ಹಜ್ ಯಾತ್ರೆಗೆ ತೆರಳುತಿದ್ದ ಹಾಲಹಿಪ್ಪರ್ಗಾ ಅವರಿಗೆ ಬಿಳ್ಕೋಡುಗೆ
ಬೀದರ್:ಮಾ.6:ದೇಶದಲ್ಲಿ ನಡೆಯುತ್ತಿರುವ ಸಾಂಪ್ರದಾಯಿಕ ಉನ್ಮಾದದಲ್ಲಿಯು ಕೂಡ ಬೀದರ್ ನಗರದಲ್ಲಿ ಭಾತೃತ್ವ ಹಾಗೂ ಬಾಂಧವ್ಯದ ಸಂಕೇತವಾಗಿ ಸೋಮವಾರ ರಾತ್ರಿ ಹಜ್ ಯಾತ್ರಿಕರಿಗೆ ಚಿಕ್ಕ ಹಾಗೂ ಚೋಕ್ಕ ಬಿಳ್ಕೋಡುಗೆ ಸನ್ಮಾನ ಸಮಾರಂಭ ಜರುಗಿತು.
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಬಶಿರೋದ್ದಿನ್ ಹಾಲಹಿಪ್ಪರ್ಗಾ ಅವರು 2024ರ ಪವಿತ್ರ ಹಜ್ ಯಾತ್ರೆಗೆ ಆಯ್ಕೆಯಾಗಿ ಮೇ ತಿಂಗಳಿನಲ್ಲಿ ತೆರಳುತ್ತಿರುವ ಹಿನ್ನಲೆಯಲ್ಲಿ ಹಿಂದು-ಮುಸ್ಲಿಂ ಬಾಂಧವ್ಯದ ಸಂಕೇತವಾಗಿ ರಾಜಶೇಖರ ಪಾಟೀಲ್ ಅಷ್ಟೂರ ಹಾಗೂ ಗೆಳೆಯರು ನಗರದ ಹೊಟೇಲ್ ಪಂಜಾಬಿ ತಡಕಾದಲ್ಲಿ ಸನ್ಮಾನ ಹಾಗೂ ಬಿಳ್ಕೋಡುಗೆ ಸಮಾರಂಭ ಹಮ್ಮಿಕೊಂಡಿದ್ದರು
ಈ ಸಂದರ್ಭದಲ್ಲಿ ರಾಜಶೇಖರ ಪಾಟೀಲ್ ಅಷ್ಟೂರ, ಮನ್ನಾನ ಸೇಠ ಹಾಗೂ ಇರ್ಷಾದ ಅಲಿ ಪೈಲ್ವಾನ್ ಮಾತನಾಡಿ, ಬಶಿರೋದ್ದಿನ್ ಹಾಲಹಿಪ್ಪರ್ಗಾ ಅವರು ಪವಿತ್ರ ಹಜ್ ದರ್ಶನಕ್ಕೆ ತೆರಳುತಿದ್ದು ಅವರು ಪುಣ್ಯವಂತರಾಗಿದ್ದಾರೆ ಅವರು ಅಲ್ಲಿಗೆ ತೆರಳಿ ಭಗವಂತನಲ್ಲಿ ನಮ್ಮ ಬೀದರ್ ಹಾಗೂ ದೇಶದಲ್ಲಿ ಸುಖ, ಶಾಂತಿ, ನೆಮ್ಮದಿಗಾಗಿ ಪ್ರಾರ್ಥನೆ ಮಾಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ನರಸಿಂಗರಾವ ಸೂರ್ಯವಂಶಿ, ಮಾಜಿ ಎಂಎಲ್ಸಿ ಕೆ. ಪುಂಡಲಿಕರಾವ, ಶಂಕರರಾವ ದೊಡ್ಡಿ, ಶರಣಪ್ಪ ಬಲ್ಲೂರ, ಕಲ್ಯಾಣರಾವ ಪಾಟೀಲ್ ಸಪ್ನಾ, ಮಾರುತಿ ಶಾಖಾ, ನಾಗನಾಥ ಪಾಟೀಲ್ ಚಿಲ್ಲರ್ಗಿ, ಪತ್ರಕರ್ತ ಗಂಧರ್ವ ಸೇನಾ, ಬಸವರಾಜ ಕಾಂಬಳೆ, ಡಾ. ಮಜಗೆ, ಮಾಜಿದ ಶಮಿಮ್ ಪಟೇಲ್, ವಿದ್ಯಾಸಾಗರ ಶಿಂಧೆ, ಡಾ. ಮಕ್ಸೂದ ಚಂದಾ, ಸಂಜಯ ಜಾಗಿರದಾರ, ನಿಸಾರ್ ಅಹ್ಮದ, ಖಾಜಿ ಅಲಿಯೋದ್ದಿನ್, ಪರವೇಜ ಕಮಾಲ್, ಶಾಕೇರ್ ಉಲ್ಲಾಖಾನ್, ಎಂಎ ಸಮಿ, ನಾಸೇರ ಖಾದ್ರಿ, ನಿಸಾರ ಅಹ್ಮದ (ಪಾನಿ ಮಂತ್ರಿ), ಖಾಜಿ ಮೋಯಿದ್ ಅಲಿ, ಮಹೇಮೂದ ಖಾನ್ ಸೇರಿದಂತೆ ಸುಮಾರು 35 ರಿಂದ 40 ಜನರಿಗೆ ರಾತ್ರಿ ಭೋಜನ ಕೂಟದ ವ್ಯವಸ್ಥೆ ಕೂಡ ಆಯೋಜಿಸಲಾಗಿತ್ತು.
ಬೀದರ್ ನಗರದಲ್ಲಿ ಈ ಕಾರ್ಯಕ್ರಮ ಸಹೋದರತೆ ಸಾರುವ ಸಂದೇಶದಂತೆ ಭಾಸವಾಗುತಿತ್ತು. ಇಂತಹ ಸಹೋದರತೆ ಸಾರುವ ಕಾರ್ಯಕ್ರಮ ನಿರಂತರ ನಡೆದರೆ ಸಮಾಜದಲ್ಲಿ ಜಾತಿ-ಮತ ಹಾಗೂ ಭೇದಭಾವ ಎಂಬುದೆ ಇರುವುದಿಲ್ಲ ಎಂಬ ಮಾತುಗಳು ಕೇಳಿಬಂದವು