ಸೌಹಾರ್ದ ಸಹಕಾರಿಗಳಿಂದ ಬದುಕು ಸುಂದರ:ಶಾಸಕ ನಾಡಗೌಡ
ತಾಳಿಕೋಟೆ:ಮಾ.6: ವಿಜಯಪುರ ಲಿಂಗಾಯತ ಡೌಲಫ್‍ಮೆಂಟ್ ಸೌಹಾರ್ದ ಸಹಕಾರಿ ಸಂಘ ನಿ, ಗ್ರಾಹಕರ ವಿಸ್ವಾಸಗಳಿಸುವದರೊಂದಿಗೆ ಮುನಡೆದಂತಹ ಈ ಸಂಸ್ಥೆಯ 8ನೇ ಶಾಖೆಯನ್ನು ತಾಳಿಕೋಟೆ ಪಟ್ಟಣದಲ್ಲಿ ಇಂದು ಉದ್ಘಾಟಿಸಿರುವದು ಸಂತಸತಂದಿದೆ ಎಂದು ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ಹೇಳಿದರು.
ಸೋಮವಾರರಂದು ಸ್ಥಳೀಯ ಬಸವೇಶ್ವರ ವೃತ್ತದ ಹತ್ತಿರ ದೊಡಮನಿ ಕಾಂಪ್ಲೇಕ್ಸ್‍ದಲ್ಲಿ ಏರ್ಪಡಿಸಲಾದ ಬಿಎಲ್‍ಡಿ ಸೌಹಾರ್ದ ಬ್ಯಾಂಕಿನ 8ನೇ ಶಾಖಾ ಕಚೇರಿ ಪ್ರಾರಂಬೋತ್ಸವದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಕಳೆದ ಒಂದೂವರೆ ವರ್ಷದಲ್ಲಿ ಗ್ರಾಹಕರ ವಿಸ್ವಾಸಗಳಿಸುವದರೊಂದಿಗೆ 225 ಕೋಟಿಗೂ ಅಧಿಕ ವೈಹಿವಾಟ ನಡೆಸಿದ ಈ ಬಿಎಲ್‍ಡಿ ಸೌಹಾರ್ದ ಸಂಸ್ಥೆಯು ಜನಪ್ರಿಯತೆ ಗಳಿಸಿಕೊಂಡಿದೆ ಈ ಸಮಾರಂಭದ ಅಧ್ಯಕ್ಷತೆ ವಹಿಸಿದ ಎಂಎಲ್‍ಸಿ ಸುನೀಲಗೌಡ ಪಾಟೀಲ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆಂದರು. ಸಾಲ ಪಡೆಯಲು ಠೇವಣಿಯನ್ನಿಡಲು ಬಹಳೇ ಆಲೋಚನೆ ಮಾಡಲಾಗುತ್ತದೆ ಸೌಹಾರ್ದ ಬ್ಯಾಂಕುಗಳು ಬಹಳೇ ವಿಸ್ವಾಸದಿಂದ ನಡೆತಕ್ಕಂತಹ ಬ್ಯಾಂಕುಗಳಾಗಿವೆ ವಿಶೇಷವಾಗಿ ವ್ಯವಹಾರ ಮಾಡುವವರಿಗೆ ಸಣ್ಣಪುಟ್ಟ ಉಳಿತಾಯ ಮಾಡಿಕೊಂಡು ಬ್ಯಾಂಕುಗಳಲ್ಲಿ ಠೇವಣಿ ಮಾಡಲು ಹೆಚ್ಚಿನ ಬಡ್ಡಿದರಕ್ಕಾಗಿ ಗ್ರಾಹಕರು ಅಪೇಕ್ಷೀಸುತ್ತಾರೆ ನ್ಯಾಶನಲ್ ಬ್ಯಾಂಕುಗಳಿಗಿಂತ ಸಹಕಾರಿ ಬ್ಯಾಂಕುಗಳಲ್ಲಿ ಅರ್ದ ಫರ್ಸೇಂಟ್ ಬಡ್ಡಿ ಹೆಚ್ಚಿಗೆ ದೊರೆಯುತ್ತದೆ ಎಂದರು. ಹೀಗಾಗಿ ಸಣ್ಣ ಪುಟ್ಟ ಉಳಿತಾಯ ಮಾಡಿ ಬ್ಯಾಂಕುಗಳಲ್ಲಿ ಇಡುವ ಹಣ ಏನೋ ಹೆಚ್ಚಿಗೆ ದೊರೆತೀತು ಎಂಬ ಆಸೆ ಯಾಗಿರುತ್ತದೆ ಬಡ್ಡಿಯ ಮೇಲೆ ಜೀವನ ಸಾಗಿಸಬಹುದು ವ್ಯಾಪಾರ ಮಾಡಬೇಕೆಂಬ ಆಲೋಚನೆಗಳು ಇರುತ್ತವೆ ಮುಖ್ಯವಾಗಿ ಇಂತಹ ಸೌಹಾರ್ದ ಬ್ಯಾಂಕುಗಳನ್ನು ನಡೆಸಿಕೊಂಡು ಹೋಗುವವರು ವಿಸ್ವಾಸದಾಯಕವಾಗಿದ್ದರಿಂದ ಪ್ರಗತಿ ಪಥದತ್ತ ಸಾಗಲು ಕಾರಣವಾಗಿದೆ ಎಂದು ಸಂಸ್ಥೆಯ ಎಂ.ಎಲ್.ಸಿ. ಸುನಿಲಗೌಡರ ಹಾಗೂ ಆಡಳಿತ ಮಂಡಳಿಯವರ ವಿಸ್ವಾಸದಾಯಕವಾದ ಸೇವಾ ಕಾರ್ಯ ಕುರಿತು ಹಾಗೂ ಅವರು ತಮ್ಮ ಹಿರಿಯರ ಮೇಲಿಟ್ಟ ಶ್ರದ್ದೆಯ ಕುರಿತು ಗುಣಗಾನ ಮಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಅವರು ಮಾತನಾಡಿ ಬಿಎಲ್‍ಡಿ ಸೌಹಾರ್ದ ಸಂಸ್ಥೆ ಪ್ರಾರಂಭ ಮಾಡಬೇಕೆನ್ನುವದು 10-15 ವರ್ಷಗಳ ಹಿಂದೆಯೇ ರೂಪರೇಶಗಳನ್ನು ಸಹೋದರ ಸಚೀವ ಎಂ.ಬಿ.ಪಾಟೀಲ ಅವರು ಹಾಕಿದ್ದರು ಆದರೆ ಅಂದು ಬರದ ಜಿಲ್ಲೆಯಾಗಿದ್ದ ಕಾರಣ ಕುಡಿಯುವ ನೀರು ಸಹ ಸಿಗದಂತಾಗಿತ್ತು ಮಹಾರಾಷ್ಟ್ರಕ್ಕೆ ಗುಳೆ ಹೋಗುವ ಕಾರ್ಯವೂ ಕೂಡಾ ನಡೆದಿತ್ತು ಈ ಕಾರಣದಿಂದಲೇ 2013 ರಿಂದ 18ರ ಸಾಲಿನಲ್ಲಿ ನೀರಾವರಿ ಕ್ರಾಂತಿಯಾಯಿತು ಆ ನೀರಾವರಿಯಿಂದ ನಮ್ಮ ವಿಜಯಪುರ ಜಿಲ್ಲೆ ಸಾಕಷ್ಟು ವ್ಯಾಪಾರ ವೈಹಿವಾಟು ಹೆಚ್ಚಿಸಿಕೊಂಡಿದೆ ಸಿದ್ದೇಶ್ವರ ಶ್ರೀಗಳು ನುಡಿದಂತೆ ವಿಜಯಪುರ ಜಿಲ್ಲೆಗೆ ಒಳ್ಳೆಯ ಹೆಸರಿದೆ ಒಳ್ಳೆಯ ಭೂಮಿಯನ್ನು ದೇವರು ಕೊಟ್ಟಿದ್ದಾರೆ ಅವರು ಹೇಳಿದಂತೆ ನೀರಿನ ವ್ಯವಸ್ಥೆಯನ್ನೂ ಕೂಡಾ ಮಾಡಲಾಗಿದೆ ನಮ್ಮ ಜಿಲ್ಲೆ ಕ್ಯಾಲಿಪೋರ್ನಿಯಾ ಯಾಗುತ್ತದೆ ಎಂಬುದನ್ನು ಶ್ರೀಗಳು ಹೇಳಿದ್ದರು ಜಿಲ್ಲೆಗೆ ನೀರಾವರಿ ಸೌಲಭ್ಯವಾಗಿದ್ದರಿಂದ ದ್ರಾಕ್ಷೀ ಬೆಳೆ ಸಕ್ಕರೆ ಖಾರ್ಕಾನೆಗಳಾಗಿವೆ ಈ ಮೊದಲು ಬಾಗಲಕೋಟ ಅಖಂಡ ಜಿಲ್ಲೆಒಳಗೊಂಡು 15 ಸಕ್ಕರೆ ಖಾರ್ಕಾನೆಗಳಿದ್ದವು ಸದ್ಯ ಸಕ್ಕರೆ ಖಾರ್ಕಾನೆಗಳ ಸಂಖ್ಯೆ ಗಣನೀಯವಾಗಿವೆ ಯಾವುದೇ ಉದ್ಯೋಗ ಸೃಷ್ಠಿಯಾಗಲು ರೈತರ ಹತ್ತಿರ ದುಡ್ಡು ಬೇಕು ಉತ್ತಮ ಬೆಳೆ ಬಂದಂತೆ ಕಪ್ಪಡ ಅಂಗಡಿ, ಕಿರಾಣಿ ಅಂಗಡಿ, ಹೋಟೇಲ್ ಇರಬಹುದು ಎಲ್ಲವೂಗಳ ವ್ಯಾಪಾರ ದ್ವಿಗುಣವಾಗಲಿದೆ ಎಂದರು.
ಶಾಖಾ ಕಚೇರಿ ಉದ್ಘಾಟಿಸಿ ಸಮಾರಂಭದ ದಿವ್ಯ ಸಾನಿದ್ಯ ವಹಿಸಿದ ಶ್ರೀ ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಶ್ರೀ ಸಿದ್ದಲಿಂಗ ದೇವರು ಮಾತನಾಡಿ ಬ್ರಿಟೀಷರ್ ಆಳ್ವಿಕೆಯಲ್ಲಿ ಈ ಹಿಂದೆ ಭಾರತ ದೇಶದಲ್ಲಿ ಅನೇಕ ಸೇತುವೆಗಳನ್ನು ನಾವು ಕಟ್ಟಿದ್ದೇವೆಂಬ ಅಹಂಭಾವನೆ ಬಿತ್ತಿ ಹೋದುದ್ದು ಬ್ರೀಟಿಷರದಾದರೆ ಭಾರತೀಯರ ಭಾವನೆಯು ಈ ಹಿಂದಿನಿಂದಲೂ ಏಷ್ಟೋ ಶತಮಾನಗಳ ಹಿಂದಿನಿಂದಲೂ ಮನಸ್ಸು ಮನಸ್ಸುಗಳ ನಡುವೆ ಸೇತುವೆ ಕಟ್ಟುವ ಕಾರ್ಯ ಮಾಡಿದ್ದಾಗಿದೆ ಭಾರತ ದೇಶದ ಮನುಸ್ಸುಗಳು ಮನೆ ಮನೆಗೆ ದೀಪ ಹಚ್ಚುವ ಕೆಲಸ ಮಾಡುತ್ತಾ ಸಾಗಿದೆ ಬೆಂಕಿ ಹಚ್ಚುವ ಕೆಲಸ ಮಾಡಿಲ್ಲಾ ಹೆಚ್ಚು ಹೆಚ್ಚು ಮನಸ್ಸ್ಸುಗಳ ಪ್ರೀತಿ ಪ್ರೇಮ ದೊಂದಿಗೆ ಈಗ ದೀಪ ಹಚ್ಚುವ ಕೆಲಸಕ್ಕೆ ಬಿಎಲ್‍ಡಿ ಸಂಸ್ಥೆ ಮುಂದಾಗಿರುವದು ಸಂತಸ ತಂದಿದೆ ಎಂದ ಶ್ರೀಗಳು ಇಂದು ಶ್ರೀ ಖಾಸ್ಗತಪ್ಪನ ನಾಡಿನಲ್ಲಿ ಬಿಎಲ್‍ಡಿ ಸೌಹಾರ್ದ ಬ್ಯಾಂಕು ಪ್ರಾರಂಬಿಸಿರುವದು ಎಲ್ಲರಿಗಾಗಿ ಎಂಬುದನ್ನು ಅರೀತುಕೊಂಡು ನಡೆಯಬೇಕೆಂದ ಶ್ರೀಗಳು ಸಾಲ ಮಾಡಿದರೆ ಸಾಲ ತೀರಿಸುವಂತಾಗಬೇಕು ಅಂದರೆ ಒಳ್ಳೆಯದು ಆದರೆ ಸಾಲದಿಂದ ಅವರೇ ತೀರಿ ಹೋಗಬಾರದು ಎಂದು ಏಚ್ಚರಿಸಿದ ಶ್ರೀಗಳು ಸಾಲಗಳನ್ನು ಬ್ಯಾಂಕುಗಳು ನೀಡುತ್ತವೆ ನಮ್ಮ ತೃಪ್ತಿ ಆಸೆ ತೀರುವಂತೆ ಬಧುಕು ಸಾಗಿಸಬೇಕೆಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಎಸ್..ಪಾಟೀಲ(ಯಾಳಗಿ ಅವರು ಮಾತನಾಡಿ ಯಾವುದೇ ಬ್ಯಾಂಕು ಬೆಳೆಯಬೇಕಾದರೆ ಅಲ್ಲಿಯ ಆಡಳಿತ ಮಂಡಳಿಯ ಮತ್ತು ಸಿಬ್ಬಂದಿಯವರ ವಿಸ್ವಾಸದಾಯಕ ಕಾರ್ಯವಾಗಿರಬೇಕು ಗ್ರಾಹಕರ ಮೇಲೆ ಪ್ರೀತಿ ವಿಸ್ವಾಸ ತೋರುತ್ತಾ ಸಾಗಿದರೆ ಬ್ಯಾಂಕುಗಳು ಬೆಳೆಯಲು ಸಾಧ್ಯವೆಂದ ಅವರು ಕೇವಲ 3 ತಿಂಗಳಲ್ಲಿ ಬಿಎಲ್‍ಡಿ ಸಂಸ್ಥೆಯ ಬ್ಯಾಂಕು 225ಕೋಟಿ ವ್ಯವಹಾರವನ್ನು ಮಾಡಿರುವದನ್ನು ನೋಡಿದರೆ ಇದು ಮುಂದಿನ ದಿನಮಾನಗಳಲ್ಲಿ ಉನ್ನತ ಸ್ಥಾನಮಾನಕ್ಕೇರಲಿದೆ ಎಂದರು.
ಬ್ಯಾಂಕಿನ ನಿರ್ದೇಶಕ ವಿಜಯಕುಮಾರ ಕನಮಡಿ ಪ್ರಾಸ್ಥಾವಿಕ ಮಾತನಾಡಿದರು.
ಈ ಸಮಯದಲ್ಲಿ ಅಸ್ಕಿ ಪೌಂಡೇಶನ್ ಅಧ್ಯಕ್ಷ ಕಾಂಗ್ರೇಸ್ ಮುಖಂಡ ಸಿ.ಬಿ.ಅಸ್ಕಿ, ರಾಯನಗೌಡ ತಾತರಡ್ಡಿ, ಜಿಪಂ ಮಾಜಿ ಸದಸ್ಯ ಶಿವಾನಂದ ದೇಸಾಯಿ, ಸಂತೋಷ ದೊಡಮನಿ, ಬಿ.ಎನ್.ಹಿಪ್ಪರಗಿ, ಬಿ.ಎ.ಶಿಂದೆ, ಎಂ.ಎಸ್.ಸರಶೆಟ್ಟಿ, ಚಿಂತಪ್ಪಗೌಡ ಯಾಳಗಿ, ವಿಶ್ವನಾಥ ಬಿದರಕುಂದಿ, ಕೆ.ಎಚ್.ಮೂಕೀಹಾಳ, ಬಿ.ಎಸ್.ಇಸಾಂಪೂರ, ನಾಗಪ್ಪ ಚಿನಗುಡಿ, ಶ್ರೀಮತಿ ಅಕ್ಕಮಹಾದೇವಿ ಕಟ್ಟಿಮನಿ, ಎಂ.ಎಸ್.ನಾಗರಾಳ, ವಿರೇಶಗೌಡ ಅಸ್ಕಿ, ಮೊದಲಾದವರು ಉಪಸ್ಥಿತರಿದ್ದರು.