ಬಿಜೆಪಿ ಹೈಕಮಾಂಡಿಂದ ಭರ್ಜರಿ ಗಿಫ್ಟ್ ; ನಳೀನ್ ಕುಮಾರ್ ಕಟೀಲ್ ಸುತ್ತಾಟ ಮತ್ತೆ ಆರಂಭ
ಮಂಗಳೂರು: ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ, ದ.ಕ ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್ ಅವರು ಎಂಪಿ ಚುನಾವಣೆಯಲ್ಲಿ ಟಿಕೆಟ್ ಸಿಗದೆ ವಂಚಿತರಾದ ಬಳಿಕ ಅಷ್ಟಾಗಿ ರಾಜಕೀಯ ವಿಚಾರದಲ್ಲಿ ಪ್ರಚಲಿತದಲ್ಲಿರಲಿಲ್ಲ. ಆದರೆ ಇದಿಗ ಕಟೀಲ್ ಮತ್ತೆ ಸುದ್ದಿಯಲ್ಲಿದ್ದಾರೆ.
ನಳೀನ್ ಕುಮಾರ್‌ಗೆ ಗುಡ್ ನ್ಯೂಸ್; ಬಿಜೆಪಿಯು ನಳೀನ್ ಕುಮಾರ್ ಕಟೀಲ್ ಅವರನ್ನು ಒಡಿಶಾ ರಾಜ್ಯದ ಬಿಜೆಪಿ ಸದಸ್ಯತ್ವ ಅಭಿಯಾನದ ಉಸ್ತುವಾರಿಯಾಗಿ ನಿಯೋಜನೆ ಮಾಡಿ ಆದೇಶ ಹೊರಡಿಸಿದೆ. ಅಂದಹಾಗೆ ಒಡಿಶಾದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಸದಸ್ಯತ್ವದ ಗುರಿಯನ್ನು ನೀಡಿದ್ದು, ಕೇಂದ್ರ ನಾಯಕತ್ವ ನಳಿನ್ ಕುಮಾರ್ ಕಟೀಲ್‌ಗೆ ಈ ಜವಾಬ್ದಾರಿ ನೀಡಿದೆ ಎಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ನಳಿನ್ ಕುಮಾರ್ ಕಟೀಲ್ ಅವರು ಸೆ.೧೭ರಂದು ಒಡಿಶಾಗೆ ತೆರಳಲಿದ್ದು, ಅಲ್ಲಿ ಒಂದು ವಾರ ಕಾಲ ಸದಸ್ಯತ್ವ ಅಭಿಯಾನದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.