ವೀರಪ್ಪನ್ ಕೇಸ್‍ಗಳಲ್ಲಿ ಆರೋಪಿಯಾಗಿದ್ದ ಸ್ಪೆಲ್ಲಾ ಮೇರಿ ಖುಲಾಸೆ
ಸಂಜೆವಾಣಿ ವಾರ್ತೆ
ಚಾಮರಾಜನಗರ,ಮಾ.06:- ವೀರಪ್ಪನ್ ಗ್ಯಾಂಗಿನಲ್ಲಿ ಗುರುತಿಸಿಕೊಂಡು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಆರೋಪ ಹೊತ್ತಿದ್ದ ಸ್ಟೆಲ್ಲಾ ಮೇರಿ ಆರೋಪ ಮುಕ್ತರಾಗಿದ್ದಾರೆ.
ಚಾಮರಾಜನಗರ ಬಾಲನ್ಯಾಯ ಮಂಡಲಿಯು ಸ್ಟೆಲ್ಲಾ ಮೇರಿ ವಿರುದ್ಧ ದಾಖಲಾಗಿದ್ದಎಲ್ಲಾ ಪ್ರಕರಣಗಳಿಂದ ಕಳೆದ ವಾರ ಖುಲಾಸೆಗೊಳಿಸಿದ್ದು ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ. 13ರ ಹರೆಯದಲ್ಲಿ ಅಪಹರಣಕ್ಕೊಳಗಾಗಿ ವೀರಪ್ಪನ್ ಗ್ಯಾಂಗ್‍ನಲ್ಲಿರಬೇಕಾದ ಪರಿಸ್ಥಿತಿ ಬಂದೊದಗಿತ್ತು. ಸ್ಟೆಲ್ಲಾ ಮೇರಿ ಪಾಲಾರ್ ಬಾಂಬ್ ಸ್ಟೋಟ, ರಾಮಾಪುರ ಠಾಣೆಗೆ ಬೆಂಕಿ, ಶಸ್ತ್ರಾಸ್ತ್ರ ಹೊದ್ದೊಯ್ದ ಪ್ರಕರಣಗಳಲ್ಲಿ ಆರೋಪಿಯಾಗಿದ್ದರು.
27ವರ್ಷಗಳ ಬಳಿಕ ಬಂಧಿತಳಾಗಿದ್ದ ಸ್ಟೆಲ್ಲಾ: ಪ್ರಕರಣಗಳು ನಡೆದ 27 ವರ್ಷದ ಬಳಿಕ ಕೊಳ್ಳೇಗಾಲ ತಾಲೂಕಿನ ಜಾಗೇರಿಯಲ್ಲಿ ಅಪರಾಧ ಪತ್ತೆ ದಳ ಬಂಧಿಸಿ ಪ್ರಕರಣವನ್ನು ಮತ್ತೇತೆರೆದಿತ್ತು. ಆರಂಭದಲ್ಲಿ ಜಿಲ್ಲಾ ನ್ಯಾಯಾಲಯದಲ್ಲಿ ಇದ್ದ ಪ್ರಕರಣ ಬಳಿಕ ಬಾಲ ನ್ಯಾಯಮಂಡಲಿಗೆ ವರ್ಗಾಯಿಸಲಾಗಿತ್ತು.
ಈ ಕುರಿತುಕಕ್ಷಿದಾರರ ಪರವಾಗಿ ವಾದಿಸಿದ ವಕೀಲ ಪಿ.ಪಿ.ಬಾಬುರಾಜ್ ಪ್ರತಿಕ್ರಿಯಿಸಿ, ವೀರಪ್ಪನ್‍ಗ್ಯಾಂಗ್‍ನಿಂದ ಅಪಹರಣಕ್ಕೊಳಗಾಗಿ ಬಳಿಕ ಪೆÇಲೀಸರ ಕಣ್ತಪ್ಪಿನಿಂದ ಪ್ರಕರಣಗಳಲ್ಲಿ ಈಕೆಯ ಹೆಸರು ಸೇರಿತ್ತು.
ಸಾಕ್ಷ್ಯಾಧಾರಗಳ ಕೊರತೆಯಿಂದ ಹಾಗೂ ಘಟನೆಗಳು ನಡೆದ ವೇಳೆ ಅಪ್ರಾಪ್ತೆಯಾಗಿದ್ದರಿಂದ ಬಾಲನ್ಯಾಯಮಂಡಲಿಯು ಎಲ್ಲಾ ಪ್ರಕರಣಗಳಿಂದ ಸ್ಟೆಲ್ಲಾ ಮೇರಿಯನ್ನು ಖುಲಾಸೆಗೊಳಿಸಿದೆ ಎಂದು ತಿಳಿಸಿದರು.