ಹರಳುಮುತ್ತು ಅಲಂಕೃತ 15 ಅಡಿ ಶಿವಲಿಂಗ ಸ್ಥಾಪನೆ
ಕಲಬುರಗಿ.ಮಾ.6: ಮಹಾಶಿವರಾತ್ರಿ ನಿಮಿತ್ಯ ಸೇಡಂ ರಸ್ತೆ ಗೀತಾನಗರದ ಪ್ರಜಾಪಿತ ಬ್ರಹ್ಮಕುಮಾರಿಯರ ಈಶ್ವರೀಯ ವಿಶ್ವವಿದ್ಯಾಲಯ ಅಮೃತ ಸರೋವರ ರಿಟ್ರೀಟ್ ಸೆಂಟರ್ ಆವರಣದಲ್ಲಿ 12 ಅಡಿ ಎತ್ತರ ವೇದಿಕೆ ಮೇಲೆÀ ಸಾವಿರಾರು ಹರಳು ಮುತ್ತುಗಳಿಂದ ಅಲಂಕೃತ 15 ಅಡಿ ಎತ್ತರದ ಶಿವಲಿಂಗವನ್ನು ಸ್ಥಾಪಿಸಲಾಗಿದೆ.
ಅಲ್ಲದೆ ಹನ್ನೆರಡು ಜ್ಯೋತಿರ್ಲಿಂಗಗಳನ್ನು ಬಹು ಸುಂದರವಾಗಿ ಅಲಂಕರಿಸಲಾಗಿದೆ. ಇದನ್ನುವೀಕ್ಷಿಸಲು ಸುಮಾರು 5 ಲಕ್ಷ ಜನ ಬರುವ ನಿರೀಕ್ಷೆ ಇದೆ.ಇದಲ್ಲದೆ ಈ ವರ್ಷ ಶಿವರಾತ್ರಿ ಹಾಗೂ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆ ಒಟ್ಟಿಗೆ
ಬಂದಿರುವದರಿಂದ ಈ ವರ್ಷ ಪರಿವರ್ತನೆಗಾಗಿ ಪರಮಾತ್ಮನ ಶಕ್ತಿಯಿಂದ ಮಹಿಳೆಯರ ಸಶಕ್ತಿಕರಣ ಕುರಿತು ಸಾರ್ವಜನಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಾರ್ವಜನಿಕರು ಇದರ ಲಾಭ ಪಡೆಯಬೇಕೆಂದು ಕಲಬುರ್ಗಿ ವಲಯ ಮುಖ್ಯಸ್ಥರಾದ ರಾಜಯೋಗಿನಿ ಬಿ ಕೆ ವಿಜಯಾದೀದಿ ಅವರು ವಿನಂತಿಸಿದ್ದಾರೆ.