ವೀ.ವಿ.ಸಂಘದ ಚುನಾವಣೆಅಭ್ಯರ್ಥಿಗಳಿಂದ ಬಿರುಸಿನ ಮತಯಾಚನೆ
ಎನ್.ವೀರಭದ್ರಗೌಡ
ಬಳ್ಳಾರಿ, ಮಾ.06: ಈ ತಿಂಗಳ 17 ರಂದು ನಡೆಯುವ ಜಿಲ್ಲೆಯ ಪ್ರತಿಷ್ಟಿತ ಶಿಕ್ಷಣ ಸಂಸ್ಥೆ ವೀರಶೈವ ವಿದ್ಯಾವರ್ಧಕ ಸಂಘದ ಚುನಾವಣೆಯ ಪ್ರಚಾರದ ಬಿಸಿ ಮಹಾ ಶಿವರಾತ್ರಿ ಬಿಸಿಲಿನಂತೆ ಕಾವೇರುತ್ತಿದೆ.
ಇನ್ನೇನು ಮತದಾನಕ್ಕೆ 10 ದಿನ ಬಾಕಿ ಇದೆ. ಅದಕ್ಕಾಗಿ ಮತದಾರರ ಮನ ಓಲೈಕೆಗೆ ಎರೆಡು ತಂಡಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳು ಬಿಸಿಲನ್ನು ಲೆಕ್ಕಿಸದೇ ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ.
ಇಂದ ಜಿಲ್ಲೆಯ ಕಂಪ್ಲಿ ಪಟ್ಟಣ, ಎಮ್ಮುಗನೂರು, ರಾಮಸಾಗರ, ಕೆಣಿಕಿಹಾಳ್, ಕುರುಗೋಡಿನಲ್ಲಿ ದಿ.ಅಲ್ಲಂ ಕರಿಬಸಪ್ಪ, ಎನ್. ತಿಪ್ಪಣ್ಣನವರ “ಹಿರಿಯರ ತಂಡ”   ತಂಡದ ನಾಯಕ ಅಲ್ಲಂ ಗುರುಬಸವರಾಜ್ ನೇತೃತ್ವದಲ್ಲಿ ತಂಡದ ಅಭ್ಯರ್ಥಿಗಳು ಪ್ರಚಾರ ನಡೆಸಿದರು.
ಕಂಪ್ಲಿಯಲ್ಲಿ ಅಖಿಲ ಕರ್ನಾಟಕ ಲಾಳಗೊಂಡ ಸಮಾಜದ ರಾಜ್ಯ ಅಧ್ಯಕ್ಷ ಅರವಿ ಬಸವನಗೌಡ, ಹೇಮಯ್ಯಸ್ವಾಮಿ, ಎಮ್ಮಿಗನೂರಿನ ಮಹೇಶ್ ಗೌಡ, ಶರಣನಗೌಡ ಮೊದಲಾದವರನ್ನು ಭೇಟಿ ಮಾಡಿ ಮತಯಾಚನೆ ಮಾಡಲಾಯ್ತು. ಇದೇ ರೀತಿ ಮತದಾರರಿಗೆ ನಾವು ಉತ್ತಮ ತಂಡ ಕಟ್ಟಿದ್ದೇವೆ, ಯುವಕರಿಗೂ ಅವಕಾಶ ನೀಡಿದೆ. ಉತ್ತಮ ಆಡಳಿತಕ್ಕಾಗಿ ಮತ ನೀಡಿ ಎಂದು ಮನವಿ ಮಾಡಿದರು.
ಮತ್ತೊಂದು ಕಡೆ ಯುವಕ ವೃಂದ ತಂಡ ಸಿರುಗುಪ್ಪ ನಗರದಲ್ಲಿ ಸಭೆ ನಡೆಸಿ ಮತದಾರರಿಗೆ ತಮಗೆ ಆಶಿವಾರ್ದ ಮಾಡಿ, ನಮ್ಮ ತಂಡ ಅಧಿಕಾರಕ್ಕೆ ಬಂದರೆ ಸಂಘದ ಉತ್ತಮ ಆಡಳಿತಕ್ಕೆ ಕೈಗೊಳ್ಳುವ ವಿಷಯಗಳ ಕುರಿತು ತಿಳಿಸಿ. ನಂತರ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.
ಸುಡುವ ಬಿಸಿಲಲ್ಲಿ ಬಂದ ಅಭ್ಯರ್ಥಿಗಳಿಗೆ, ಬೆಂಬಲಿಗರಿಗೆ  ಅಲ್ಲಲ್ಲಿ ಮತದಾರರೇ ತಂಪಾದ ಪಾನಿಯ, ಮಜ್ಜಿಗೆ ನೀಡಿ ಅಭ್ಯರ್ಥಿಗಳ ದಾಹ ತೀರಿಸುತ್ತಿದ್ದರು‌.
ಇದಲ್ಲದೆ ಸ್ವತಂತ್ರ ಅಭ್ಯರ್ಥಿಗಳಾದ ಕೋಳೂರು ಚಂದ್ರಶೇಖರಗೌಡ, ದರೂರು ಶಾಂನತನಗೌಡ, ಜಿ.ನೀಲಕಂಠಪ್ಪ, ಕಾರಪುಡಿ ಮುದ್ದನಗೌಡ, ಎ ಹೇಮರೆಡ್ಡಿ, ಅಂಗಡಿ ರಾಜಶೇಖರ್ ಮೊದಲಾದವರು  ಸಹ ಹಳ್ಳಿ, ಹಳ್ಳಿಗಳಿಗೆ ತೆರಳಿ ಮತಯಾಚನೆ‌ ಮಾಡುತ್ತಿದ್ದಾರೆ.
ಹಳ್ಳಿಗಳಿಗೆ ಒಂದರ ಹಿಂದೆ ಇನ್ನೊಂದರತ್ತೆ ಹತ್ತಾರು ಕಾರುಗಳು ತಡರಳಿದಾಗ ಅಲ್ಲಿನ ಜನ ಇದ್ಯಾವ ಚುನಾವಣೆ ಎಂದು ಕುತೂಹಲದಿಂದ ಕೇಳುತ್ತಿದ್ದಾರೆ.
ಸಂಘದ ಚುನಾವಣೆ ಎಂದಾಕ್ಷಣ ಹೋ…ಎಂದು ಕೆಲವರು, ಏನು ಸಂಘ ಎಮನಸು ಮತ್ರೆ ಕೆಲವರು ಪ್ರಶ್ನಿಸುತ್ತಾರೆ.
ತಂಡಗಳು, ಸ್ವತಂತ್ರ ಅಭ್ಯರ್ಥಿಗಳು ಪ್ರಚಾರ ಒಂದು ಕಡೆಯಾದರೆ, ಕೆಲ ಅಭ್ಯರ್ಥಿಗಳ   ಸಂಬಂಧಿಗಳು ಪ್ರತ್ಯೇಕವಾಗಿ ಮನೆ ಮನೆಗೆ ತೆರಳಿ ಕರಪತ್ರ, ವಿಸಿಟಿಂಗ್ ಕಾರ್ಡ್, ಅಭ್ಯರ್ಥಿಯ ನಿವೇದನೆಯ ಪತ್ರ ನೀಡಿ ಮತಯಾಚಿಸುತ್ತಿರುವುದು ಕಂಡು ಬಂದಿದೆ. ಮಬೆಯಲ್ಲಿ ಮತದಾರರು ಇಲ್ಲದಿದ್ದರೆ. ಬಾಗಿಲ ಮುಂದೆ ಕರಪತ್ರ ಇಟ್ಟು,  ಸಾಧ್ಯವಾದರೆ ಕರೆ ಮಾಡಿ ನಿಮ್ಮನ್ನು ಕಾಣಲು ಬಂದಿತ್ತು ಎಂದು ಹೇಳುತ್ತಾರೆ.