರೀಕ್ಷಕ ಸುಬ್ರಮಣ್ಯೇಶ್ವರ ರಾವ್ ಮಾರ್ಗದರ್ಶನದಲ್ಲಿ ಕರ್ನಾಟಕ ಲೋಕಾಯುಕ್ತ ಮೈಸೂರು ವಿಭಾಗದ ಪೆÇಲೀಸ್ ಅಧೀಕ್ಷಕ ವಿ.ಜೆ ಸಜೀತ್ ರವರ ನೇತೃತ್ವದಲ್ಲಿ ನಗರದ ಕಸ ಬೀಸಾಡುವ ಸ್ಥಳಗಳಿಗೆ, ಕಸ ವಿಂಗಡಣೆ ಸ್ಥಳಗಳಿಗೆ, ಕಸ ಸಂಗ್ರಹಿಸಿ ವಿಲೇವಾರಿ ಮಾಡುವ ಸ್ಥಳಗಳಿಗೆ ,ಕಸ ತ್ಯಾಜ್ಯ ವಿಲೇವಾರಿ ಘಟಕಗಳಿಗೆ, ಪೌರ ಕಾರ್ಮಿಕರುಗಳ ಕರ್ತವ್ಯಗಳ ಬಗ್ಗೆ, ಕಸ ಸಂಗ್ರಹಿಸುವ ವಾಹನಗಳ ಬಗ್ಗೆ, ಕಸ ಸಂಗ್ರಹಿಸಲು ವಾಹನಗಳನ್ನು ಸಮರ್ಪಕವಾಗಿ ಹಂಚಿಕೆ ಮಾಡಿರುವ ಬಗ್ಗೆ ಹಾಗೂ ನಗರ ಪಾಲಿಕೆ ವಲಯ ಕಛೇರಿಗಳಿಗೆ, ಖುದ್ದು ಭೇಟಿ ಮಾಡಿ ಪರಿಶೀಲನೆ ನಡೆಸಿದರು.
ಮೈಸೂರು ವಿಭಾಗದ ಪೆÇಲೀಸ್ ಅಧೀಕ್ಷಕ ವಿ.ಜೆ ಸಜೀತ್ ಮಾತನಾಡಿ, ಪರಿಶೀಲನಾ ವೇಳೆ ಕಂಡುಬಂದ ಅಂಶಗಳ ಬಗ್ಗೆ ವಿಸ್ತ್ರತ ವರದಿಯನ್ನು ತಯಾರಿಸಿ ಲೋಕಾಯುಕ್ತರವರಿಗೆ ಸಲ್ಲಿಸಿಕೊಂಡಿದ್ದು, ಅವರ ಸೂಚನೆಯಂತೆ ಮುಂದಿನ ಕ್ರಮವನ್ನು ನಂತರದಲ್ಲಿ ಕೈಗೊಳ್ಳಲಾಗುವುದು ಎಂದರು.
ಕಾರ್ಯಾಚರಣೆಯಲ್ಲಿ ಡಿ.ವೈ.ಎಸ್.ಪಿಗಳಾದ ಕೃಷ್ಣಯ್ಯ, ಮಾಲತೀಶ್, ಹಾಗೂ ಪೆÇಲೀಸ್ ನಿರೀಕ್ಷಕರುಗಳಾದ ಉಮೇಶ್, ಜಯರತ್ನ, ರೂಪಶ್ರೀ, ರವಿಕುಮಾರ್ ಹಾಗೂ ಮೈಸೂರು, ಲೋಕಾಯುಕ್ತ ಪೆÇಲೀಸ್ ಠಾಣೆಯ ಸಿಬ್ಬಂದಿಯವರುಗಳು ಪಾಲ್ಗೊಂಡಿದ್ದರು.