ಬಲಿಷ್ಠ ಭಾರತಕ್ಕಾಗಿ ಬುಲೆಟ್ ಬೈಕ್ ಯಾತ್ರೆ
(ಸಂಜೆವಾಣಿ ವಾರ್ತೆ)
ಸಿಂಧನೂರುಮಾ.೬- ಬಲವಾದ ಭಾರತಕ್ಕಾಗಿ ಈ ದೇಶಕ್ಕಾಗಿ ಮತ್ತೊಮ್ಮೆ ಮೋದಿಗೆ ಮತ ನೀಡಿ ಎಂಬ ಜನರ ಅಭಿಪ್ರಾಯ ಸಲುವಾಗಿ ಬುಲೆಟ್ ಬೈಕ್ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆಂದು ಸಾದ್ವಿ ಮಾತಾ ರಾಜಲಕ್ಷ್ಮಿ ಹೇಳಿದರು.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ತಮಿಳುನಾಡು ರಾಜ್ಯದಿಂದ ದೆಹಲಿ ಗೆ ಸುಮಾರು ೧೫ ರಾಜ್ಯಗಳಲ್ಲಿ, ೨೧ ಸಾವಿರ ಕಿ.ಮಿ ಬುಲೆಟ್ ಬೈಕ್ ಯಾತ್ರೆ ನಡೆಸಿ ಕೊನೆಗೆ ಏಪ್ರಿಲ್ ೧೮ ಕ್ಕೆ ದೆಹಲಿಗೆ ತಲುಪಲು ಯೋಜನೆ ಹಾಕಿಕೊಳ್ಳಾಗಿದೆ.
ಮೊದಲು ತಮಿಳುನಾಡು ರಾಜ್ಯದಿಂದ ಆಂದ್ರಪ್ರದೇಶ ,ತೆಲಂಗಾಣ ರಾಜ್ಯದಲ್ಲಿ ಪ್ರವಾಸ ಮುಗಿಸಿ ಪ್ರಸಿದ್ಧ ಕರ್ನಾಟಕ ಮುಗಿಸಿ ಗೋವಾ, ಮಹಾರಾಷ್ಟ್ರ, ಹರಿಯಾಣ ರಾಜ್ಯಗಳಲ್ಲಿ ರ್ಯಾಲಿ ಮುಗಿಸಿ ಕೊನೆಗೆ ಏಪ್ರಿಲ್ ೧೮ ಕ್ಕೆ ದೆಹಲಿಗೆ ತಲುಪುತ್ತೆವೆಂದರು ಮತ್ತು ನಗರದಲ್ಲಿ ಜೈ ಶ್ರೀ ರಾಮ್ ಘೋಷಣೆ ಕೂಗುತ್ತಾ ,ಕಳಸದಿಂದ ಬೆಳಗಿ ಶುಭ ಕೊರಲಾಯಿತು.
ಪ್ರಧಾನಿ ನರೇಂದ್ರ ಮೋದಿಯವರನ್ನು ಮೂರನೇ ಅವಧಿಗೆ ಮತ್ತೊಮ್ಮೆ ಬೆಂಬಲಿಸಿ ಈ ದೇಶದ ಒಳಿತಿಗಾಗಿ ಬೆಂಬಲಿಸುವ ಸಲುವಾಗಿ ಈ ಬುಲೆಟ್ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆಂದರು. ಸಿಂಧನೂರು ನಗರದಲ್ಲಿ ಗಂಗಾವತಿ ರಸ್ತೆಯ ಬಿಜೆಪಿ ಕಾರ್ಯಾಲಯ ದಿಂದ ಪಿಡಬ್ಲೂಡಿ ಕ್ಯಾಂಪ್ ವರೆಗೆ ನಡೆಯಿತು.
ಬಿಜೆಪಿ ಮುಖಂಡರಾದ ಕ.ಕರಿಯಪ್ಪ, ಅಮರೇಶ ರೈತ ನಗರ ಕ್ಯಾಂಪ್, ಕೆ.ಹನುಮೇಶ, ಯಂಕನಗೌಡ ಮಲ್ಕಾಪುರ, ಯಂಕೋಬ ನಾಯಕ ರಾಮತ್ನಾಳ, ಎಂ.ದೊಡ್ಡ ಬಸವರಾಜ, ಮದ್ವರಾಜ ಆಚಾರ್ಯಾ, ವಿರೇಶ ಇಲ್ಲೂರು, ಮಲ್ಲಿಕಾರ್ಜುನ ಜೀನೂರು, ಪರಮೇಶಪ್ಪ ಆದಿಮನಿ, ಕೆ.ವೆಂಕಟೇಶ, ನಿರುಪಾದೆಪ್ಪ ಜೋಳದರಾಶಿ, ಹನುಮೇಶ ಸಾಲಗುಂದಾ, ಶಿವಬಸನಗೌಡ, ಶೈಲಜಾ ಹಿರೇಮಠ ಜಯಶ್ರೀ ರಡ್ಡಿ, ಸ್ನೇಹ ಹಿರೇಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.