ಫೀರ್ ಏಕ್ ಬಾರ್ ಮೋದಿ ಸರ್ಕಾರ:ಲುಂಬಿನಿ ಗೌತಮ
ಬೀದರ,ಮಾ.06: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸರ್ಕಾರದಿಂದ ಮಹಿಳೆಯರ ಸವಾರ್ಂಗೀಣ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದಿಂದ ಹೆಚ್ಚಿನ ಒತ್ತು ನೀಡಲಾಗಿದೆ. ಆದಕಾರಣ ಫೀರ್ ಏಕ್ ಬಾರ್ ಮೋದಿ ಸರ್ಕಾರ ಎಂಬ ಘೋಷಣೆಯೊಂದಿಗೆ ಬೀದರ ಜಿಲ್ಲಾ ಭಾರತೀಯ ಜನತಾ ಪಾರ್ಟಿಯ ಮಹಿಳಾ ಮೋರ್ಚಾ ವತಿಯಿಂದ ಇಂದು ದಿನಾಂಕ: 05-03-2024 ನಗರದಲ್ಲಿ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು.
ಬೈಕ್ ರ್ಯಾಲಿಯು ಪಾಪನಾಶ ದೇವಸ್ಥಾನದ ಮುಖ್ಯದ್ವಾರದಿಂದ ತಾಯಿ ಮಗು ವೃತ್ತದವರೆಗೆ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಬೀದರ ಜಿಲ್ಲಾ ಭಾರತೀಯ ಜನತಾ ಪಾರ್ಟಿಯ ಮಹಿಳಾ ಮೋರ್ಚಾ ಘಟಕದ ಅಧ್ಯಕ್ಷೆ ಲುಂಬಿನಿ ಗೌತಮ್ ಅವರು ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ರಾಜಕೀಯ ಹಾಗೂ ಇತರ ಕ್ಷೇತ್ರಗಳಲ್ಲಿ ಸ್ಥಾನ ನೀಡುವುದಕ್ಕೆ ವಿಧೇಯಕವನ್ನು ತರಲಾಗಿದೆ. ಇದೇ ತರಹ ಮಹಿಳೆಯರ ಸುರಕ್ಷತೆಗಾಗಿ ಹೊಸ ಕಾನೂನು ಜಾರಿ ಮಾಡಲಾಗಿದೆ. ಮಹಿಳೆಯರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದಿಂದ ಕೌಶಲ್ಯ ಅಭಿವೃದ್ಧಿ, ಮುದ್ರಾ ಯೋಜನೆ, ಬೆಟಿ ಬಚಾವ್ ಬೆಟಿ ಪಡಾವ್ ಯೋಜನೆ ಜಾರಿಗೆ ತಂದಿದೆ. ಮೋದಿಯವರ ನೇತೃತ್ವದಲ್ಲಿ ಮಹಿಳೆಯರಿಗೆ ರಾಜಕೀಯ ಸಾಮಾಜಿಕ ಹಾಗೂ ವ್ಯವಹಾರಿಕ ಕ್ಷೇತ್ರದಲ್ಲಿಯೂ ಕೂಡ ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ. ತೀವಳಿ ತಲಾಕ್ ರದ್ದು ಮಾಡಿ ಹೊಸ ಕಾನೂನನ್ನು ತಂದು ಮಹಿಳೆಯರಿಗೆ ನ್ಯಾಯವನ್ನು ದೊರಕುವ ಸಲುವಾಗಿ ಕ್ರಮವನ್ನು ಕೈಗೊಳ್ಳಲಾಗಿದೆ. ಮಹಿಳೆಯರ ಸವಾರ್ಂಗೀಣ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದಿಂದ ಮಾಡಿರುವ ಅಭಿವೃದ್ಧಿ ಕಾರ್ಯಗಳ ಮಾಹಿತಿಯನ್ನು ಜನರಿಗೆ ತಲುಪಿಸಿ ಫೀರ್ ಏಕ್ ಬಾರ್ ಮೋದಿ ಸರ್ಕಾರ್ ಎಂಬ ಘೋಷಣೆಯೊಂದಿಗೆ ಮಹಿಳೆಯರಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿಯವರ ನೇತೃತ್ವದಲ್ಲಿ ಭಾರತೀಯ ಜನತಾ ಪಾರ್ಟಿಗೆ ಮತವನ್ನು ಕೇಂದ್ರದಲ್ಲಿ ಮತ್ತೊಮ್ಮೆ ಭಾರತೀಯ ಜನತಾ ಪಾರ್ಟಿಯ ಮೋದಿ ಸರ್ಕಾರವನ್ನು ಆರಿಸಿ ತರಬೇಕೆಂಬ ಉದ್ದೇಶದಿಂದ ಈ ಬ್ಯಾಕ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕಿನ ನಿರ್ದೇಶಕಿ ಶ್ರೀಮತಿ ಶಕುಂತಲಾ ಬೆಲ್ದಾಳೆ, ಬೀದರ ಜಿಲ್ಲಾ ಭಾರತೀಯ ಜನತಾ ಪಾರ್ಟಿಯ ಉಪಾದ್ಯಕ್ಷರಾದ ಪ್ರಸನ್ನ ಲಕ್ಷಿ??ೀ ದೇಶಪಾಂಡೆ, ಸಂಗೀತಾ ಅಡಕೆ, ಹೇಮ ತುಕ್ಕಾರೆಡ್ಡಿ, ಮಹಾನಂದ ಪಾಟೀಲ, ಶಶಿಕಲಾ, ಸರಸ್ವತಿ ನವೀನ, ಸಹಾನಾ ಪಾಟೀಲ, ಜಯಾ ಮಹಾದೇವ, ಡಾ. ಶ್ರೇಯಾ, ಡಾ. ಸುಜಾತಾ ಹೊಸಮನಿ, ಸುಜಾತಾ ಸಂತೋಷ ಪಾಟೀಲ, ಮಹಾನಂದಾ ಕೋಟೆ, ಆಶಾ ಕೋಟೆ,ಗೀತಾ ಕೋಟೆ, ಜಿಲ್ಲಾ ಪಧಾನ ಕಾರ್ಯದರ್ಶಿ ಪೀರಪ್ಪ ಔರಾದೆ, ಬೀದರ ವಿಧಾನ ಸಭಾ ಕ್ಷೇತ್ರದ ಪ್ರಭಾರಿ ಉಪೇಂದ್ರ ದೇಶಪಾಂಡೆ, ಜಿಲ್ಲಾ ಮಾದ್ಯಮ ಸಂಚಾಲಕ ಶ್ರೀನಿವಾಸ ಚೌಧರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.