ಎಸ್.ಕೆ.ಡಿ.ಆರ್.ಡಿಪಿ ಸಂಸ್ಥೆಯ ಕಾರ್ಯ ಶ್ಲಾಘನೀಯ : ಹೆಡೆ
ಔರಾದ :ಮಾ.6: ಈ ನಾಡಿನ ಮಕ್ಕಳ ಉತ್ತಮ ಭವಿಷ್ಯ ಮತ್ತು ಶಿಕ್ಷಣದ ಗುಣಮಟ್ಟ ಸುಧಾರಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಪ್ರೌಢ ಶಾಲಾ ಮಕ್ಕಳಿಗೆ ವರವಾಗಿ ಪರಿಣಮಿಸಿದೆ ಎಂದು ಸಂಪನ್ಮೂಲ ಶಿಕ್ಷಕ ಶಿವಲಿಂಗ ಹೇಡೆ ಅಭಿಪ್ರಾಯಪಟರು.
ಮಂಗಳವಾರ ತಾಲೂಕಿನ ಸಂತಪುರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್.ಕೆ.ಡಿ.ಆರ್.ಡಿಪಿ ಯೋಜನೆಯಿಂದ ಆಯೋಜಿಸಿದ ಮೂರು ತಿಂಗಳ ಉಚಿತ ಟ್ಯೂಷನ್ ಕ್ಲಾಸ್ ನ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಪ್ರೌಢ ಶಾಲೆಯಲ್ಲಿನ ಮಕ್ಕಳು ಉತ್ತಮ ರೀತಿಯಿಂದ ಶಿಕ್ಷಣ ಪಡೆದು ಅವರು ಉತ್ತಮ ರ್ಯಾಂಕ್ ಗಳಿಸಲು ಈ ಯೋಜನೆ ಸಹಕಾರಿಯಾಗಿದೆ. ಮೂರು ತಿಂಗಳುಗಳ ಕಾಲ ಉಚಿತ ಶಿಕ್ಷಕರಿಗೆ ನೀಡಿ ಹೆಚ್ಚುವರಿ ಪಠ್ಯಗಳನ್ನು ಭೋಧನೆ ಮಾಡಿ ಅವರ ಸವಾರ್ಂಗೀಣ ವಿಕಸನಕ್ಕೆ ಶ್ರಮಿಸುತ್ತಿರುವ ಈ ಸಂಸ್ಥೆಯ ಕಾರ್ಯ ಅಮೋಘವಾಗಿದೆ ಎಂದರು.
ಎಸ್.ಕೆ.ಡಿ.ಆರ್.ಡಿಪಿ ತಾಲೂಕು ಯೋಜನಾಧಿಕಾರಿ ರಾಘವೇಂದ್ರ ಗೌಡಾ ಮಾತನಾಡಿ, ಪೂಜ್ಯರ ಆಶಯದಂತೆ 10ನೇ ತರಗತಿಯ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಅನ್ನುವ ಉದ್ದೇಶದಿಂದ ಅವರಿಗೆ ಯೋಜನೆಯಿಂದ ಮೂರು ತಿಂಗಳುಗಳ ಕಾಲ ಎಲ್ಲ ವಿಷಯಗಲ ಕುರಿತು ವಿಶೇಷ ತರಗತಿಗಳನ್ನು ಹಮ್ಮಿಕೋಂಡು ಅವರ ಶೈಕ್ಷಣಿಕ ಗುನಮಟ್ಟ ಸುದಾರಿಸುವ ಪ್ರಯತ್ನ ಜರುಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಚಂದ್ರಕಾಂತ ಕೋಳಿ, ಸಂತೋಷ ಮುಕ್ರಂಬೆ, ಶಿವಾಜಿ ಚಿಟಗೀರೆ, ಮಲ್ಲಿಕಾರ್ಜುನ ಚಾಕೂಂಡಿ ಇತರರಿದ್ದರು.