ಜೂಜಾಟ: 6 ಜನರ ಬಂಧನ, 47 ಸಾವಿರ ರೂ.ಜಪ್ತಿ
ಕಲಬುರಗಿ,ಮಾ.6-ರೋಜಾ ಪೊಲೀಸ್ ಠಾಣೆ ವ್ಯಾಪ್ತಿಯ ಹರಳಯ್ಯ ಸಮಾಜ ಗುಡಿಯ ಹಿಂದುಗಡೆ ಇರುವ ಬಡಾವಣೆಯ ಸಾರ್ವಜನಿಕ ರಸ್ತೆ ಪಕ್ಕದಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಕಲಬುರಗಿ ಉತ್ತರ ಉಪ ವಿಭಾಗದ ಎಸಿಪಿ ಚಂದ್ರಶೇಖರ ಡಿ ಮತ್ತು ಸಿಬ್ಬಂದಿ ದಾಳಿ ನಡೆಸಿ 6 ಜನರನ್ನು ಬಂಧಿಸಿದ್ದಾರೆ.
ಸದಾಶಿವ ಮರ್ತೂರಕರ್, ಅಶೋಕ ಮರ್ತೂರಕರ್, ಬಸವರಾಜ ಮರ್ತೂರಕರ್, ರಾಜು ಬೆಣ್ಣೂರ, ಸೈಯದ್ ಯೂಸುಫ್, ಮಲ್ಲಿಕಾರ್ಜುನ ಹಿಪ್ಪರಗಿ ಎಂಬುವವರನ್ನು ಬಂಧಿಸಿ 47000 ರೂ.ನಗದು 52 ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ. ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.