ಮಾತಿಗೆ ಒಂದು ಅರ್ಥ ಇದ್ದರೆ ಮೌನಕ್ಕೆ ಹಲವು ಅರ್ಥ
ಕಲಬುರಗಿ:ಸೆ.16:ಮಾತಿಗೆ ಒಂದು ಅರ್ಥ ಇದ್ದರೆ ಮೌನಕ್ಕೆ ಹಲವು ಅರ್ಥ. ಮಾತೆಂಬುದು ಜ್ಯೋತಿರ್ಲಿಂಗ. ದಾರಿ ತಪ್ಪಿದರೂ ಬಾಯಿ ಮಾತು ತಪ್ಪಬಾರದು. ಮನುಷ್ಯನ ವ್ಯಕ್ತಿತ್ವಕ್ಕೆ ಗೌರವ ಸಿಗಲಾರದೆಂದು ಸಿದ್ದೇಶ್ವರ ಶಾಸ್ತ್ರಿಗಳು ನುಡಿದರು.
ಅವರು ನಗರದ ದುಬೈ ಕಾಲೊನಿಯ ಶ್ರೀ ಶಿವಲಿಂಗೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಶ್ರೀ ವೀರಸೋಮೇಶ್ವರ ಸಾಹಿತ್ಯ ಸಾಂಸ್ಕøತಿಕ ಸೇವಾ ಸಂಘದ 11ನೇ ವಾರ್ಷಿಕೋತ್ಸವದ ಅಂಗವಾಗಿ ಜರುಗಿದ ಜಾನಪದ ಸಂಗೀತೋತ್ಸವ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡುತ್ತ ಜನಪದ ಸಂಗೀತ ಹಾಡುವವರ ಬಾಯಿಯಿಂದ ತಪ್ಪು ಉಚ್ಛಾರ ಮಾಡದೇ ಸ್ವರ ಬದ್ಧವಾಗಿ ಹಾಡುವುದರಿಂದ ಸಂಗೀತಕ್ಕೆ ಬೆಲೆ ಬರುತ್ತದೆ ಎಂದು ನುಡಿದರು.
ಸಂಸ್ಥೆಯ ಸಿದ್ರಾಮಪ್ಪ ಆಲಗೂಡಕರ್ ಅಧ್ಯಕ್ಷತೆ ವಹಿಸಿದ್ದರು. ಶಂಭುಲಿಂಗಪ್ಪ ಜೇವರ್ಗಿ ಕಾರ್ಯಕ್ರಮ ಉದ್ಘಾಟಿಸಿದರು. ನ್ಯಾಯವಾದಿ ಬಾಬುರಾವ ಜಾಧವ, ಅಮೃತಪ್ಪ ಮಲಕಪ್ಪಗೌಡ, ಗುರುಪಾದಪ್ಪ ಕಿಣಗಿ, ಶಿವಶರಣಪ್ಪ ಸಿ.ಎಂ., ಬಸಯ್ಯ ಗುತ್ತೇದಾರ, ಕಲ್ಲಿನಾಥ ಹಿರೇಮಠ, ಯುವ ಸಾಹಿತಿ ಶಿವಯ್ಯ ಮಠಪತಿ ಇವರಿಗೆ ಶ್ರೀ ವೀರಸೋಮೇಶ್ವರ ಸಂಪದ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಗೌರಿಶಂಕರ ನವಣಿ, ಶರಣು ಹೂಗಾರ, ನಾಗರಾಜ ಗೋಗಿ, ಲಕ್ಷ್ಮೀಕಾಂತ ಪನಶೆಟ್ಟಿ, ಜಗನ್ನಾಥ ಸಿಂಗಟಿ ವೇದಿಕೆಯ ಮೇಲೆ ಇದ್ದರು.
ಶಿವಲಿಂಗ ಆಲಗೂಡಕರ ಸರ್ವರನ್ನು ಸ್ವಾಗತಿಸಿದರು. ರಾಜ್ಯೋತ್ಸವ ಪುರಸ್ಕøತರಾದ ಬಾಬೂರಾವ ಕೋಬಾಳ, ಬಸಯ್ಯ ಗುತ್ತೆದಾರ ಇವರಿಂದ ಸಂಗೀತ ಜರುಗಿತು. ರೇವಣಯ್ಯ ಸ್ವಾಮಿ ನಿರೂಪಿಸಿದರು.