ಕಂಪ್ಲಿ ಮುಕ್ತಿನಾಥೇಶ್ವರ ದೇವಸ್ಥಾನ ಶಿವರಾತ್ರಿ ಮಹೋತ್ಸವ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.06: ಮಹಾ ಶಿವರಾತ್ರಿ ಅಂಗವಾಗಿ ನಾಡಿದ್ದು  ಜಿಲ್ಲೆಯ ಕಂಪ್ಲಿ ಪಟ್ಟಣದ ಹೊರ ವಲಯದ  ಮುಕ್ತಿನಾಥೇಶ್ವರ ದೇವಸ್ಥಾನದಲ್ಲಿ 20ನೇ ವರ್ಷದ ಪೂಜಾ ಕಾರ್ಯಕ್ರಮ ಹಮ್ಮಿಕೊಂಡಿದೆ.
ಈ  ಮುಕ್ತಿನಾಥೇಶ್ವರ ದೇವಸ್ಥಾನವು 2004ರಲ್ಲಿ ಸ್ಥಾಪನೆಗೊಂಡಿದ್ದು ಪ್ರತಿ ವರ್ಷವು ಮಹಾ ಶಿವರಾತ್ರಿಯಂದು ಭಕ್ತಾಧಿಗಳಿಂದ ವಿಶೇಷ ಪೂಜೆ ನೆರವೇರುತ್ತಿದ್ದು, ಈ ವರ್ಷವು ರುದ್ರಾಭಿಷೇಕ ಮುಂತಾದ ಕಾರ್ಯಕ್ರಮಗಳು ಜರಗುತ್ತಿವೆ. ಮಹಾಶಿವರಾತ್ರಿ ಆಚರಣೆ ಪ್ರಯುಕ್ತ ಅಂದು  ಮಧ್ಯಾಹ್ನ 3 ಗಂಟೆಯಿಂದ ಶ್ರೀಮುಕ್ತಿನಾಥೇಶ್ವರನಿಗೆ ಮಹಾರುದ್ರಾಭಿಷೇಕ, ಕ್ಷೀರದಥಿ, ಘೃಹಳಿಂದ  ಪಂಚಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಪುಷ್ಪಾರ್ಚನೆ, ರಾಜೋಪಚಾರ ಪೂಜೆಗಳು ನೆರವೇರುತ್ತವೆ.  ಭಕ್ತಾಧೀಗಳು ಭಾಗವಹಿಸಿ ಸ್ವಾಮೀಯ ದರ್ಶನ ಪಡೆದು ಪುಣ್ಯಭಾಗಿಗಳಾಗಬೇಕೆಂದು ಟ್ರಸ್ಟ್ ನ ಅರವಿ ಬಸನಗೌಡ ಅವರು ಕೋರಿದ್ದಾರೆ.
One attachment • Scanned by Gmail