ಆಸ್ಪತ್ರೆಯ ಕಾಂಪೌಂಡ್ ನಿರ್ಮಾಣಕ್ಕೆ ಶಾಸಕರಿಂದ ಚಾಲನೆ.
ಗುಣಮಟದ ಕಾಮಗಾರಿ ಮಾಡಬೇಕುಸಿರವಾರ.ಮಾ.೦೬- ಆರೋಗ್ಯ ಕೇಂದ್ರದ ಒಳಗಡೆ ದನಗಳು, ಇನ್ನಿತರ ವಾಹಗಳು ಒಳ ನುಸುಳದಂತೆ ಕಾಂಪೌಂಡ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ, ಗುತ್ತಿಗೆದಾರರು ಗುಣಮಟದ ಕಾಮಗಾರಿಯನ್ನು ಮಾಡಬೇಕು ಎಂದು ಮಾನ್ವಿ ಕ್ಷೇತ್ರದ ಶಾಸಕರಾದ ಜಿ.ಹಂಪಯ್ಯನಾಯಕ ಹೇಳಿದರು.ತಾಲೂಕಿನ ಬಲ್ಲಟಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಈ ಕೇಂದ್ರಕ್ಕೆ ಕಾಂಪೌಂಡ ಇಲ್ಲದೆ ಇರುವುದರಿಂದ ದನ ಕರುಗಳು ಒಳಗಡೆ ಬರುತ್ತಿರುವುದರಿಂದ ಆಸ್ಪತ್ರೆಗೆ ಬರಯವವರಿಗೆ ತೊಂದರೆಯಾಗುತ್ತಿತು. ಕಾಂಪೌಂಡ ನಿರ್ಮಿಸುವಂತೆ ಬಹಳಷ್ಟು ಬೇಡಿಕೆ ಇತು. ಅದರನ್ವಯ ಸುಮಾರು ೮ ಲಕ್ಷ ವೆಚ್ಚದಲ್ಲಿ ಕಾಂಪೌಂಡ್ ನಿರ್ಮಿಸಲಾಗುತ್ತಿದೆ, ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಯನ್ನು ನಿರ್ಮಿಸಬೇಕು ಎಂದರು.ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮಲ್ಲಿಕಾರ್ಜುನ, ಮುಖಂಡರುಗಳಾದ ರವಿ ಕುಮಾರ್ ನುಗುಡೊಣಿ, ರಂಗಾರೆಡ್ಡಿ ವಕೀಲರು, ಬೀರಪ್ಪ, ತಿಮ್ಮಪ್ಪ ಹರವಿ, ವೆಂಕಟೇಶ್ ಗ್ರಾಮದ ಮುಖಂಡರುಗಳು ಇನ್ನಿತರರು ಉಪಸ್ಥಿತರಿದ್ದರು.