ಕೆವಿಕೆ ವೈಜ್ಞಾನಿಕ ಸಲಹಾ ಸಮಿತಿ
ಕಲಬುರಗಿ:ಮಾ.6:ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ ವೈಜ್ಞಾನಿಕ ಸಲಹಾ ಸಮಿತಿ ಸಭೆಯಲ್ಲಿ ಜಿಲ್ಲೆಯ ಪ್ರಗತಿಗಾಗಿ ಹಾಗೂ 2024ರ ಕೃಷಿ ವಿಸ್ತರಣಾ ಕೈಗೊಳ್ಳಬೇಕದ ಚಟುವಟಿಕೆಗಳ ಸಭೆ ನಡೆಯಿತು. ಕೃಷಿ ತಂತ್ರಜ್ಞಾನ ಪ್ರಯೋಗ ಕಾಲಕಾಲಕ್ಕೆ ಮಾರ್ಪಾಡು, ಗ್ರಾಮೀಣ ಕೃಷಿ ಮತ್ತು ಅರ್ಥಿಕ ಸ್ಥಿತಿ ಅಧ್ಯಯನ, ನೂತನ ಅವಿಷ್ಕಾರಗಳು, ತಂತ್ರಜ್ಞಾನಗಳು ರೈತರಿಗೆ ತಲುಪಿಸುವ ರೀತಿ ನೀತಿಗಳು, ಶುದ್ದ ಹಾಲು ಮತ್ತು ಬೇಸಿಗೆಯಲ್ಲಿ ಮೇವಿನ ಲಭ್ಯತೆ, ಬೆಳೆ ಸ್ಥಿತಿ, ಡ್ರೋನ್ ತಂತ್ರಜ್ಞಾನ, ಅಲಂಕಾರಿಕೆ ಮೀನುಗಾರಿಕೆ ಮತ್ತು ಜಲಾನಯನ ಮೀನುಗಾರಿಕೆ, ಪರಿಸರ ಮತ್ತು ಸಾಮಾಜಿಕ ಅರಣ್ಯ, ಮಣ್ಣು ನೀರು ಸಂರಕ್ಷಣೆ, ಸುರಕ್ಷಿತ ತೋಟಗಾರಿಕೆ, ತೊಗರಿ ಹೊಟ್ಟು ಸಾವಯವ, ತ್ಯಾಜ್ಯ ಸದ್ಬಳಕೆ, ಮಳೆಯಾಶ್ರಿತ ತೊಗರಿ ನೆಟೆರೋಗ ನರೋಧಕ ತೊಗರಿ ಬೀಜೋತ್ಪಾದನೆ, ರೈತ ಉತ್ಪಾದಕ ಸಂಸ್ಥೆಗಳಿಗೆ ಗುಣಮಟ್ಟದ ತರಬೇತಿ, ರೇಷ್ಮೆ ಕೃಷಿ, ಸೋಲಾರ ಸೌರಶಕ್ತಿ ಕೃಷಿ ಪಂಪುಗಳ ಬಳಕೆ, ಸೋಲಾರ ಬೇಲಿ, ಕೃಷಿ ಬೆಳೆಗಳಿಗೆ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ಹಂದಿ ಕಾಟ ನಿರ್ವಹಣೆ, ಸ್ವಾವಲಂಬಿ ಕೃಷಿ, ತೇಲಾಂಗಾಣ ಮಾದರಿಯಲ್ಲಿ ಕರಿ ಎಳ್ಳು ಕೃಷಿ, ಸಜ್ಜೆ ಮತ್ತು ಸಿರಿಧಾನ್ಯಗಳು ಉತ್ಪನ್ನಗಳ ಬಳಕೆ, ಸೆಕೆಂಡರಿ ಕೃಷಿ, ಹೈಡ್ರೋಪೋನಿಕ್ಸ್, ಮಾರುಕಟ್ಟೆ ಮಾಹಿತಿ, ಕೃಷಿಯಲ್ಲಿ ಕೂಲಿ ಕಾರ್ಮಿಕರ ಕೊರತೆ ನೀಗಿಸಲು ಹೊಸ ಯಂತ್ರೋಪಕರಣಗಳ ಬಳಕೆ, ರೇಡಿಯೋ ಕೃಷಿ ಕಾರ್ಯಕ್ರಮಗಳಿಗೆ ತಜ್ಞರ ಸಮಿತಿ ರಚನೆ, ಹವಾಮಾನ ಸಲಹೆ ಆಧಾರಿತ ಗ್ರಾಮೀಣ ಕೃಷಿ ಕುರಿತು ಚರ್ಚೆ ನಡೆಯಿತು. ಕಾರ್ಯಕ್ರಮದಲ್ಲಿ ಡಾ. ಎಸ್.ಬಿ. ಗೌಡಪ್ಪ, ವಿಸ್ತರಣಾ ನಿರ್ದೇಶಕರು, ಕೃ.ವಿ.ವಿ, ರಾಯಚೂರು ಇವರು ಅಧ್ಯಕ್ಷತೆಯನ್ನು ವಹಿಸಿ ನೂತನ ತಂತ್ರಜ್ಞಾನವನ್ನು ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಗ್ರಾಮಗಳಿಗೂ ಹಾಗೂ ವಿಸ್ತರಣಾ ಕಾರ್ಯಕರ್ತರಿಗೆ ತಲುಪಲು ಹೊಸ ಡಿಜಿಟಲ್ ಕೃಷಿ ತಂತ್ರಜ್ಞಾನದ ಮೂಲಕ ಆಧುನೀಕರಣಗೊಳಿಸಲಾಗುದೆಂದು ಹೇಳಿದರು. ಆಟಾರಿ, ಬೆಂಗಳೂರಿನ ಮುಖ್ಯ ತಾಂತ್ರಿಕ ಅಧಿಕಾರಿಗಳಾದ ಡಾ. ಮಲ್ಲಿಕಾರ್ಜುನ ಬಿ. ಹಂಜಿ ರವರು ಮಾತನಾಡಿ ಕೃಷಿ ವಿಸ್ತರಣಾ ಚಟುವಟಿಕೆಗಳು ಕಾಲಕಾಲಕ್ಕೆ ಹವಾಮಾನಕ್ಕೆ ತಕ್ಕಂತೆ ಅವಿಷ್ಕಾರ ಮತ್ತು ತಂತ್ರಜ್ಞಾನಗಳ ಲಭ್ಯತೆ ಮೇರೆಗೆ ಗ್ರಾಮೀಣ ರೈತರಿಗೆ ತಲುಪಲಿ ಎಂದು ತಿಳಿಸಿದರು. ಡಾ. ರಾಜು ಜಿ. ತೆಗ್ಗೆಳ್ಳಿ, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಕೆವಿಕೆ, ಕಲಬುರಗಿ ಇವರು ಪ್ರಗತಿ ವರದಿಯನ್ನು ಮಂಡಿಸಿದರು. ಡಾ. ಬಿ.ಎಂ. ದೊಡಮನಿ, ಸಹ ಸಂಶೋಧನಾ ನಿರ್ದೇಶಕರು, ಡಾ. ಎ.ಆರ್. ಕುರಬರ್, ಸಹ ವಿಸ್ತರಣಾ ನಿರ್ದೇಶಕರು, ಡಾ. ಎಂ.ಎಂ. ಧಾನೋಜಿ, ಡೀನ್ (ಕೃಷಿ), ಡಾ. ಎನ್. ಎ. ಪಾಟೀಲ್, ವಿಸ್ತರಣಾ, ನಿರ್ದೇಶಕರು, ಕ.ಪ.ಪಮೀ.ವಿ.ವಿ, ಬೀದರ್, ಶ್ರೀ ಸೋಮಶೇಖರ ರೂಳಿ, ಕಾರ್ಯಕ್ರಮ ಸಂಯೋಜಕರು, ಆಕಾಶವಾಣಿ, ಕೃಷಿ ಇಲಾಖೆ, ಕಲಬುರಗಿ ಸಹಾಯಕ ಕೃಷಿ ಕೃಷಿ ನಿರ್ದೇಶಕ, ಡಾ. ಶರಣಕುಮಾರ, ಶ್ರೀ ಲೋಹಿತ್ ನಬಾರ್ಡ (ಡಿಡಿಎಮ್), ಉದ್ಯಮಿ, ಶ್ರೀ ಸಂತೋಷ ಜವಳಿ, ತೋಟಗಾರಿಕಾ ಅಧಿಕಾರಿ, ಶ್ರೀ ಮಹ್ಮದ್ ಸಮಿಯುದ್ದಿನ್, ಅತ್ಮ ಡಿಪಿಡಿ ನಿಖೀಲ್ ಕೆ, ಪಶು ಇಲಾಖೆಯ ಉಪ ನಿರ್ದೇಶಕರು, ಡಾ. ಎಸ್.ಡಿ. ಅವಟೆ, ಮೀನುಗಾರಿಕೆ ಇಲಾಖೆಯ ಶ್ರೀ ನಾಗರಾಜ್ ಎಸ್.ಆರ್, (ಉಪನಿರ್ದೇಶಕರು), ಡಾ. ಡಿ.ಕೆ. ಹಾದಿಮನಿ, ರೇಷ್ಮೆ ವಿಭಾಗದ ಮುಖ್ಯಸ್ಥರು, ಡಾ. ವಿ. ಹನುಮಂತ ನಾಯಕ್, ತಾಂತ್ರಿಕ ಅದಿಕಾರಿಗಳು, ಕೃ.ವಿ.ವಿ, ರಾಯಚೂರು, ಶ್ರೀ ಜಿ.ಕೆ ವೆಂಕಟೇಶ್, ವ್ಯವಸ್ಥಾಪಕರು (ಕೃಷಿ ಮಾರಾಟ ಮಂಡಳಿ), ಕಲಬುರಗಿ, ಶ್ರೀ ಸಂತೋಷ ಬುಡಗಿ, ಸಹಾಯಕ ಕಾರ್ಯದರ್ಶಿ, ಎಪಿಎಮ್‍ಸಿ, ಕಲಬುರಗಿ, ಬೀಜಾಧಿಕಾರಿಗಳಾದ ಶ್ರೀ ಬಸಯ್ಯ ಹಿರೇಮಠ, ಶ್ರೀ ಮುದುಕಪ್ಪಾ ಎ. ದೇವನಾಳ, ಉಪ ವ್ಯವಸ್ಥಾಪಕರು, ಕೆ.ಎಸ್.ಎಸ್.ಸಿ, ಪ್ರಗತಿಪರ ರೈತರಾದ ಶ್ರೀ ಲಕ್ಷ್ಮಿಕಾಂತ ಹಿಬಾರೆ, ಶ್ರಿ ಮಲ್ಲಿನಾಥ ಮೇಳಕುಂದಾ, ಶ್ರೀ ಶರಣಬಸಪ್ಪಾ ಪಾಟೀಲ್, ಶ್ರೀ ಬಾಬುರಾವ ಪಟ್ಟಣ ಮತ್ತು ಶಿವಶಣಪ್ಪ ಟೋಪನ್ ರವರು ಉಪಸ್ಥಿತರಿದ್ದರು. ಡಾ. ಜಹೀರ್ ಅಹೆಮದ್, ವಿಜ್ಞಾನಿ (ಸಸ್ಯರೋಗಶಾಸ್ತ್ರ) ಕವಿಕೆ, ಕಲಬುರಗಿ ರವರು ಕಾರ್ಯಕ್ರಮದ ವಂದನಾರ್ಪಣೆಯನ್ನು ಮಾಡಿದರು. ವಿಜ್ಞಾನಿಗಳಾದ ಡಾ. ಯುಸುಪ್‍ಅಲಿ, ಅ. ನಿಂಬರಗಿ, ಡಾ. ಶ್ರೀನಿವಾಸ ಬಿ.ವಿ, ಡಾ. ಬಸವರಾಜ ಕೆ, ತಾಂತ್ರಿಕ ಅಧಿಕಾರಿಗಳಾದ ಶ್ರೀ ಸಿದ್ದು ಮಣಿಗೆ, ಶ್ರೀ ನಾಗಿಂದ್ರ ಬಡದಾಳಿ, ಶ್ರೀಮತಿ ಶಶಿಕಕಲಾ ಮೂಲಗೆ, ಶ್ರೀ ನಾಗಣ್ಣಾ, ನಿಕ್ರಾ ಯೋಜನೆಯ (ಎಸ್‍ಆರ್‍ಎಫ್), ವಿಜಯಸಿಂಗ್ ರವರು ಉಪಸ್ಥಿತರಿದ್ದರು.