ವಿಶ್ವ ವಿದ್ಯಾಲಯಗಳ ಬೋಧಕೇತರ ನೌಕರರಿಗೆ ಯುಜಿಸಿ ವೇತನ ನೀಡಲೆಬೇಕು:ವೀರಭದ್ರಪ್ಪ ಉಪ್ಪಿನ
ಬೀದರ:ಮಾ.6:ದೇಶದ ವಿಶ್ವವಿದ್ಯಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಮಸ್ತ ಬೋಧಕೇತರ ನೌಕರರುಗಳಿಗೆ ಯುಜಿಸಿ ವೇತನವನ್ನು ನೀಡಿ, ಶಿಕ್ಷಕ- ಶಿಕ್ಷಕೇತರ ಮಧ್ಯದಲ್ಲಿ ರುವ ವೇತನ ತಾರತಮ್ಯವನ್ನು ಸರಿಪಡಿಸಬೇಕೆಂದು ಅಖಿಲ ಭಾರತ ವಿಶ್ವ ವಿದ್ಯಾಲಯಗಳ ನೌಕರರ ಒಕ್ಕೂಟದ ಕಾರ್ಯಕಾರಿ ಸಮಿತಿ ಸದಸ್ಯರಾದ ವೀರಭದ್ರಪ್ಪ ಉಪ್ಪಿನ ರವರು ಸರಕಾರಕ್ಕೆ ಆಗ್ರಹಿಸಿದರು.
ಅವರು ಅಖಿಲ ಭಾರತ ವಿಶ್ವ ವಿದ್ಯಾಲಯಗಳ ನೌಕರರ ಒಕ್ಕೂಟದಿಂದ, ಓಡಿಸ್ಸಾ ರಾಜ್ಯದ ಬಾಲಾಸೋರನಲ್ಲಿರುವ ಫಕೀರ್ ಮೋಹನ ವಿವಿನೌ ಘಟಕ ದಿಂದ ಆಯೋಜಿಸಲಾದ ಪ್ರಸಕ್ತ ಸಂದರ್ಭದಲ್ಲಿ ಉನ್ನತ ಶಿಕ್ಷಣ ಹಾಗೂ ಬೋಧಕೇತರ ನೌಕರರ ಪಾತ್ರ ಕುರಿತ ರಾಷ್ಟ್ರೀಯ ವಿಚಾರ ಸಂಕೀರಣದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಬೋಧನೆ, ಸಂಶೋ ಧನೆ ಹಾಗೂ ವಿಸ್ತರಣೆ ಈ ಮೂರು ಉದ್ದೇಶಗಳ ಕ್ರಿಯಾನ್ವಯಕ್ಕಾಗಿ ವಿಶ್ವ ವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ನೌಕರರು ಸಮಾನವಾಗಿ ದುಡಿಯುತ್ತಾರೆ. ಆದರೆ ಬೋಧಕರಿಗೆ ಯುಜಿಸಿ ವೆತನ ಹಾಗೂ ಬೋಧಕೇತರ ಸಿಬ್ಬಂದಿಗಳಿಗೆ ರಾಜ್ಯ ಸರ್ಕಾರದ ವೇತನ ಶ್ರೇಣಿ ಯನ್ನು ನೀಡುತ್ತಿರುವುದು ತಾರತಮ್ಯವಾಗಿದ್ದು, ಇದು ಬೋಧಕೇತರ ನೌಕರರಿಗೆ ಮಾಡುತ್ತಿರುವ ಅನ್ಯಾಯವಾಗಿದೆ. ಇದನ್ನು ತಕ್ಷಣವೇ ಸರಿಪಡಿಸಬೇಕೆಂದು ಅವರು ಒತ್ತಾಯಿಸಿ ದರು. ಮುಂದುವರೆದು ಹಳೇ ಪಿಂಚಣಿ ಮರು ಜಾರಿ ಹಾಗೂ ಗುತ್ತಿಗೆ ಆಧಾರಿತ ನೌಕರರ ಸೇವಾ ಭದ್ರತೆ ಯನ್ನು ಸುನಿಶ್ಚಿತಗೊಳಿಸಬೇಕೆಂದು ಒತ್ತಾಯಿಸಿದರು.
ಸಸಿಗೆ ನೀರೆರೆಯುವ ಮೂಲಕ ವಿಚಾರ ಸಂಕಿರಣಕ್ಕೆ ಚಾಲನೆ ನೀಡಲಾಯಿತು. ವಿಶ್ವ ವಿದ್ಯಾಲಯದ ಕುಲಪತಿ ಸನ್ಮಾನ್ಯ ಸಂತೋಷ ಕುಮಾರ್ ತ್ರಿಪಾಠಿ ಯವರು ಮುಖ್ಯ ಭಾಷಣ ಮಾಡಿ, ಸರ್ವರಿಗೂ ಶುಭ ಕೋರಿದರು. ಬಿ.ಎಸ. ಹೋತಾರವರು ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕಾರಿ ಅಧ್ಯಕ್ಷರಾದ ಎಂ ಬಿ ಸಜ್ಜನ್ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಅಂಜನ ಕುಮಾರ ಘೋಷ್ ರವರು ವರದಿ ವಾಚನ ಮಾಡಿದರು. ವಿವಿ ಸಂಘದ ಅಧ್ಯಕ್ಷರಾದ ಉಪೇಂದ್ರಪ್ರಸಾದ್ ಜನಾರವರು ಅತಿಥಿಗಳನ್ನು ಸ್ವಾಗತಿಸಿದರು. ಪ್ರದೀಪ್ ಕುಮಾರ್ ಗಾನ್‍ರವರು ಕೊನೆಯಲ್ಲಿ ವಂದಿಸಿದರು. ನಿವೃತ್ತ ಶಿಕ್ಷಕಿ ಶಾಂತಾ ಬಾಯಿ , ಮಂದಾಕಿನಿ, ಜೈಶ್ರೀ ಹಾಗೂ ಶಿಕ್ಷಕಿ ಯರಾದ ಅರುಣಾ ಪಾಟೀಲ್ ಮತ್ತು ಸಂತೋಷ್ ಕುಮಾರಿಯ ವರು ಹಾಜರಿದ್ದರು. ದೇಶಾದ್ಯಂತ ವಿವಿಗಳಿಂದ ಆಗಮಿಸಿದ್ದ ಅನೇಕ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.