ಪರೀಕ್ಷಾ ತಯಾರಿ ಕಾರ್ಯಕ್ರಮ
ಧಾರವಾಡ, ಮಾ6: ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಪ್ರೌಢ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಮಕ್ಕಳಿಗಾಗಿ ಪರೀಕ್ಷಾ ತಯಾರಿ ಮತ್ತು ಸರಸ್ವತಿ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಗಳಾಗಿ ಗುರುಪುತ್ರ ಶಿರೋಳ ಹಾಗೂ ಐಟಿಐ ಕಚೇರಿ ಅಧೀಕ್ಷಕ ಶಿವಲಿಂಗ ನೀಲಗುಂದ ಆಗಮಿಸಿದ್ದರು. ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ.ಭುವನೇಶ್ವರಿ ದಂಡಿನ ವಹಿಸಿದ್ದರು.
ಮುಖ್ಯ ಅತಿಥಿಗಳಾದ ಗುರುಪುತ್ರ ಶಿರೋಳ ಇವರು ಮಾತನಾಡಿ ಸಮಯವು ಯಾರ ಸ್ವಂತ ಸ್ವತ್ತಲ್ಲ ಅದನ್ನು ಹಿಡಿದು ಇಟ್ಟುಕೊಳ್ಳಲು ಸಾಧ್ಯವಿಲ್ಲ. ಅದಕ್ಕಾಗಿ ಪಾಠ ಕೇಳುವಾಗ ಚಿತ್ತವೆಲ್ಲ ಪಾಠದ ಮೇಲೆ ಇರಬೇಕು. ಅದರಿಂದ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಸಾಧ್ಯವೆಂದರು.
ಶ್ರೀಮತಿ.ಮಂಜುಳಾ ಹನಸಿ, ಶ್ರೀಮತಿ. ಪ್ರತಿಭಾ ಪಾಟೀಲ, ಶ್ರೀಮತಿ. ಶಶಿಕಲಾ ಹಿರೇಮಠ, ವೀಣಾ ಚಿನ್ನದಕೈ, ರೇಣುಕಾ ಹೆಬ್ಬಳ್ಳಿ ಹಾಜರಿದ್ದರು.