ಮಾ.10ರಂದು ದ್ವಿತೀಯ ಸರ್ವಧರ್ಮ ಸಮ್ಮೇಳನ
ಬೀದರ್:ಮಾ.6: ಈ ತಿಂಗಳ 10ರಂದು ರವಿವಾರ ಬೆಳಿಗ್ಗೆ 11.30 ಗಂಟೆಗೆ ನಗರದ ಕರ್ನಾಟಕ ಸಾಹಿತ್ಯ ಸಂಘದ ಅವರಣದಲ್ಲಿ ದೇಶದಲ್ಲಿ ಶಾಂತಿ, ಸಮಾನತೆ, ಸಹೋದರತೆ ಹಾಗೂ ಭಾತೃತ್ವ ಭಾವ ಗಟ್ಟಿಗೊಳಿಸಲು ಕರ್ನಾಟಕ ಪ್ರಜಾ ಶಕ್ತಿ ಸಮಿತಿ ವತಿಯಿಂದ ದ್ವಿತೀಯ ಸರ್ವಧರ್ಮ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಇತ್ತಿಚೀಗೆ ನಗರದ ಅಂಬೇಡ್ಕರ್ ವೃತ್ತದ ಬಳಿಯ ಅತಿಥಿಗೃಹದಲ್ಲಿ ಸಭೆ ಸೇರಿ ಕಾರ್ಯಕ್ರಮದ ರೂಪರೇಷ ಸಿದ್ದಪಡಿಸಲಾಯಿತು. ಹಾಗೇ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಉದ್ದೇಶದಿಂದ ಪ್ರಚಾರ ಸಾಮಗ್ರಿಗಳು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮಕ್ಕೆ ವಿಶೇಷವಾಗಿ ಯುವ ವಿಚಾರವಾದಿ ಹಾಗೂ ಹೋರಾಟಗಾರ್ತಿ ನಜ್ಮಾ ನಜೀರ್ ಚಿಕ್ಕನೆರಳೆ ಹಾಗೂ ಕರ್ನಾಟಕ ಪ್ರಜಾ ಶಕ್ತಿ ಸಮಿತಿಯ ರಾಜ್ಯಾಧ್ಯಕ್ಷರಾದ ಜೆ.ಪಿ ವಿಶ್ವನಾಥ ಸೇರಿದಂತೆ ಜಿಲ್ಲೆಯ ಎಲ್ಲ ಧರ್ಮಗುರುಗಳು ಮತ್ತು ಗಣ್ಯವ್ಯಕ್ತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಮಿತಿಯ ಜಿಲ್ಲಾಧ್ಯಕ್ಷ ಸಾಯಿ ಶಿಂಧೆ ಸಭೆಯಲ್ಲಿ ಮಾಹಿತಿ ನೀಡಿದರು.
ಸಭೆಯಲ್ಲಿ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಮಹೇಂದ್ರಕುಮಾರ ಹೊಸಮನಿ, ಕರ್ನಾಟಕ ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ನಿಗ್ರಹ ಸಮಿತಿ ಜಿಲ್ಲಾಧ್ಯಕ್ಷ ಸಂಗಮೇಶ ಭವಿದೊಡ್ಡಿ ಕರ್ನಾಟಕ ಪ್ರಜಾ ಶಕ್ತಿ ಸಮಿತಿಯ ಇತರೆ ಪದಾಧಿಕಾರಿಗಳಾದ ರಮೇಶ್ ಪಾಸ್ವನ, ನಿತೀಶ್ ಸಾಕ್ಪಾಲ್, ವಿನೋದ ಶಿಂದೆ, ಧನರಾಜ ಮೇತ್ರೆ, ಗುರು ನೇಮತಾಬಾದ್, ಪುಟ್ಟು ಚತುರೆ, ವಿಶಾಲ್ ಶಿವಾನಂದ ಹಾಗೂ ಇತರರು ಉಪಸ್ಥಿತರಿದ್ದರು.