ಭಗವಂತನಿಗೆ ಭಕ್ತಿ ಎಂಬ ಮತ ನೀಡಿದರೆ, ಆಶೀರ್ವಾದ ಎಂಬ ರಕ್ಷಾ ಕವಚ ದೊರೆಯುತ್ತದೆ: ಹಾರಕೂಡ ಶ್ರೀಗಳು
ಸಂಜೆವಾಣಿ ವಾರ್ತೆ
ಬೀದರ್:ಮಾ.6: ಪರಿಶುದ್ಧವಾದ ಮನಸ್ಸಿನಿಂದ ಭಗವಂತನಿಗೆ ಭಕ್ತಿ ಎಂಬ ಮತ ನೀಡಿದರೆ ಆಶೀರ್ವಾದ ಎಂಬ ರಕ್ಷಾ ಕವಚ ನಮ್ಮನ್ನು ಯಾವತ್ತೂ ಕಾಪಾಡುತ್ತದೆ.
ಒಂದು ಊರಲ್ಲಿ ದೇವಾಲಯ ನಿರ್ಮಾಣ ಮಾಡುವುದಂದರೆ ಆ ಊರಿನ ಎಲ್ಲಾ ಜನತೆಯ ಭಕ್ತಿಯ ಕೂಡುವಿಕೆಯ ಶ್ರೇಷ್ಠ ಸಾಮರಸ್ಯದ ಸಂಕೇತವೇ ಆಗಿದೆ ಎಂದು ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ನುಡಿದರು. ತಾಲೂಕಿನ ಹತ್ಯಾಳ ಗ್ರಾಮದಲ್ಲಿ ಸಿದ್ದಯ್ಯಪ್ಪ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು ಬೇರೆ ಬೇರೆ ರೂಪಗಳಲ್ಲಿ ದೇವರ ಸ್ವರೂಪವನ್ನು ಕಂಡರೂ ದೈವತ್ವ ಮಾತ್ರ ಒಂದೇ ಎಂಬುದು ಸಾರ್ವಕಾಲಿಕ ಸತ್ಯವಾದ ನಿಲುವು.
ಅಚಲವಾದ ಭಕ್ತಿ ಶ್ರದ್ಧೆ ನಂಬಿಕೆಯಿಂದ ದೇವರು ಸಂತುಷ್ಟನಾಗುತ್ತಾನೆಯೇ ಹೊರತು ಕೇವಲ ಬೌದ್ಧಿಕ ಪರಿಕರಗಳಿಂದಲ್ಲ.
ದೃಢವಾದ ನಂಬಿಕೆ ಭವಸಾಗರದ ತೀರ ತಲುಪಿಸುತ್ತದೆ. ಅಷ್ಟ ಕಲಶ ಭೂಷಿತವಾದ ಹತ್ಯಾಳ ಗ್ರಾಮ ಸಿದ್ದಯ್ಯಪ್ಪನವರ ಮಂದಿರ ಗ್ರಾಮದ ಭೌತಿಕ ಹೆಚ್ಚಿಸುವುದರೊಂದಿಗೆ ಪ್ರತಿಯೊಬ್ಬರ ಆತ್ಮ ಸೌಂದರ್ಯಮಾಡಿ ಕೊಳ್ಳಲಿ ಎಂದು ಶುಭ ಹಾರೈಸಿದರು.
ರಮೇಶ ದಾದಾರಾವ ಪಾಟೀಲ ಸ್ವಾಗತಿಸಿದರು.
ಸಿದ್ರಾಮ ಭುಜಂಗೆ,ನಾಗಣ್ಣ ಚೌದರಿ, ಮಹೇಶ ಮೂಳೆ, ಸಂತೋಷ ಪಾಟೀಲ, ಸಿದ್ರಾಮ ಮೊಳೆ, ಶಿವಾಜಿ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.