ಹಸಿದವರಿಗೆ ಅನ್ನ ನೀಡಿ ಬಡವರ ಸೇವೆ ಮಾಡುವುದೇ ಧರ್ಮ :ಮಾಜಿ ಶಾಸಕ ಡೊಂಗರಗಾAವ
ಅಥಣಿ :ಸೆ.೧೭: ಎಲ್ಲ ಮಾನವರನ್ನು ಏಕತಾ ಭಾವದಿಂದ ಪ್ರೀತಿಸಬೇಕು. ನಿರ್ಗತಿಕರಿಗೆ, ಬಡವರಿಗೆ ನೆರವು ನೀಡಬೇಕು. ಯಾರಿಗೂ ತೊಂದರೆ ಕೊಡದ ಹಾಗೆ ಸನ್ಮಾರ್ಗದಲ್ಲಿ ಜೀವಿಸಬೇಕು’ ಎಂಬ ಸಂದೇಶವನ್ನ ಮೊಹಮ್ಮದ್ ಪೈಗಂಬರ ಅವರು ನೀಡಿದ್ದಾರೆ’ ಎಂದು ಮಾಜಿ ಶಾಸಕ ಶಹಾಜಹಾನ ಡೊಂಗರಗಾAವ ಹೇಳಿದರು.
ಅವರು ತಾಲೂಕಿನ ಅವರಖೋಡ ಗ್ರಾಮದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಸರ್ವಧರ್ಮ ಸಮನ್ವಯ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು
ಜಾತ್ಯತೀತ ತತ್ವವೇ ಎಲ್ಲ ಧರ್ಮಗಳ ಸಾರವಾಗಿದ್ದು. ಹೀಗಾಗಿ ನಮ್ಮ ದೇಶದಲ್ಲಿ ಎಲ್ಲ ಜಾತಿ ಜನಾಂಗದವರು ಸೌಹಾರ್ದತೆಯಿಂದ ಜೀವಿಸುತ್ತಿದ್ದಾರೆ. ಭಾತೃತ್ವತೆ, ಮಾನವೀಯತೆ, ಪ್ರೀತಿ, ವಿಶ್ವಾಸ ತೋರಿಸುತ್ತಿದ್ದಾರೆ. ಇದುವೇ ನಮ್ಮ ದೇಶದ ಬೃಹತ್ ಶಕ್ತಿ. ದರ್ಗಾಗಳಿಗೆ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆದುಕೊಳ್ಳುತ್ತಾರೆ. ಹಿಂದೂ ಜಾತ್ರೆಗಳಲ್ಲಿ ಮುಸ್ಲಿಮರು, ಕ್ರೈಸ್ತರು ಪಾಲ್ಗೊಳ್ಳುತ್ತಾರೆ. ಇದುವೇ ನಮ್ಮ ಜೀವಾಳ. ಸರ್ವ ಧರ್ಮ ಸಮ್ಮೇಳನಗಳು ಇದನ್ನು ಪುಷ್ಟೀಕರಿಸುತ್ತವೆ’ ಎಂದ ಅವರು ಎಲ್ಲ ಜಾತಿಯ ಧರ್ಮಗಳು ಬಹುಶಃ ನಮ್ಮ ದೇಶದಲ್ಲಿ ಮಾತ್ರ ಒಂದೇ ವೇದಿಕೆಯನ್ನ ಹಂಚಿಕೊಳ್ಳುತ್ತಾರೆ. ಇಂತಹ ಸಮ್ಮೇಳನಗಳು ಹೆಚ್ಚಿದಷ್ಟು ದೇಶದಲ್ಲಿ ಕೋಮು ಸೌಹಾರ್ದ ಭಾತೃತ್ವ ಗಟ್ಟಿಗೊಳ್ಳುತ್ತದೆ ಎಂದರು.
ಈ ವೇಳೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಶಿಕಾಂತ ಪಡಸಲಗಿ ಗೂರುಜಿ ಮಾತನಾಡಿ
ಧರ್ಮದಲ್ಲಿ ಆಚರಣೆಗಳು ಭಿನ್ನವಾದರೂ ಕೊನೆಗೆ ಸೇರುವ ಗುರಿ ಮಾತ್ರ ಒಂದೇ. ಜಾತಿಗಿಂತ ನೀತಿ, ತತ್ತ್ವಕ್ಕಿಂತ ಆಚರಣೆ, ಮಾತಿಗಿಂತ ಕೃತಿ, ಬೋಧನೆಗಿಂತ ಸಾಧನೆ, ವ್ಯಕ್ತಿ ನಿಷ್ಠೆಗಿಂತ ತತ್ತ್ವ ನಿಷ್ಠೆಯನ್ನು ಅಳವಡಿಸಿಕೊಂಡು ಧಾರ್ಮಿಕ ತಳಹದಿಯ ಮೇಲೆ ಸಂಸ್ಕಾರ ಭರಿತ ಸಮಾಜ ರೂಪುಗೊಳ್ಳಬೇಕು. ದೇಶದಲ್ಲಿ ಪ್ರಾಚೀನ ಕಾಲದಿಂದಲೂ ಹಲವಾರು ಧರ್ಮಗಳ ಜನರು ಒಂದೇ ಸೂರಿನಡಿ ಸೌಹಾರ್ಧತೆಯಿಂದ ಬದುಕುತ್ತಿದ್ದು, ಇದು ನಮ್ಮ ಸಂಸ್ಕೃತಿಯ ಮೂಲ ಎಂದು ನುಡಿದ ಅವರು ಮನುಷ್ಯ, ಮನುಷ್ಯನನ್ನು ಪ್ರೀತಿಸುವುದೇ ನಿಜ ಧರ್ಮ. ಧರ್ಮದ ಸತ್ವ ಅಡಗಿರುವುದೇ ಪ್ರೀತಿಯಲ್ಲಿ ಎಂದು ಹೇಳಿದ್ದ ಸ್ವಾಮಿ ವಿವೇಕಾನಂದರು, ಸರ್ವಧರ್ಮ ಸಮನ್ವಯವನ್ನು ಬಯಸಿದ್ದರು ಎಂದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ನದಿ ಇಂಗಳಗಾAವ ವಿರಕ್ತ ಮಠದ ಪರಮಪೂಜ್ಯ ಸಿದ್ಧಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಸತ್ಕಾರ್ಯ, ಸೇವೆ, ದಾನಗಳಲ್ಲಿ ದೇವರನ್ನು ಕಾಣಬೇಕು. ಸಾತ್ವಿಕತೆ, ಸಂಸ್ಕೃತಿಗಳ ಮೂಲಕ ಭಾರತ ಜಗತ್ತಿಗೆ ಜಗದ್ಗುರುವಾಗಿದೆ. ಭಾರತೀಯರೆಲ್ಲರು ಒಂದೇ ಎಂಬ ಭಾವನೆಯಿಂದ ಬದುಕುವ ಸನ್ನಿವೇಶವನ್ನು ಧಾರ್ಮಿಕ ಸಂದೇಶಗಳು ಸಷ್ಟಿಸುತ್ತವೆ ಎಂದರು
ಸತ್ಯ, ಶುದ್ಧ ತತ್ತ್ವದ ತಳಹದಿಯ ಮೇಲೆ ಸಮಾಜವನ್ನು ಬೆಳೆಸುವುದೇ ಎಲ್ಲ ಧರ್ಮಗಳ ಗುರಿ. ಧರ್ಮದ ದಿಕ್ಸೂಚಿ ಎಲ್ಲರ ಬಾಳಿಗೆ ಬೆಳಕು ನೀಡುತ್ತದೆ. ಸದಾಕಾಲ ಪರೋಪಕಾರ, ಸಮಾಜಪರ ಚಿಂತನೆ, ಸತ್ಕಾರ್ಯದಲ್ಲಿ ತೊಡಗಿಕೊಂಡರೆ ಸಮಾಜ ನಮ್ಮನ್ನು ಗುರುತಿಸುತ್ತದೆ ಎಂದ ಅವರು
ಸರ್ವಧರ್ಮ ಸಮನ್ವಯ ಭಾವ ಎಲ್ಲರಲ್ಲೂ ಮೂಡಬೇಕು. ಚಿಕ್ಕ ವಯಸ್ಸಿನಲ್ಲೇ ಮಕ್ಕಳ ಮನಸ್ಸಿನಲ್ಲಿ ಸಮಭಾವ ಬೆಳೆಸುವ ಕೆಲಸ ಆಗಬೇಕು ಎಂದರು.
ಆನAತರ ಜನವಾಡ ಅಲ್ಲಮಪ್ರಭು ಆಶ್ರಮದ ಪರಮಪೂಜ್ಯ ಮಲ್ಲಿಕಾರ್ಜುನ ಮಹಾ ಸ್ವಾಮಿಗಳು. ಕುಡಚಿಯ ಮುಸ್ಲಿಂ ಧರ್ಮ ಗುರುಗಳಾದ ಹಾಫೀಜ ಇಕ್ಲಾಸ್ ಮೊಹಮ್ಮದ್ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ಧಾರ್ಥ ಸಿಂಗೆ ಸರ್ವಧರ್ಮ ಸಮನ್ವಯತೆಯ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಈರಗೌಡಾ ಪಾಟೀಲ ವಹಿಸಿದ್ದರು.
ಈ ವೇಳೆ ಕೆಎಂಎಫ್ ನಿರ್ದೇಶಕ ಮಹಾದೇವ ಬಿಳಿಕುರಿ. ಪ್ರಶಾಂತ ಇಜಾರೆ. ನ್ಯಾಯವಾದಿ ಮೌಲಾಲಿ ಸನದಿ. ಹಸನಸಾಬ ಮುಲ್ಲಾ. ದಶರಥ ಅಂಬಿ. ಶಿವಬಸು ನಾಯಿಕ. ಗಣಪತಿ ತಳವಾರ. ರಸೂಲ್ ಮುಲ್ಲಾ. ದಶರಥ ಕಾಂಬಳೆ. ಇಮಾಮಸಾಬ ಮುಲ್ಲಾ. ಗುಲಾಬಸಾಬ ಮುಲ್ಲಾ. ಅಮೀನಸಾಬ ಮುಲ್ಲಾ. ಜಿಬ್ರಾಹಿಲ್ ಜಮಾದಾರ. ರಸೂಲ ಮುಜಾವರ. ಮಹೆಬೂಬ ನದಾಫ್. ಸೇರಿದಂತೆ ಅವರಖೋಡ ಗ್ರಾಮದ ಗುರು ಹಿರಿಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಹಸಿದವರಿಗೆ ಅನ್ನ ನೀಡುವುದೇ ಧರ್ಮ. ದೇವರನ್ನು ಮತ್ತೆಲ್ಲೋ ಹುಡುಕುವುದನ್ನು ಬಿಟ್ಟು ಮನುಷ್ಯನ ಹೃದಯಲ್ಲಿ ಕಾಣಬೇಕು. ಯಾರಲ್ಲಿ ಪ್ರೀತಿಯ ಗುಣವಿದೆಯೋ ಅಲ್ಲಿ ನಿಜವಾದ ಧರ್ಮ ಇರುತ್ತದೆ. ಬಡವನ ಸೇವೆಯೇ ನಿಜವಾದ ಧರ್ಮ’ ಎಂಬುದನ್ನು ಪೈಗಂಬರ್ ಅವರು ಪದೇಪದೆ ಹೇಳುತ್ತಿದ್ದರು. ಭಾರತ ಜಾತ್ಯತೀತ ರಾಷ್ಟ್ರದ ಪರಿಕಲ್ಪನೆ ಹೊಂದಿದೆ. ಇಲ್ಲಿರುವ ಎಲ್ಲ ಜಾತಿ, ಧರ್ಮಗಳ ಸಂದೇಶ ಸಾರವೂ ಜಾತ್ಯತೀತ ತತ್ವವೇ ಆಗಿದೆ’