ಲೋಕಾಯುಕ್ತ ಬಲೆಗೆ ಬಿದ್ದ ಕೆಎಸ್‍ಆರ್‍ಟಿಸಿ ಸಿಬ್ಬಂದಿ
ಬೀದರ್: ಮಾ.6:ಬೀದರ್ ವಿಭಾಗೀಯ ನಿಯಂತ್ರಾಣಾಧಿಕಾರಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ ಮಾಡಿದ್ದು. ಈ ವೇಳೆ ಕೆಎಸ್‍ಆರ್‍ಟಿಸಿ ಸಿಬ್ಬಂದಿ ರೆಡ್ ಹ್ಯಾಂಡ್ ಅಗಿ ಸಿಕ್ಕಿದ್ದಾರೆ. ಡಾಟಾ ಆಪರೇಟರ್ ಮಂಜುನಾಥ ಹಾಗೂ ಬಸವಕಲ್ಯಾಣ ಘಟಕದ ನಿರ್ವಾಹಕ ರವಿ ಇವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ವಿದ್ಯಾಧರ್ ದೂರಿನ ಮೇರೆಗೆ ಟ್ರ್ಯಾಪ್ ಮಾಡಿದ ಲೋಕಾಯುಕ್ತ ಅಧಿಕಾರಿಗಳು. ಕೇಸ್ ಕ್ಲೋಸ್ ಮಾಡಲು ವಿದ್ಯಾಧರ್ ಎಂಬುವರರಿಂದ 35 ಸಾವಿರ ಹಣ ಪಡೆಯುವಾಗ ರವಿ ಲೋಕಾಯುಕ್ತ ಬಲೆಗೆ ಬಿದ್ದಿದಾನೆ.
ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಮೇಲೆ ರವಿ ವಿಭಾಗೀಯ ಕಚೇರಿಯಲ್ಲಿನ ಡಾಟಾ ಆಪರೇಟರ್ ಮಂಜುನಾಥ್ ಹೆಸರು ಹೇಳಿದ್ದಾನೆ. ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್‍ನಿಂದ ಹಣಕ್ಕೆ ಬೇಡಿಕೆ ಹಿನ್ನೆಲೆ ಹಣ ಪಡೆದಿದ್ದೇನೆ ಎಂದು ರವಿ ತಪ್ಪು ಒಪ್ಪಿಕೊಂಡಿದ್ದಾನೆ.
ಬಸವಕಲ್ಯಾಣದಿಂದ ಕಂಡೆಕ್ಟರ್ ರವಿಯನ್ನು ಬೀದರ್ ಕೇಂದ್ರ ಕಚೇರಿಗೆ ಕರೆತಂದು ವಿಚಾರಣೆ ಮಾಡಿದ ಲೋಕಾಯುಕ್ತ ಅಧಿಕಾರಿಗಳು ಇದೀಗ ಅವರ ಸಂಪೂರ್ಣ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.
ಲೋಕಾಯುಕ್ತ ಡಿ.ವೈ.ಎಸ್.ಪಿ ಎನ್ ಎಮ್. ಓಲೇಕಾರ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.