ಜಿಲ್ಲಾ ಕುರುಬರ ವಿದ್ಯಾ ವರ್ಧಕ ಸಂಘಕ್ಕೆ ಅವಿರೋಧ ಆಯ್ಕೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಮಾ.6; ಜಿಲ್ಲಾ ಕುರುಬರ ವಿದ್ಯಾ ವರ್ಧಕ ಸಂಘಕ್ಕೆ ಮುಂದಿನ ಮೂರು ವರ್ಷಗಳ ಅವಧಿಗೆ 21 ಸದಸ್ಯರನ್ನು ಸಮಾಜದ ಮುಖಂಡರುಗಳ ನೇತೃತ್ವದಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.ಚುನಾವಣೆಗೆ ಸ್ಪರ್ಧಿಸಿದ್ದ ಎಲ್ಲಾ ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂತೆಗೆದುಕೊಂಡ ಹಿನ್ನೆಲೆಯಲ್ಲಿ ಉಳಿದ  21 ಸದಸ್ಯರುಗಳನ್ನು  ಚುನಾವಣಾಧಿಕಾರಿಗಳಾದ ಬಸವರಾಜ್ ರಾಮಗೊಂಡನಹಳ್ಳಿ   ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ನೂತನವಾಗಿ ಆಯ್ಕೆಯಾದ ಸದಸ್ಯರುಗಳಾದ ಎಂ ಬಿ ದ್ಯಾಮಣ್ಣ ಯಕ್ಕನಹಳ್ಳಿ. ದೇವಿ ಕುಮಾರ್ ತಿಮ್ಮೇನಹಳ್ಳಿ ಜಗನ್ನಾಥ್ ಡಿ.ಜೆ ತಣ್ಣಿಗೆರೆ. ರವಿ ಕೆ.ಬಿ ಬಸವಪಟ್ಟಣ ಜಿ.ಕೆ ಸುರೇಶ್ ಹರಿಹರ ರೇವಣಸಿದ್ದಪ್ಪ ಗಂಗನರಿಸಿ ಬಿ ಮಲ್ಲೇಶಪ್ಪ ಕಮಲಾಪುರ ಎಲ್ ಬಿ ಬೈರೇಶ್ ಜಗಳೂರು ಎ ಮಂಜುನಾಥ ಕೊಕ್ಕನೂರು ಭಗತ್ ಸಿಂಗ್ ಚಿಕ್ಕ ಬೂದಿಹಾಳ ಎಸ್ ವೆಂಕಟೇಶ್ ಮಾಯ ಕೊಂಡ .ಬಿ ಷಣ್ಮುಖಪ್ಪ ಮಳಲ್ಕೆರೆ ಟಿ.ಬಿ ಮೂರ್ತಿ ಲೋಕಿಕೆರೆ ವೈ ವಿರೂಪಾಕ್ಷಪ್ಪ ಜಡಗನಹಳ್ಳಿ ಜೀ.ವಿ ಮಾಲತೇಶ್ ಹದಡಿ ಟಿ.ಟಿ. ಅವಿನಾಶ್ ದಾವಣಗೆರೆ ನಗರ ಎಚ್‌ಜಿ ಗಣೇಶಪ್ಪ ಹೊಸ ಕುಂದುವಾಡ .ಆರ್ ರಮೇಶ್ ದಾವಣಗೆರೆ ಎಂ.ಸಿ ರವಿ ದಾವಣಗೆರೆ ವೈ ಮಂಜುನಾಥ್ ದಾವಣಗೆರೆ ದೀಪಕ್ ಬಿ ಜೋಗಪ್ಪನವರ್ ದಾವಣಗೆರೆ ಈ ಮೇಲ್ಕಂಡ 21 ಸದಸ್ಯರುಗಳು ಅವಿರದವಾಗಿ ಸಮಾಜದ ಹಿರಿಯ ಮುಖಂಡರುಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ .ಇದೇ ತಿಂಗಳು 15 ರಂದು ಚುನಾವಣೆ ನಡೆಯಬೇಕಾಗಿದು.ಚುನಾವಣೆ ದಿನಾಂಕ ಪ್ರಕಟವಾಗಿದ್ದ ಹಿನ್ನೆಲೆಯಲ್ಲಿ ಸಮಾಜದ ಹಿರಿಯರ ನೇತೃತ್ವದಲ್ಲಿ ಚುನಾವಣೆ ಇಲ್ಲದೆ ಅವಿರತವಾಗಿ 21 ಸದಸ್ಯರುಗಳ ಮುಂದಿನ ಮೂರು ವರ್ಷದ ಅವಧಿಗೆ ಅವಿರದವಾಗಿ ಆಯ್ಕೆ ಮಾಡಲಾಗಿದೆ.