ಸ್ವಯಂಚಾಲಿತ ಕಬ್ಬುನಾಟಿ ಮಾಡುವ ಯಂತ್ರದ ಅವಿಷ್ಕಾರಕ್ಕೆ ಇಂಡಿಯನ್ ಪೇಟೆಂಟ್ “
ಸಂಜೆವಾಣಿ ವಾರ್ತೆ,
ವಿಜಯಪುರ,ಮಾ.6:ಜಿಲ್ಲೆಯ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ವಚನ ಪಿತಾಮಹ ಡಾ. ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹ ಪ್ರಾಧ್ಯಾಪಕ ಡಾ. ಸಮೀರ ಎಸ್. ಕುಲಕರ್ಣಿ ಅವರು ಹಾಗೂ
ವಿದ್ಯಾರ್ಥಿಗಳು ನೂತನವಾಗಿ ಆವಿಷ್ಕಾರ ಮಾಡಿದ ಸಂಶೋಧನೆ “ಸ್ವಯಂಚಾಲಿತ ಕಬ್ಬುನಾಟಿ ಮಾಡುವ ಯಂತ್ರ” ಈ ಅವಿಷ್ಕಾರಕ್ಕೆ ಭಾರತ ಸರ್ಕಾರದ “ಪೆಟೆಂಟ್ ಕಾರ್ಯಾಲಯವು (ಬೌದ್ಧಿಕ ಆಸ್ತಿ ಸ್ವಾಮ್ಯ ಪ್ರಮಾಣ ಪತ್ರ) ಪೇಟೆಂಟ್ ದೊರಕಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ವಿ.ಜಿ.ಸಂಗಮ ತಿಳಿಸಿದ್ದಾರೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ದುಬಾರಿ ಯಂತ್ರಗಳು ಹೆಚ್ಚು ಖರ್ಚಿನೊಂದಿಗೆ ರೂ.8500ರ ವರೆಗೆ ಲಭ್ಯ ಇರುತ್ತದೆ. ಆದರೆ ನೂತನವಾಗಿ ಆವಿಷ್ಕಾರಗೊಳಿಸಿದ ಕಬ್ಬು ನಾಟಿ ಮಾಡುವ ಯಂತ್ರ ಕೇವಲ ರೂ.3500 ಖರ್ಚಿನಲ್ಲಿ ಇಬ್ಬರು ಕೆಲಸಗಾರರ ಸಹಾಯದಿಂದ ಒಂದು ಎಕರೆ ಜಮೀನಿನಲ್ಲಿ ಎರಡೂವರೆ ತಾಸಿನಲ್ಲಿ ಸ್ವಯಂ ಚಾಲಿತವಾಗಿ ಕಬ್ಬು ಕಟಾವು ಮಾಡಿ 3 ಅಡಿ, 4 ಅಡಿ, 5 ಅಡಿ ಅಳತೆಗಳಿಗೆ ಹೊಂದಾಣಿಕೆಯಾಗುವಂತೆ ಸಾಲು ಕೊರೆದು ಕಬ್ಬುನಾಟಿ ಮಾಡಿ ಬೋದ ಏರಿಸುವ ಕೆಲಸವನ್ನು ಮಾಡುತ್ತದೆ. ಈ ನೂತನ ಕೃಷಿ ಪರಿಕರ ಕಬ್ಬು ಬೆಳೆಯುವ ರೈತರಿಗೆ ವರದಾನ ಆಗಲಿವೆ. ಕಡಿಮೆ ಖರ್ಚಿನಲ್ಲಿ ನಾಟಿ ಮಾಡಲು ಸಾಧ್ಯವಾಗಲಿವೆ. ಬಿ.ಎಲ್.ಡಿ.ಇ ತಾಂತ್ರಿಕ ಮಹಾವಿದ್ಯಾಲಯವು ಸಮಾಜಮೂಖಿಯಾದ ಕೆಲಸಗಳನ್ನು
ಕೈಗತ್ತಿಗೊಂಡು ತಂತ್ರಜ್ಞಾನವನ್ನು ಸರಳ ರೀತಿಯಲ್ಲಿ ವರ್ಗಾವಣೆ ಮಾಡಿ ನಾಡಿನ ರೈತರಿಗೆ ಸಹಾಯ ಮಾಡಲಿವೆ.
ಭವಿಷ್ಯದಲ್ಲಿ ಈ ಯಂತ್ರವು ಸ್ಪರ್ಧಾತ್ಮಕ ಬೆಲೆಯಲ್ಲಿ ಸಿಗಬಹುದು. ಹೆಚ್ಚಿನ ಮಾಹಿತಗಾಗಿ ಪೆÇ್ರ.ಸಮೀರ
ಕುಲಕರ್ಣಿ ಮೊಬೈಲ ಸಂಖ್ಯೆ 9448972991 ಸಂಪರ್ಕಸಬಹುದು.
ಡಾ|. ಸಮೀರ ಎಸ್.ಕುಲಕರ್ಣಿ ಅವರ ಸಾಧನೆಗೆ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷರು,
ಪದಾಧಿಕಾರಿಗಳು, ಪ್ರಾಚಾರ್ಯರು ವಿಭಾಗ ಮುಖ್ಯಸ್ಥರು ಭೋದಕ ಭೋದಕೇತರ ಸಿಬ್ಬಂದಿ ಹಾಗೂ
ವಿದ್ಯಾರ್ಥಿಗಳು ಶುಭ ಹಾರೈಸಿದ್ದಾರೆ.