ಮಕ್ಕಳನ್ನು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿ: ಡಾ. ರವೀಂದ್ರ ಬೆಳ್ಳಿ ಸಲಹೆ
ವಿಜಯಪುರ ಮಾ 06: ಮಕ್ಕಳಿಗೆ ಬಾಲ್ಯದಲ್ಲಿಯೇ ಅವರನ್ನು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿ ಮೋಬೈಲ್ ಗೀಳಿನಿಂದ ದೂರವಿಡಬೇಕೆಂದು, ವಿಜಯಪುರ ಕೃಷಿ ಮಹಾವಿದ್ಯಾಲಯ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಹೇಳಿದರು. ಅವರಿಂದು ವಿಜಯಪುರದ ಗುರುಪಾದೇಶ್ವರ ನಗರದÀ ಶ್ರೀ ಸದ್ಗುರು ಪೂರ್ವಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹಸಮ್ಮೇಳನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಇಂದು ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಲು ಪೈಪೊಟಿ ನಡೆಸುತ್ತಿದ್ದಾರೆ, ಅದೊಂದು ಉತ್ತಮ ಬೆಳವಣಿಗೆ. ಆದರೆ, ಮಕ್ಕಳಿಗೆ ಪಾಠದ ಜೊತೆಗೆ ಮನೆಯಲ್ಲಿ ಹೊಂ ವರ್ಕ ಮತ್ತು ಇತರ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡಬೇಕೆಂದರು. ಇನ್ನೋರ್ವ ಮುಖ್ಯಅತಿಥಿ ದರಬಾರ ಕಾಲೇಜ ಪ್ರಾಂಶುಪಾಲ ಡಾ. ವಿನಾಯಕ ಗ್ರಾಮ ಪುರೋಹಿತ ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಅನೇಕ ಖಾಸಗಿ ಸಂಸ್ಥೆಗಳು ಶ್ರಮವಹಿಸುತ್ತಿವೆ. ಮಕ್ಕಳಿಗೆ ಬಾಲ್ಯದಿಂದಲೇ ಅವರಿಗೆ ಉತ್ತಮ ಸಂಸ್ಕಾರ ಕೊಡಿಸಬೇಕೆಂದರು. ಶಿಕ್ಷಣ ಸಂಯೋಜಕ ಸುಭಾನ ಶರೀಫ್, ಸಮೂಹ ಸಂಪನ್ಮೂಲ ವ್ಯಕ್ತಿ ವಿರೇಶ ಮಹಾಶೆಟ್ಟಿ, ನಿವೃತ್ತ ಶಿಕ್ಷಕ ರಾಘವೇಂದ್ರ ಜೋಶಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಶಾಲೆಯಲ್ಲಿ ವಿವಿಧ ಸ್ಪರ್ದೆಗಳಲ್ಲಿ ವಿಜೇತರಾದ ಚಿಣ್ಣರಿಗೆ ಅತಿಥಿಗಳು ಪದಕ ಪ್ರಶಸ್ತಿಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಸಂಸ್ಥಾಪಕರಾದ ರವೀಂದ್ರ ಜಾದವ್, ಜಯಶ್ರೀ ಜಾದವ್, ನಿರ್ದೇಶಕ ವಸಂತ ಬಜಂತ್ರಿ, ಮುಖ್ಯ ಗುರುಮಾತೆ ಸ್ನೇಹಾ ಕುಲಕರ್ಣಿ, ಶಿಕ್ಷಕಿಯರಾದ ವಾಣಿ ದೇಶಪಾಂಡೆ, ಶ್ರೀದೇವಿ ಕುಲಕರ್ಣಿ, ರೇಖಾ ಗುಳಬಾಳ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು, ಪಾಲಕರು, ಬಡಾವಣೆಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.