ಉಚಿತ ಶಿಬಿರ: 50 ಜನರ ದಂತ ತಪಾಸಣೆ
ಬೀದರ್:ಮಾ.6: ಸೈಯದ್ ಇಫ್ತಕಾರ್ ಮೆಮೊರಿಯಲ್ ಎಜುಕೇಷನ್ ಆಯಿಂಡ್ ಸೋಷಿಯಲ್ ಡೆವಲೆಪಮೆಂಟ್ ಚಾರಿಟಬಲ್ ಟ್ರಸ್ಟ್ ವತಿಯಿಂದ ತಾಲ್ಲೂಕಿನ ಮಲ್ಕಾಪುರದಲ್ಲಿ ಉಚಿತ ದಂತ ತಪಾಸಣೆ ಶಿಬಿರ ನಡೆಯಿತು.
ಡಾ. ಅವೈಝ್ 50 ಜನರ ದಂತ ತಪಾಸಣೆ ಮಾಡಿದರು. ಅಗತ್ಯ ಇರುವವರಿಗೆ ಹೆಚ್ಚಿನ ಚಿಕಿತ್ಸೆಗೆ ಸಲಹೆ ನೀಡಿದರು.
ಟ್ರಸ್ಟ್ ಅಧ್ಯಕ್ಷ ಸೈಯದ್ ಅಫ್ಸರ್, ಗ್ರಾಮದ ಪ್ರಮುಖರು ಇದ್ದರು.