ಜಿಲ್ಲೆಯ ಶಾಶ್ವತ ನೀರಾವರಿಗಾಗಿ ಆಲಮಟ್ಟಿ 524.256 ಮೀಟರ್‍ಗೆ ಎತ್ತರಿಸಲು ಮನವಿ
ವಿಜಯಪುರ:ಮಾ.6:ಭಾರತೀಯ ಕಿಸಾನ ಸಂಘ ಕರ್ನಾಟಕ ಪ್ರದೇಶ ಕರ್ನಾಟಕ ಉತ್ತರ ಪ್ರಾಂತ ವಿಜಯಪುರ ಜಿಲ್ಲೆ ವತಿಯಿಂದ ಜಿಲ್ಲೆಯ ಎಲ್ಲ ಕೆರೆ ತುಂಬುವದು. ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ 2-3ನೇ ಹಂತದ ಕಾಮಗಾರಿ ಟೆಂಡರ್ ಕರೆಯುವುದು ಹಾಗೂ ಜಿಲ್ಲೆಯ ಶಾಶ್ವತ ನೀರಾವರಿಗಾಗಿ ಆಲಮಟ್ಟಿ 524.256 ಮೀಟರ್‍ಗೆ ಎತ್ತರಿಸಲು ಜಿಲ್ಲಾಧಿಕಾರಿಗಳಾದ ಟಿ.ಭೂಬಾಲನ ಅವರಿಗೆ ಮನವಿ ಸಲ್ಲಿಸಿದರು.
ಭಾರತೀಯ ಕಿಸಾನ ಸಂಘ ಕರ್ನಾಟಕ ಪ್ರದೇಶ ಕರ್ನಾಟಕ ಉತ್ತರ ಪ್ರಾಂತ ಜಿಲ್ಲಾಧ್ಯಕ್ಷ ಮಲ್ಲನಗೌಡ ಮಹಾದೇವಗೌಡ ಪಾಟೀಲ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಮಳೆಯ ಅಭಾವದಿಂದ ಹಾಗೂ ಬರಗಾಲದ ಬವಣೆಯಿಂದ ಜಿಲ್ಲೆಯ ರೈತರು ತತ್ತರಿಸಿದ್ದು ಹಾಗೂ ಜನ ಜಾನುವಾರುಗಳಿಗೆ ಮೇವಿನ ಕೊರತೆ ಹಾಗೂ ಜನರು ಗುಳೆ ಹೋಗುವುದು ನಿಲ್ಲದಂತಾಗಿದೆ. ಅಲ್ಲದೇ ಬಹು ವಾರ್ಷಿಕ ತೋಟಗಾರಿಕಾ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ, ಲಿಂಬೆ, ಮಾವು, ತೆಂಗು ಮುಂತಾದ ಬೆಳೆಗಳು ನಶಿಸಿ ಹೋಗುತ್ತಿರುವುದು ತುಂಬಾ ಖೇದಕರ ಸಂಗತಿ. ಇದರಿಂದ ರೈತ ದಿಕ್ಕೇ ತೋಚದಂತಾಗಿದೆ. ಜಿಲ್ಲೆಯಲ್ಲಿ ದೊಡ್ಡ ಆಣೆಕಟ್ಟು ಇದ್ದು, ಸರಿಯಾದ ಸಮಯಕ್ಕೆ ಕೆರೆಗಳಿಗೆ ಸಂಪೂರ್ಣ ನೀರು ತುಂಬದೇ ಇರುವುದರಿಂದ, ಇಂದಿನ ಈ ದುಸ್ಥಿತಿಗೆ ಕಾರಣವಾಗಿದೆ. ಸರಕಾರ ಕೂಡಲೆ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.
ಭಾರತೀಯ ಕಿಸಾನ ಸಂಘ ಕರ್ನಾಟಕ ಪ್ರದೇಶ ಕರ್ನಾಟಕ ಉತ್ತರ ಪ್ರಾಂತ ರಾಜ್ಯ ಉಪಾಧ್ಯಕ್ಷರು ಗುರುನಾಥ ಬಗಲಿ ಮಾತನಾಡಿ, ವಿಜಯಪುರ ಜಿಲ್ಲೆಯ ಎಲ್ಲ ಕೆರೆಗಳಿಗೆ ಹಾಗೂ ತಿಡಗುಂದಿ ಬ್ರಾಂಚ್ ಕೆನಾಲ್ ನಿಂದ 19 ಕೆರೆಗಳು ತುಂಬುವ ಕಾಮಗಾರಿ ಶೀಘ್ರವಾಗಿ ಕಾರ್ಯ ಮುಗಿಸಿ ಕೆರೆಗಳಿಗೆ ನೀರು ಹರಿಸುವುದು. ಶ್ರೀ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ 2-3ನೇ ಹಂತದ ಕಾಮಗಾರಿಗೆ ಟೆಂಡರ್ ಕರೆದು ಕಾಮಗಾರಿ ಆರಂಭಿಸಬೇಕು. ಜಿಲ್ಲೆಯ ಶಾಶ್ವತ ನೀರಾವರಿಗಾಗಿ ಆಲಮಟ್ಟಿ ಆಣೆಕಟ್ಟಿನ ಗೇಟುಗಳನ್ನು 524.256 ಮೀಟರ್‍ಗೆ ಎತ್ತರಿಸಿ ನೀರು ಸಂಗ್ರಹಿಸಬೇಕು ಹಾಗೂ ಸಂತ್ರಸ್ತರಿಗೆ ಯೋಗ್ಯ ಪರಿಹಾರ ಕೊಡಲು ಕ್ರಮ ಕೈಕೊಳ್ಳಬೇಕು. ವಿಜಯಪುರ ಜಿಲ್ಲೆಯ ತೋಟಗಾರಿಕಾ ಬೆಳೆಗಳಾದ. ದಾಕ್ಷಿ, ದಾಳಿಂಬೆ, ಲಿಂಬೆ, ಮಾವು, ತೆಂಗು ಮುಂತಾದ ಬೆಳೆಗಳು ಇಂದು ಒಣಗಿ ಬರಡಾಗುತ್ತಿವೆ. ಅಂತಹ ರೈತರ ನೆರವಿಗೆ ಸರ್ಕಾರ ನೆರವು ನೀಡಿ ಆತನ ಜೀವನಕ್ಕೆ ಸಹಕಾರ ಮಾಡಲು ಆಗ್ರಹ. ಟ್ರ್ಯಾಕ್ಟರ್‍ಗಳಲ್ಲಿ ಅಶ್ಲೀಲ ಗೀತೆಗಳನ್ನು ಏರು ಧ್ವನಿಯಲ್ಲಿ ಹಾಕಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿರುವವರ ವಿರುದ್ಧ ಪೆÇಲೀಸರು ಕ್ರಮ ಕೈಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ರಾಮಗೊಂಡ ಚವ್ಹಾಣ, ಈರಪ್ಪ ಗುಡಿಹಾಳ, ಚನ್ನಪ್ಪ ಮಿರಗಿ, ಚಿದಾನಂದ ಮದರಿ, ಶರಣಪ್ಪ ತಾರಪುರ, ಸಿದರಾಯ ತೇಲಿ, ಯಲ್ಲಪ್ಪ ಹೊಸಮನಿ, ಮಳಸಿದ್ದ ಹೊಸಮನಿ, ಪಪ್ಪು ದಡೇದ, ಗುರುಶಾಂತ ಟೆಂಗಳೆ, ಕಲ್ಲಪ್ಪ ಬುಕ್ಕಾಣಿ, ಪ್ರಕಾಶ ಹರಿಜನ, ಸುಧಾಕರ, ಸುಧೀರ ಪಾಟೀಲ, ಶ್ರೀಮಂತ ಕಣವಿ, ಸುರೇಶ ಬುಕ್ಕಾಣಿ, ರಾಯಣ್ಣ ಮಿರಗಿ, ಮತ್ತಿತರರು ಉಪಸ್ಥಿತರಿದ್ದರು.