ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಪೇಠಶಿರೂರ್ ಪ್ರೌಢಶಾಲೆ ವಿದ್ಯಾರ್ಥಿ ವಿಜಯಪತಾಕೆ
ಕಲಬುರಗಿ:ಮಾ.06: ಮಕ್ಕಳಲ್ಲಿ ಒಂದಿಲ್ಲ ಒಂದು ಸೂಕ್ತವಾದ ಪ್ರತಿಭೆಗಳು ಅಡಗಿರುತ್ತವೆ. ಇಂತಹ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಒಂದಿಲ್ಲ ಒಂದು ದಿನ ತಮ್ಮ ಈ ಪ್ರತಿಭೆಯಿಂದಲೇ ಬದುಕನ್ನು ಕಟ್ಟಿಕೊಳ್ಳಬಹುದು. ಇಂತಹ ಅನೇಕ ಪ್ರತಿಭೆಗಳನ್ನು ಗುರುತಿ ಜಿಲ್ಲೆಯ ಪೇಠ ಶಿರೂರಿನ ಸರ್ಕಾರಿ ಪ್ರೌಢಶಾಲೆಯು ಪ್ರೋತ್ಸಾಹಿಸುತ್ತಿದೆ. ಫ್ರೌಢಶಾಲೆ. ತಾಲ್ಲೂಕು ಮಟ್ಟದ ಸ್ಪರ್ಧೆಗಳು, ರಾಜ್ಯಮಟ್ಟದ ಸ್ಪರ್ಧೆಗಳು, ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಪ್ರತಿ ವರ್ಷ ಪ್ರಶಸ್ಥಿ ಪಡೆದುಕೊಂಡು ಬರುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಆ ಶಾಲೆ ಮುಖ್ಯಗುರುಗಳು, ಸಹ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದ ಸಹಾಯ ಸಹಕಾರದಿಂದ ವಿದ್ಯಾರ್ಥಿಗಳು ಈ ಮಟ್ಟದಲ್ಲಿ ಗುರುತಿಸಿಕೊಳ್ಳುವಲ್ಲಿ ಕಾರಣರಾಗಿದ್ದಾರೆ.
ಪ್ರತಿಭಾ ಕಾರಂಜಿಯಲ್ಲಿ ಸತತವಾಗಿ ಮೂರು ಬಾರಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದರೆ. ಈ ಬಾರಿ ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂದ್ದಾರೆ. ಕಳೆದ ಸಾಲಿನಲ್ಲಿ ಬಣ್ಣದ ಮನೆ ಸಾಂಸ್ಕ್ರತಿಕ ಸಂಸ್ಥೆ ಗದಗನಲ್ಲಿ ನಡೆದಿರುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ 10ನೇ ತರಗತಿ ವಿಧ್ದಾರ್ಥಿ ವಿನೋದ್ ಶಿವಲಿಂಗಪ್ಪ ರಾಜ್ಯಮಟ್ಟದ ಸ್ಫರ್ದೆಯಲ್ಲಿ ವಿಜೇತನಾಗಿದ್ದ. ಪ್ರಸಕ್ತ ಸಾಲಿನ ಇದೇ ಸಂಸ್ಥೆ ನಡೆಸುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ 10ನೇ ತರಗತಿ ವಿದ್ಯಾರ್ಥಿ ಶ್ರೀಕಾಂತ್ ರವಿ ವಿಜೇತನಾಗಿದ್ದು, ಇಡೀ ಶಾಲೆ ಹೆಮ್ಮೆ ಪಡುವ ಸಂಗತಿಯಾಗಿದೆ.
ಇಂತಹ ಮಕ್ಕಳ ಪ್ರತಿಭೆಯ ಅನಾವರಣಕ್ಕೆ ಕಾರಣಕರ್ತರಾದ ಶಾಲೆಯ ಚಿತ್ರಕಲಾ ಶಿಕ್ಷಕ ಸೂರ್ಯಕಾಂತ್ ನಂದೂರ್ ಅವರ ಪರಿಶ್ರಮ ಬಹಳ ದೊಡ್ಡದು. ನಿರಂತರವಾಗಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸುತ್ತಿರುವ ನಂದೂರವರು ಶಾಲೆಯಲ್ಲಿ ಬಹುದೊಡ್ಡ ಗ್ಯಾಲರಿ ಹಾಗೂ ಸಮುದಾಯದ ಪ್ರೋತ್ಸಾಹದಿಂದ ಮಾತ್ರ ಸಾಧ್ಯ ಎಂದು ಚಿತ್ರಕಲಾ ಶಿಕ್ಷಕ ಹಾಗೂ ಸ್ವತ: ಕಲಾವಿದರು ಆದ ಸೂರ್ಯಕಾಂತ್ ನಂದೂರ್ ಅವರ ಅಭಿಪ್ರಾಯವಾಗಿದೆ. ಶ್ರೀಕಾಂತ್ ರವಿ ನಮ್ಮ ಶಾಲೆಗೆ ಗ್ರಾಮಕ್ಕೆ ಕೀರ್ತಿ ತಂದಿರುವುದಕ್ಕೆ ಮುಖ್ಯ ಗುರುಗಳು, ಸಹ ಶಿಕ್ಷಕರು ವಿದ್ಯಾರ್ಥಿಗಳು ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಹರ್ಷವ್ಯಕ್ತಪಡಿಸಿದ್ದಾರೆ.