ಜನಪದ ಸಾಹಿತ್ಯ ಕನ್ನಡ ಸಾಹಿತ್ಯದ ಮೂಲ ಅಕಾರ ಬೇರಾಗಿದೆ : ಜೀವನ್ ಸಾಬ್
ಸಂಜೆವಾಣಿ ವಾರ್ತೆ
ಮಾನ್ವಿ.ಮಾ.೦೬- ಪಟ್ಟಣದ ಧ್ಯಾನಮಂದಿರದ ಆವರಣದಲ್ಲಿ ಶ್ರೀ ಮುಕ್ತಗುಚ್ಚ ಬೃಹನ್ಮಠ ಕಲ್ಮಠದ ವತಿಯಿಂದ ಲಿಂ. ಶ್ರೀ ವಿರೂಪಾಕ್ಷೇಶ್ವರ ಪುಣ್ಯಸ್ಮರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಕೊಪ್ಪಳದ ಅಂತರಾಷ್ಟ್ರೀಯ ಜಾನಪದ ಕಲಾವಿದ ಜೀವನ್ ಸಾಬ್ ಜನಪದ ಸಾಹಿತ್ಯ ಕುರಿತು ವಿಶೇಷ ಉಪನ್ಯಾಸ ನೀಡಿ ನಾಡಿನಲ್ಲಿ ಕಲೆ , ಸಾಹಿತ್ಯ , ಸಂಗೀತ, ಸಂಸ್ಕೃತಿ, ಪರಂಪರೆಯ ಉಳಿವಿಗೆ ಮಠ ಮಾನ್ಯಗಳ ಕೊಡುಗೆ ಅಪಾರವಾಗಿದೆ. ಅಕ್ಷರ ಭಾಷೆ ಬರದೆ ಇದ್ದರು ಕೂಡ ಜನಪದರ ತಮ್ಮ ಜೀವನವನ್ನು ಸುಂದರವಾಗಿ ರೂಪಿಸಿಕೊಂಡಿದ್ದರು. ಎನ್ನುವುದಕ್ಕೆ ಜನಪಾದ ಸಾಹಿತ್ಯವೇ ಸಾಕ್ಷಿಯಾಗಿದೆ .
ಜನಪದರು ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಅಭ್ಯಾಸಮಾಡದೆ ಇದ್ದರುಕೂಡ ಜನಪದರು ತಮ್ಮ ಮನೋಭಾವನೆಯನ್ನು ಜನಪದದಲ್ಲಿ ಕಟ್ಟಿಕೊಟ್ಟಿದ್ದರೆ ಜನಪದ ಸಾಹಿತ್ಯ ಕನ್ನಡ ಸಾಹಿತ್ಯದ ಮೂಲ ಅಕಾರ ಬೇರಾಗಿದೆ ತಾಯಂದಿರು ಪದ್ಯದ ಮೂಲಕ, ಹಾಡುಗಳನ್ನು ಕಟ್ಟುವ ಮೂಲಕ ಜೀವನದ ಸಾರವನ್ನು ತಿಳಿಸಿದ್ದರೆ. ಜನಪದ ಪದ್ಯಗಳ ಮೂಲಕ ತಾಯಿ ತನ್ನ ಮಗುವಿಗೆ ಬದುಕಿನ ಸತ್ವವನ್ನು, ವ್ಯಕ್ತಿತ್ವವನ್ನು ತಿಳಿಸಿಕೋಡುತ್ತಿದ್ದಳು, ಹೆಣ್ಣು ಗಂಡಿನ ಮಾಹತ್ವ , ಸಮ ಸಮಾನತೆಯನ್ನು, ಸಮಾಜಿಕ ಸಂದೇಶಗಳನ್ನು ಸಾರಿದವರು ಜನಪದರು.
ಗೀಗಿ ಹಾಡುಗಳು ಜನರಲ್ಲಿ ಜಾಗೃತಿಯನ್ನು ಮೂಡಿಸಿದರೆ, ಒಡಪುಗಳು ಹೆಣ್ಣಿನ ಮನಸ್ಸಿನಲ್ಲಿ ಗಂಡಿನ ಕುರಿತು ಇರುವ ಭಾವನೆಗಳನ್ನು ತಿಳಿಸುತ್ತವೆ, ಡೊಳ್ಳು ಕುಣಿತ, ಭಜನೆ ಪದ, ಬಯಲಾಟ ಸೇರಿದಂತೆ ಅನೇಕ ಜನಪದ ಕಲೆಗಳನ್ನು ಇಂದು ನಾವು ಉಳಿಸಿಕೊಂಡು ಬರಬೇಕಾಗಿದೆ. ಇಂದು ಜನಪದ ಸಾಹಿತ್ಯ ಅಶ್ಲೀಲ ಸಾಹಿತ್ಯವಾಗದಂತೆ ನಾವು ತಡೆಯುವ ಮೂಲಕ ನಮ್ಮ ಮೂಲ ಜನಪದ ಸಾಹಿತ್ಯವನ್ನು ಉಳಿಸಿಕೊಂಡು ಹೋಗುವ ಅಗತ್ಯ ನಮ್ಮೆಲರದ್ದಾಗಿದೆ ಎಂದು ತಿಳಿಸಿದರು.
ಬ್ಯಾಡಗಿಹಾಳ್‌ನ ಶ್ರೀ ಸಿದ್ದರಾಮ ಶಾಸ್ತ್ರಿಗಳು ಹಿರೇಮಠ ಕೈವಲ್ಯದರ್ಶನ ಪ್ರವಚನವನ್ನು ನೀಡಿದರು.
೨೦೨೨-೨೩ ನೇ ಸಾಲಿನ ಎಸ್.ಎಸ್.ಎಲ್.ಸಿ.ವಾರ್ಷಿಕ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಪದೆದ ವಿದ್ಯಾರ್ಥಿನಿ ಖಾಶಿಫಾ ತಜ್ರೀನ್ ಮೀರ್ ಲಿಯಾಖತ್ ಅಲಿ ಅವರಿಗೆ ದಿ. ಮಂಜೂಳಾ ಸಂಗಮೇಶ ಕಾಯಣ್ಣೋರ್ ಇವರ ಸ್ಮರಣಾರ್ಥ ದತ್ತಿ ನಗದು ಬಹುಮಾನ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಚೀಕಲಪರ್ವಿ ಶ್ರೀರುದ್ರಮುನೀಶ್ವರ ಮಠದ ಶ್ರೀ ಸದಾಶಿವ ಮಹಾಸ್ವಾಮಿಗಳು, ಶ್ರೀಗುರು ಅಮರೇಶ್ವರ ಬೃಹನ್ಮಠದ ಅಭಿನವ ಗಜದಂಡ ಶಿವಾಚಾರ್ಯ ಮಹಾಸ್ವಾಮಿಗಳು,ಅಡವಿ ಅಮರೇಶ್ವರ ಮಠದ ಶ್ರೀ ಶಂಭುಲಿಂಗ ಮಹಾಸ್ವಾಮಿಗಳು, ಸುಲ್ತಾನಪುರದ ಪಂಚಾಕ್ಷರಿ ಹಿರೇಮಠದ ಶ್ರೀ ಶಂಭು ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು. ನೀಲಗಲ್ ಬೃಹನ್ಮಠದ ಶ್ರೀ ರೇಣುಕ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು. ರಾಯಚೂರಿನ ಮಂಗಳವಾರಪೇಟೆ ಹಿರೇಮಠದ ಶ್ರೀ ವೀರಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಅರಳಹಳ್ಳಿಯ ರಾಜೇಶ್ವರಿಮಠದ ಶ್ರೀ ಶರಣಬಸವ ದೇವರು, ಸೇರಿದಂತೆ ಇನ್ನಿತರರು ಇದ್ದರು.
ಶ್ರೀ ಪಂಪಾ ವಿರೂಪಾಕ್ಷೇಶ್ವರ ಅನುದಾನಿತ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.