ಬೈಕ್‌ಗಳ ಡಿಕ್ಕಿ: ನಾಲ್ವರು ಗಂಭೀರ
ರಾಯಚೂರು.ಮಾ.೦೬- ಕೃಷ್ಣಾ ನದಿ ಮೇಲ್ಸೇತುವೆ ಮೇಲೆ ಎರಡು ದ್ವಿಚಕ್ರ ವಾಹನಗಳು ಮುಖಾಮುಖಿ ಡಿಕ್ಕಿಯಾಗಿ ನಾಲ್ಕು ಜನರಿಗೆ ಗಂಭೀರವಾಗಿ ಗಾಯವಾದ ಘಟನೆ ನಡೆದಿದೆ.
ರಾಯಚೂರು ತಾಲೂಕಿನ ದೇವಸುಗೂರು ಗ್ರಾಮದ ಬಳಿಯ ಕೃಷ್ಣನದಿ ಮೇಲ್ ಸೇತುವೆ ಮೇಲೆ ಅಪಘಾತ ಜರುಗಿದೆ. ಒಂದು ಬೈಕ್ ನಲ್ಲಿರುವ ಇಬ್ಬರು ಕುಡಿದ ಮತ್ತಿನಲ್ಲಿ ಮುಂದೆ ಬರುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಪರಿಣಾಮ ಎರಡೂ ಬೈಕ್ ನಲ್ಲಿರುವ ನಾಲ್ಕು ಜನರಿಗೆ ಗಂಭೀರ ಗಾಯವಾಗಿದ್ದು, ಚಿಕೆತ್ಸೆಗಾಗಿ ಸ್ಥಳೀಯ ಆಸ್ಪತ್ರೆ ದಾಖಲಿಸಲಿದೆ. ಘಟನೆಯು ತೆಲಂಗಾಣದ ಕೃಷ್ಣಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದ್ದು, ಪೊಲೀಸರು ಸ್ಥಳ ಪರಿಶೀಲನೆ ಮಾಡಿ ವಾಹನಗಳನ್ನು ವಶ ಪಡಿಕೊಂಡಿದ್ದಾರೆ.