ಉನ್ನತ ಶಿಕ್ಷಣಕ್ಕೆ ಪ್ರಾಥಮಿಕ ಶಿಕ್ಷಣ ಅಡಿಪಾಯವಿದ್ದಂತೆ
ಚಿತ್ತಾಪುರ:ಮಾ.6: ಶೈಕ್ಷಣಿಕ ಕಾಲಾವಧಿಯಲ್ಲಿ ಪ್ರಾಥಮಿಕ ಶಿಕ್ಷಣ ಉನ್ನತ ಶಿಕ್ಷಣಕ್ಕೆ ಅಡಿಪಾಯವಿದ್ದಂತೆ ಎಂದು ಸರಕಾರಿ ಕನ್ಯಾ ಪ್ರೌಢ ಶಾಲೆಯ ಮುಖ್ಯಗುರು ಶರಣು ಮಲಕೂಡ ಹೇಳಿದರು.
ತಾಲೂಕಿನ ಮೊಗಲಾ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಹಾಗೂ 8ನೇ ತರಗತಿ ವಿದ್ಯಾರ್ಥಿಗಳಿಗೆ ಬಿಳ್ಕೋಡುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪ್ರಾಥಮಿಕ ಹಂತದಿಂದಲೇ ಉತ್ತಮ ಶಿಕ್ಷಣ ಪಡೆಯುವ ಮೂಲಕ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು ಎಂದು ಕರೆ ನೀಡಿದರು.
ವಿದ್ಯಾರ್ಥಿಗಳಲ್ಲಿನ ತಪ್ಪುಗಳ ಲೆಕ್ಕ ಹಾಕಿ ನಿತ್ಯದ ಜೀವನದಲ್ಲಿ ಒಂದೊಂದು ತಪ್ಪನ್ನು ಹೊರಹಾಕಿ ಅದನ್ನು ಸರಿಪಡಿಸಿಕೊಳ್ಳುವ ಮೂಲಕ ಪ್ರಬುದ್ಧ ವಿದ್ಯಾರ್ಥಿಯಾಗಿ ಹೊರಹೊಮ್ಮಬೇಕು ಈ ನಿಟ್ಟಿನಲ್ಲಿ ಟಿವಿ, ಮೊಬೈಲ್‍ನಿಂದ ದೂರವಿದ್ದು ಓದಿನ ಕಡೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಹೇಳಿದರು.
ನಾಗಾವಿ ಸಾಹಿತ್ಯ ಸಾಂಸ್ಕøತಿಕ ಪರಿಷತ್ತ್ ಅಧ್ಯಕ್ಷ ಕಾಶಿನಾಥ ಗುತ್ತೇದಾರ ಮಾತನಾಡಿ, ಮನೆಯಲ್ಲಿ ತಂದೆತಾಯಿ ಹೆಣ್ಣು ಗಂಡು ಎಂಬ ಮಕ್ಕಳಲ್ಲಿ ತಾರತಮ್ಯ ಮಾಡದೇ ಇಬ್ಬರನ್ನು ಸಮಾನವಾಗಿ ನೋಡಿಕೊಂಡು ಅವರಲ್ಲಿ ದೈರ್ಯ ಸ್ಥೈರ್ಯ ಮತ್ತು ಆತ್ಮವಿಶ್ವಾಸ ತುಂಬುವಂತ ಕೆಲಸ ಮಾಡಿ ಅವರ ಬೆಳವಣಿಗೆಗೆ ಉತ್ತಮ ಅಡಿಪಾಯ ಹಾಕಬೇಕು ಎಂದು ಕಿವಿಮಾತು ಹೇಳಿದರು.
ಶಾಲೆಯ ಮುಖ್ಯಗುರು ಸುರೇಶ ಸರಾಫ್ ಅಧ್ಯಕ್ಷತೆ ವಹಿಸಿದ್ದರು. ಎಸ್‍ಡಿಎಂಸಿ ಅಧ್ಯಕ್ಷ ರಮೇಶ ಪೂಜಾರಿ, ಗ್ರಾಪಂ ಸದಸ್ಯರಾದ ಬನ್ನೇಶ ಸುಲೇಗಾಂವ, ರಾಜು ಕಂಪನೂರ, ಲಖನ್ ಚವ್ಹಾಣ, ಭಾಗಮ್ಮ ದೊರೆ, ಪತ್ರಕರ್ತ ಜಗದೇವ ಕುಂಬಾರ, ಶಿಕ್ಷಕರಾದ ನರಸಪ್ಪ ಚಿನ್ನಾಕಟ್ಟಿ, ವೆಂಕಟಯ್ಯ ಕಲಾಲ್, ಶರಣಪ್ಪ ತೊನಸನಳ್ಳಿ, ಕಲ್ಯಾಣಿ ಏರಿ, ಸಂತೋಷ ತೊನಸನಳ್ಳಿ, ವಿಜಯಲಕ್ಷ್ಮೀ, ಸಾಬಮ್ಮ, ಅನೀಲ, ಇತರರು ಇದ್ದರು. ವಿಶ್ವರಾಜ್ ಸ್ವಾಗತಿಸಿದರು, ಶಿಕ್ಷಕ ವೀರಸಂಗಪ್ಪ ಸುಲೇಗಾಂವ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಮಕ್ಕಳೇ ಸಿದ್ದಪಡಿಸಿದ ವಿಜ್ಞಾನ ವಸ್ತು ಪ್ರದರ್ಶನ ನಡೆಯಿತು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.