ಚಕ್ರ ಎಸೆತ: ಅವಿನಾಶ್‌ಗೆ ಪ್ರಥಮ ಸ್ಥಾನ
ಸಂಜೆವಾಣಿ ವಾರ್ತೆ,
ವಿಜಯಪುರ,ಸೆ.೧೭ : ಮೈಸೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಜೂನಿಯರ್ ಮತ್ತು ಅಂಡರ್ ೨೩ ವಯೋಮಿತಿಯ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ವಿಜಯಪುರ ಜಿಲ್ಲೆ ದೇವರ ಹಿಪ್ಪರಗಿ ತಾಲೂಕಿನ ಅವಿನಾಶ ಮಲ್ಲಿಕಾರ್ಜುನ ತಳಕೇರಿ ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನ (೪೬.೮೧ ಮೀ) ಪಡೆದು ಸೌತ್ ಜೋನಲ್ ನ್ಯಾಷನಲ್‌ಗೆ ಆಯ್ಕೆಯಾಗಿದ್ದಾರೆ.
ದೇವರ ಹಿಪ್ಪರಗಿ ತಾಲೂಕಿನ ಗುರು ಹಿರಿಯರು, ಶಾಲಾ ಶಿಕ್ಷಕರ ವೃಂದ ಹಾಗೂ ತರಬೇತುದಾರ ರಾಜು ದ. ಕಾಖಂಡಕಿ ಮತ್ತು ಹಾಜಿ ಮುಲ್ಲಾ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.