ತಾಯಿ ಮಕ್ಕಳ ಆಸ್ಪತ್ರೆ ತಜ್ಞ ವೈದ್ಯರ ನೇಮಕಕ್ಕೆ ಆಗ್ರಹ – ಪರಶುರಾಮ ಅರೋಲಿ
ಸಂಜೆವಾಣಿ ವಾರ್ತೆ
ಮಾನ್ವಿ.ಮಾ.೦೬- ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯಲ್ಲಿ ೬೦ ಹಾಸಿಗೆಯುಳ್ಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಚುನಾವಣೆ ಅವಸರದಲ್ಲಿ ಯಾವುದೇ ತಜ್ಞ ವೈದ್ಯರನ್ನು ನೇಮಕ ಮಾಡದೆ ಉದ್ಘಾಟನೆ ಮಾಡಿ ಜನರ ಜೀವನದ ಜೊತೆಗೆ ಚಲ್ಲಾಟವಾಡುವಂತಾಗಿದೆ.
ಕೂಡಲೇ ರಾಯಚೂರು ಜಿಲ್ಲಾಡಳಿತ, ಆರೋಗ್ಯ ಇಲಾಖೆ ವಿಶೇಷವಾಗಿ ಕ್ಷೇತ್ರದ ಶಾಸಕರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಆಸ್ಪತ್ರೆಗೆ ಬೇಕಾಗುವ ವೈದ್ಯಕೀಯ ಸೇವೆಯನ್ನು ಕೂಡಲೇ ಒದಗಿಸಬೇಕು ಇಲ್ಲವಾದಲ್ಲಿ ಕರ್ನಾಟಕ ಸಮತಾ ಸೈನಿಕ ದಳದಿಂದ ಉಗ್ರವಾದ ಹೋರಾಟವನ್ನು ಎದುರಿಸಬೇಕಾಗುತ್ತದೆ ಎಂದು ಜಿಲ್ಲಾಧ್ಯಕ್ಷ ಪರಶುರಾಮ ಅರೋಲಿ ಹೇಳಿದರು.
ಪಟ್ಟಣದ ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು ಆರಂಭದಿಂದ ಇಲ್ಲಿಯವರೆಗೆ ತಾಯಿ ಮಕ್ಕಳ ಚಿಕಿತ್ಸೆ ಹಾಗೂ ರಾಯಚೂರು ಆಸ್ಪತ್ರೆಗೆ ರವಾನೆ ಮಾಡಿರುವ ಎಲ್ಲ ಅಂಕಿಅಂಶಗಳ ವಿವರಣೆಯನ್ನು ನೀಡಿದ ಅವರು ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಬದಲಾಗಿ ರಾಯಚೂರಿಗೆ ರವಾನೆ ಮಾಡಿರುವ ಪ್ರಕರಣಗಳೇ ಹೆಚ್ಚಾಗಿವೆ ಹಾಗೂ ಈ ಆಸ್ಪತ್ರೆಯಲ್ಲಿ ತಜ್ಞ ವೈದ್ಯರನ್ನು, ನರ್ಸ್ ಗಳನ್ನು, ಸಿಬ್ಬಂದಿಗಳು, ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ನೀಡುವಂತೆ ಒತ್ತಾಯಿಸಿತು ಪ್ರಮುಖವಾಗಿ ಪಟ್ಟಣದಲ್ಲಿರುವ ತಾಯಿ ಮಕ್ಕಳ ಆಸ್ಪತ್ರೆಯ ಸುತ್ತಮುತ್ತಲಿನಲ್ಲಿರುವ ವಿದ್ಯುತ್ ಟಿಸಿಗಳನ್ನು ಕೂಡಲೇ ಸ್ಥಳಾಂತರ ಮಾಡಬೇಕು ಹಾಗೂ ನುರಿತ ವೈದ್ಯರನ್ನು ನೇಮಕ ಮಾಡಿ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸುವ ತಾಯಿ ಹಾಗೂ ಮಕ್ಕಳನ್ನು ರಾಯಚೂರು ಜಿಲ್ಲಾ ಆಸ್ಪತ್ರೆಗೆ ಕಳಿಸುವ ಬದಲಾಗಿ ಇಲ್ಲಿಯೇ ಸೂಕ್ತ ಚಿಕಿತ್ಸೆ ದೊರಕುವಂತೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾಗಿದೆ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘದ ಭೀಮರಾಯ ಅತ್ತೂನೂರು, ಉಪಾಧ್ಯಕ್ಷ, ಡಿ.ಹೆಚ್.ಭೀಮಣ್ಣ ಸಿರವಾರ, ಬಾಲಪ್ಪ ಮಾಚನೂರು, ಚನ್ನಬಸವ ಮಾಡಗಿರಿ, ಸೇರಿದಂತೆ ಇತರರು ಇದ್ದರು.