ಹಡಪದ ಸಮಾಜಕ್ಕೆ ಸಿ.ಎ. ಸೈಟ್ ಒದಗಿಸಬೇಕೆಂದು ಕುಡಾ ಅಧ್ಯಕ್ಷರಿಗೆ ಮನವಿ
ಕಲಬುರಗಿ:ಮಾ.5: ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ (ರಿ) ತಾಲೂಕಾ ಘಟಕದ ತಾಲೂಕ ಅಧ್ಯಕ್ಷ ಚಂದ್ರಶೇಖರ ತೋನಸನಹಳ್ಳಿ ನೇತೃತ್ವದಲ್ಲಿ ಕಲಬುರಗಿ ನಗರದಲ್ಲಿ ತಾಲೂಕಾ ಹಡಪದ ಸಮಾಜಕ್ಕೆ ಸಿ.ಎ. ಸೈಟ್ ಒದಗಿಸಬೇಕೆಂದು ನೂತನ ಕುಡಾ ಅಧ್ಯಕ್ಷ ಮಜರ ಆಲಂಖಾನ್ ಅವರಿಗೆ ಮನವಿ ಸಲ್ಲಿಸಿದರು.
ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜವು ಅನಾದಿ ಕಾಲದಿಂದ ಸಮಾಜಿಕ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದು, ಇಲ್ಲಿವರೆಗೆ ನಮ್ಮ ಸಂಘಕ್ಕೆ ಯಾವದೇ ರೀತಿಯ ಸ್ವಂತ ಸ್ಥಳ ಇರುವುದಿಲ್ಲ ಮತ್ತು ಭವನಗಳು ಇರುವುದಿಲ್ಲ. ಆದ್ದರಿಂದ ಸಂಘದ ಚಟುವಟಿಕೆಗಳು ಜರುಗಿಸಬೇಕಾದಲ್ಲಿ ತುಂಬಾ ತೊಂದರೆಯಾಗುತ್ತಿದ್ದು, ಕಾರಣ ತಾವು ಕಲಬುರಗಿ ನಗರ ಅಥವಾ ತಾಲೂಕಿನ ಯಾವುದೇ ದಿಕ್ಕಿನಲ್ಲಿ ಸಿ.ಎ ಸೈಟ್ ಒದಗಿಸಿಕೊಡಬೇಕೆಂದು ಮತ್ತು ಈ ಸಮಾಜ ಅತೀ ಕಡುಬಡತನದ ಸಂಘವಾಗಿದ್ದು, ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಶಾಹಾಬಾದ ಹಡಪದ ಅಪ್ಪಣಾ ದೇವಸ್ಥಾನದ ಸ್ವಾಮಿಜಿ ಶ್ರೀ ಬಾಲ ಬ್ರಹ್ಮಚಾರಿ ರಾಜ ಶೀವಯೋಗಿ, ಜಿಲ್ಲಾ ಗೌರವಾಧ್ಯಕ್ಷ ಬಸವರಾಜ ಸೂಗೂರ, ಜಿಲ್ಲಾ ಕಾರ್ಯಧ್ಯಕ್ಷ ಭಗವಂತ ಹಡಪದ ಕಿರಣಗಿ, ಜಿಲ್ಲಾ ಉಪಾಧ್ಯಕ್ಷ ಅಪಣ್ಣಾ ಬಟಗೇರಾ, ಉಪಾಧ್ಯಕ್ಷರಾದ ಪ್ರಕಾಶ ಫರಹತಾಬಾದ, ಶೇಖರ ಹದಪದ ಪಟ್ಟಣ, ಪ್ರ.ಕಾರ್ಯದರ್ಶಿ ವಿನೋದ ಅಂಬಲಗಾ, ಸಂಘಟನಾ ಕಾರ್ಯದರ್ಶಿ ಧೋಳಪ್ಪ ಪೇಠಶೀರೂರ, ಜಿ.ಪ್ರರ್ಯದರ್ಶಿ ರಮೇಶ ನೀಲೂರ, ಜಿ.ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಸೂಗೂರ, ನಗರ ಅಧ್ಯಕ್ಷ ಮಲ್ಲಿಕಾರ್ಜುನ ಸಾವಳಗಿ, ಶಹಾಬಾದ ತಾ.ಅಧ್ಯಕ್ಷ ಅನೀಲ ಹಡಪದ, ಕಾರ್ಯದರ್ಶಿ ತೋಟೇಂದ್ರ ಹಡಪದ ಇದ್ದರು.