ಮಾನವ ಏಕತಾ ಧರ್ಮಸಭೆ ; ಲಕ್ಷ ದೀಪೋತ್ಸವ
ತಾಳಿಕೋಟೆ:ಮಾ.6: ತಾಲೂಕಿನ ಪಡೇಕನೂರ ಗ್ರಾಮದ ಶ್ರೀ ದಾಸೋಹ ವಿರಕ್ತಮಠದ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀ ಮಠದ ಪೀಠಾಧಿಶರಾದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳ ಅಪ್ಪಣೆಯ ಮೇರೆಗೆ ಮಾನವ ಏಕತಾ ಧರ್ಮಸಭೆ ಹಾಗೂ ಲಕ್ಷ ದೀಪೋತ್ಸವ, ಪುರಾಣ ಮಹಾಮಂಗಲ, ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳ 25ನೇ ವರ್ಷದ ನಿರಂಜನ ಚರ ಪಟ್ಟಾಧಿಕಾರ ಮಹೋತ್ಸವದ ಬೆಳ್ಳಿ ಹಬ್ಬ ಹಾಗೂ ಭಕ್ತರಿಂದ ಪೂಜ್ಯರಿಗೆ ತುಲಾಭಾರ ಕಾರ್ಯಕ್ರಮವು ಇದೇ ದಿ.9 ಶನಿವಾರರಂದು ಶ್ರೀಮಠದಲ್ಲಿ ಜರುಗಲಿದೆ.
ಸಾಯಂಕಾಲ 6 ಗಂಟೆಗೆ ನಡೆಯಲಿರುವ ಈ ಧರ್ಮಸಭೆಯ ದಿವ್ಯ ಸಾನಿದ್ಯವನ್ನು ಇಂಗಳೇಶ್ವರ ವಿರಕ್ತಮಠದ ಶ್ರೀ ಚನ್ನಬಸವ ಮಹಾಸ್ವಾಮಿಗಳು, ಮಸಬಿನಾಳ ದಾಸೋಹ ಸಂಸ್ಥಾನಮಠದ ಶ್ರೀ ಸಿದ್ದರಾಮ ಮಹಾಸ್ವಾಮಿಗಳು ವಹಿಸುವರು.
ನೇತೃತ್ವವನ್ನು ಸಾಸನೂರ ಮಡಿವಾಳೇಶ್ವರ ಮಠದ ಶ್ರೀ ಮಹಾಂತಲಿಂಗ ಮಹಾಸ್ವಾಮಿಗಳು, ವಡವಡಗಿ ನಂದಿಮಠದ ಶ್ರೀ ವೀರಸಿದ್ದ ಮಹಾಸ್ವಾಮಿಗಳು ವಹಿಸುವರು.
ಸಮ್ಮುಖವನ್ನು ನಾವದಗಿಯ ಶ್ರೀ ರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು, ಢವಳಗಿ ಗದ್ದಿಗೆಮಠದ ಶ್ರೀ ಗನಮಠಸ್ವಾಮಿಗಳು, ಬೆಂಗಳೂರಿನ ಶ್ರೀ ಚಂದ್ರಕಾಂತ ಹಿರೇಮಠ ಅವರು ವಹಿಸುವರು.
ಶಿವ ಸಮ್ಮುಖವನ್ನು ಶ್ರೀ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು, ಚಬನೂರಿನ ಶ್ರೀ ರಾಮಲಿಂಗ ಸ್ವಾಮಿಗಳು, ಕಡಕೋಳ ಮಹಾಲಿಂಗೇಶ್ವರ ಮಠದ ಶ್ರೀ ಮಹಾಂತಲಿಂಗಯ್ಯ ಸ್ವಾಮಿಗಳು, ಬಂಡೆಪ್ಪನಹಳ್ಳಿಯ ಶ್ರೀ ವಿಶ್ವನಾಥಸ್ವಾಮಿ ಜಾಗೀರದಾರಮಠ, ಲೋಟಗೇರಿ ಶ್ರೀ ಗುರುಮೂರ್ತಿ ದೇವರು, ಹಳ್ಳೂರಿನ ಶ್ರೀ ಮಾತೋಶ್ರೀ ಮಹಾಲಿಂಗಮ್ಮನವರು, ವಹಿಸುವರು.
ಕಾರ್ಯಕ್ರಮದ ಉದ್ಘಾಟಕರಾಗಿ ಕೃಷಿ ಮಾರುಕಟ್ಟೆ ಸಚೀವ ಶಿವಾನಂದ ಪಾಟೀಲ ಅವರು ಆಗಮಿಸುವರು. ಅಧ್ಯಕ್ಷತೆಯನ್ನು ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ವಹಿಸುವರು.
ಮುಖ್ಯ ಅತಿಥಿಗಳಾಗಿ ಸಂಸದರಾದ ರಮೇಶ ಜಿಗಜಿಣಗಿ, ಮಾಜಿ ಶಾಸಕ ಎಸ್.ಎಂ.ದೇಸಾಯಿ, ಎ.ಎಸ್.ಪಾಟೀಲ(ನಡಹಳ್ಳಿ), ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ), ಜಿಪಂ ಮಾಜಿ ಅಧ್ಯಕ್ಷ ಪ್ರಭುಗೌಡ ದೇಸಾಯಿ, ಸೋಮನಗೌಡ ಬಿರಾದಾರ, ಸಿದ್ದನಗೌಡ ಬಿರಾದಾರ, ಪಿಡಿಓ ಶ್ರೀಮತಿ ಸಾವಿತ್ರಿ ಬಿರಾದಾರ, ಮಲ್ಲನಗೌಡ ಬಿರಾದಾರ, ಬಸನಗೌಡ ಪಾಟೀಲ, ಸಿದ್ದನಗೌಡ ಪಾಟೀಲ, ಜೆ.ಡಿ ಪಾಟೀಲ, ಅಸ್ಕಿ ಪೌಂಡೇಶನ್ ಅಧ್ಯಕ್ಷ ಕಾಂಗ್ರೇಸ್ ಮುಖಂಡ ಸಿ.ಬಿ.ಅಸ್ಕಿ, ಗ್ರಾಂಪಂ ಅಧ್ಯಕ್ಷೆ ಶ್ರೀಮತಿ ರೇಣುಕಾ ಮಾದರ, ಮುತ್ತುರಾಜ ಅಂಗಡಿ, ಎಂ.ಜಿ.ಗಂಗನಗೌಡರ, ಆಗಮಿಸುವರು.
ದಿ.10 ರವಿವಾರರಂದು ಸಾಯಂಕಾಲ 6 ಗಂಟೆಗೆ ಶ್ರೀಮಠದ ಮಹಾ ರಥೋತ್ಸವ ಜರುಗಲಿದೆ. ಅಂದೇ ರಾತ್ರಿ 10 ಗಂಟೆಗೆ ಸಾಮಾಜಿ ನಾಟಕ ಜರುಗಲಿದೆ ಎಂದು ಶ್ರೀಮಠವು ಪ್ರಕಟನೆ ಮೂಲಕ ತಿಳಿಸಿದೆ.