ಯಾದಗಿರಿಯಲ್ಲಿ ಜೀ ಕನ್ನಡ ವಾಹಿನಿಯ ಸರಿಗಮಪ ಗ್ರಾಂಡ್ ಫಿನಾಲೆ
ಯಾದಗಿರಿ :ಮಾ.6: ಜೀ ಕನ್ನಡ ವಾಹಿನಿಯೂ ಸರಿಗಮಪ ಸಂಗೀತ ಕಾರ್ಯಕ್ರಮ ಸತತ 21 ವಾರಗಳಿಂದ ಕರುನಾಡನ್ನ ಸಂಗೀತದ ಅಲೆಯಲ್ಲಿ ತೇಲಿಸಿದ್ದ ಸರಿಗಮಪ ಸೀಸನ್-20 ಫಿನಾಲೆ ಹಂತವನ್ನ ತಲುಪಿದೆ.ವೀಕೆಂಡ್ ಆಯ್ತು ಅಂದ್ರೆ ಸಂಗೀತಾಭಿಮಾನಿಗಳನ್ನ ತನ್ನತ್ತ ಸೆಳೆಯುತ್ತಿದ್ದ ಈ ಸ್ವರಸಾಮ್ರಾಜ್ಯ ಈ ಭಾರಿ ದೇಶವಿದೇಶದ ಸಂಗೀತದ ಕಲಿಗಳನ್ನ ಒಂದೆಡೆ ಸೇರಿಸಿತ್ತು.
ಪ್ರತಿ ಸೀಸನ್ನಿನಂತೆ ಈ ಬಾರಿಯು ಹೊಸತನವನ್ನ ತನ್ನೊಳಗೆ ಇಟ್ಟುಕೊಂಡು ಬಂದಿದ್ದ ಈ ಕಾರ್ಯಕ್ರಮದ ಫಿನಾಲೆಯನ್ನ ಈ ಬಾರಿ ಗಾನಯೋಗಿ ಪುಟ್ಟರಾಜ ಗವಾಯಿಗಳು, ಗಂಗೂಬಾಯಿ ಹಾನಗಲ್ಲ,ಪಂಡಿತ್ ಭೀಮ್ ಸೇನ್ ಜೋಶಿಯರಂತಹ ದಿಗ್ಗಜರನ್ನ ಕರುನಾಡಿಗೆ ನೀಡಿದ ಉತ್ತರ ಕರ್ನಾಟಕದಲ್ಲಿ ಅದ್ದೂರಿಯಾಗಿ ಆಯೋಜಿಸಿದೆ.
ವಿಶ್ವದಾದ್ಯಂತದಿಂದ ಬಂದಿದ್ದ ಸಾವಿರಾರು ಪ್ರತಿಭೆಗಳ ನಡುವೆ 20 ಗಾನ ಕೋಗಿಲೆಗಳ ನಡುವೆ 21 ವಾರಗಳ ಪರೀಕ್ಷೆಯನ್ನ ಎದುರಿಸಿ ಫಿನಾಲೆ ಹಂತಕ್ಕೆ ತಲುಪಿರುವ 5 ಸ್ಪರ್ಧಿಗಳ ನಡುವೆ, ಈ ಬಾರಿ ಸರಿಗಮಪ ಸೀಸನ್- 20 ರ ಪಟ್ಟಕ್ಕಾಗಿ ಹಣಾಹಣಿ ನಡೆಯಲ್ಲಿದ್ದು ಫಿನಾಲೆ ಹಂತವನ್ನ ತಲುಪಿರುವ ಎಲ್ಲಾ ಸ್ಪರ್ಧಿಗಳು ಒಂದೊಂದು ವಿಭಾಗದಲ್ಲಿ ಪರಿಣಿತಿ ಹೊಂದಿದ್ದು, ಸ್ಪರ್ಧಿಗಳು ಇಷ್ಟು ದಿನ ಸ್ವರಸಂಸ್ಥಾನದಲ್ಲಿ ಕಲಿತ ಪಾಠವನ್ನ ಓರೆಗೆ ಹಚ್ಚುವ ಸಮಯ ಇದಾಗಿದೆ.
ಮಹಾಗುರುಗಳಾದ ಹಂಸಲೇಖ, ವಿಜಯ್ ಪ್ರಕಾಶ್ ಮತ್ತು ಅರ್ಜುನ್ ಜನ್ಯ ಮತ್ತು ಆಂಕರ್ ಅನುಶ್ರೀ ಸೇರಿದಂತೆ 6 ಜನ ಮೆಂಟರ್ಗಳ ಜೊತೆ ಇಡೀ ಸರಿಗಮಪ ತಂಡವೇ ಈ ಬಾರಿ ಉತ್ತರ ಕರ್ನಾಟಕಕ್ಕೆ ಬರಲಿದೆ.
ಸಾಕಷ್ಟು ವಿಶೇಷತೆಗಳ ನಡುವೆ 20 ಗಾಯಕ ಗಾಯಕಿರನ್ನ ತಿದ್ದಿ ತೀಡುವ ಕೆಲಸ ಮಾಡಿರುವ ಸರಿಗಮಪ ವೇದಿಕೆ ಈ ಬಾರಿ ಮತ್ತೊಮ್ಮೆ ಸ್ಯಾಂಡಲ್ ವುಡ್ಡಿಗೆ ಶ್ರೇಷ್ಟ ಗಾಯಕ ಗಾಯಕಿರನ್ನ ನೀಡುವ ಭರವಸೆಯನ್ನ ನೀಡಿದೆ.
ಈ ಎಲ್ಲಾ ವಿಶೇಷತೆಗಳ ನಡುವೆ ಸ್ವರಸಂಸ್ಥಾನದ ಗುರುಗಳಾದ ಕರುನಾಡಿನ ಮೆಲೋಡಿ ಕಿಂಗ್ ರಾಜೇಶ್ ಕೃಷ್ಣನ್ ಇದೇ ಮೊದಲ ಬಾರಿಗೆ ಯಾದಗಿರಿಯಲ್ಲಿ ನಡೆಯುತ್ತಿರುವ ಗ್ಯಾಂಡ್ ಫಿನಾಲೆ ವೇದಿಕೆಯನ್ನ ಅಲಂಕರಿಸಲ್ಲಿದ್ದಾರೆ.
5 ಸ್ಪರ್ಧಿಗಳ ನಡುವೆ ಒಂದು ಟ್ರೋಫಿಗಾಗಿ ಹಣಾಹಣಿ ನಡೆಯಲ್ಲಿದ್ದು,ಕರ್ನಾಟಕದ ಸ್ವರಸಾಮ್ರಾಜ್ಯದ ಹೊಸ ಧೃವತಾರೆ ಯಾರಾಗುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ಪಡೆಯಲು ಇದೇ ಫೆಬ್ರವರಿ 7 ರಂದು ಸಂಜೆ 5 ಗಂಟೆಗೆ ಜಿಲ್ಲಾ ಕ್ರೀಡಾಂಗಣ ಡಾನ್ ಬಾಸ್ಕೋ ಡಿಗ್ರಿ ಮತ್ತು ಬಿ.ಎಡ್ ಕಾಲೇಜು ಮುಂಭಾಗ,ಯಾದಗಿರಿಯಲ್ಲಿ ನಡೆಯುತ್ತಿರುವ ಸರಿಗಮಪ ಸೀಸನ್- 20 ರ ಫಿನಾಲೆಯನ್ನ ನೇರವಾಗಿ ವೀಕ್ಷಿಸುವ ಮುಖಾಂತರ ಪಡೆಯಬಹುದಾಗಿದೆ.
ಸೀಮಿತ ಆಸನಗಳ ವ್ಯವಸ್ಥೆಯಿದ್ದು ಮೊದಲು ಬಂದವರಿಗೆ ಆದ್ಯತೆ ಹಾಗು ಈ ಕಾಯಕ್ರಮದ ಪಾಸುಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ ಎಂದು ವಾಹಿನಿ ತಿಳಿಸಿದೆ.