ಮಹಾ ಶಿವರಾತ್ರಿ ನಿಮಿತ್ಯ ವಿದ್ಯಾನಗರದಲ್ಲಿದೀಪೋತ್ಸವ, ಸಂಗೀತೋತ್ಸವ, ಹಾಸ್ಯ ವಿವಿಧ ಕಾರ್ಯಕ್ರಮಗಳು
ಕಲಬುರಗಿ:ಮಾ.5:ಕಲಬುರಗಿ ಸೇಡಂ ರಸ್ತೆ ಬಸವೇಶ್ವರ ಆಸ್ಪತ್ರೆಯ ಎದುರುಗಡೆಯಿರುವ ವಿದ್ಯಾನಗರ ಕಾಲೋನಿಯ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಮಾರ್ಚ 08ರಂದು ಶುಕ್ರಮವಾರ ಸಾಯಂಕಾಲ 6:30ಗಂಟೆಗೆ ಮಹಾ ಶಿವರಾತ್ರಿ ನಿಮಿತ್ಯ ಸಂಗೀತೋತ್ಸ, ದೀಪೋತ್ಸವ, ಹಾಸ್ಯಸಂಜೆ, ಏಕಪಾತ್ರ ಅಭಿನಯ, ಭರತನಾಟ್ಯ, ಭಜನೆ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ ಎಂದು ವಿದ್ಯಾನಗ ವೆಲ್‍ಪೇರ ಸೊಸೈಟಿಯ ಕಾರ್ಯದರ್ಶಿ ಶಿವರಾಜ ಅಂಡಗಿ ಅವರು ತಿಳಿಸಿದ್ದಾರೆ.
ದೀಪೋತ್ಸವ ಹಾಗು ಸಂಗೀತೋತ್ಸವ ಕಾರ್ಯಕ್ರಮವನ್ನು ಕಲಬುರಗಿ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಫೌಜಿಯಾ ತರನ್ನುಮ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಂ.ಬಿ.ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾದ ಶಿವಾನಂದ ವಾಲೀಕಾರ ಆಗಮಿಸಲಿದ್ದಾರೆ. ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಯಂಕಮ್ಮ ಜಗದೇವ ಗುತ್ತೇದಾರ ಅತಿಥಿಗಳಾಗಿ ಆಗಮಿಸಲಿದ್ದಾರೆ.ವಿದ್ಯಾನಗರ ವೆಲ್‍ಫೇರ ಸೊಸೈಟಿಯ ಅಧ್ಯಕ್ಷ ಮಲ್ಲಿನಾಥ ದೇಶಮುಖ ಅಧ್ಯಕ್ಷತೆ ವಹಿಸಲಿದ್ದಾರೆ. ದೀಪೋತ್ಸವ ಕಾರ್ಯಕ್ರಮದ ಪ್ರಾಯೋಜಕರಾದ ವಿಶ್ವನಾಥ ರಟಕಲ್, ಸಂಗೀತ ಕಾರ್ಯಕ್ರಮದ ಪ್ರಾಯೋಜಕರಾದ ಉಮೇಶ ಶೆಟ್ಟಿ ಉಪಸ್ಥಿತರಿರುವರು.
ಹಾಸ್ಯಚಕ್ರವರ್ತಿ ಎಂದೆ ಪ್ರಖ್ಯಾತಿ ಪಡೆದ ಗುಂಡಣ್ಣ ಡಿಗ್ಗಿ ಹರಸೂರ ಅವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ಜರುಗಲಿದೆ. ಖ್ಯಾತ ಗಾಯಕರಾದ ಕವಿರಾಜ ಮಾಲಿಪಾಟೀಲ ಮೈಸಲಗಾ ಹಾಗೂ ಸೂರ್ಯಕಾಂತ ಬಿರಾದಾರ ಗಾಯನ ಮಾಡಲಿದ್ದಾರೆ. ದಿಲೀಪಕುಮಾರ ದೇಸಾಯಿ ಅವರು ಹಾರ್ಮೋನಿಯಂ, ಅಕ್ಷಯಕುಮಾರ ಮಾಣಿಕನಗರ ತಬಲಾ ಸಾಥ ನೀಡಲಿದ್ದಾರೆ. ಕಾರ್ಯಕ್ರಮದ ಮಧ್ಯದಲ್ಲಿ ಕುಮಾರಿ ಧಾನೇಶ್ವರಿ ಅವರಿಂದ ಭರತನಾಟ್ಯ ಹಾಗು ಟಿ.ವಿ 5 ಕನ್ನಡ ಚಾನೆಲ್ ಡ್ರಾಮಾ ಜ್ಯೂನಿಯರ ಕಲಾವಿದ ವಾಸು ಪಾಟೀಲ ಅವರಿಂದ ಏಕಪಾತ್ರಬಿನಯ ಪಾತ್ರ ಪ್ರಸ್ತುತಪಡಿಸಲಿದ್ದಾರೆ. ನಂತರ ವಿದ್ಯಾನಗರ ವೆಲ್‍ಫೇರ ಸೊಸೈಟಿಯ ಅಕ್ಕಮಹಾದೇವಿ ಮಹಿಳಾ ಟ್ಟಸ್ಟ ಸದಸ್ಯರಿಂದ ವಿಶೇಷ ಭಜನೆ ಕಾರ್ಯಕ್ರಮ ಜರುಗುವುದು. ಸಾಯಂಕಾಲದಿಂದ ಇಡೀ ರಾತ್ರಿ ಜಾಗರಣೆ ನಡೆಯುವ ಕಾರ್ಯಕ್ರಮಗಳಿಗೆ ಅಚ್ಚುಕಟ್ಟಾದ ವ್ಯವಸ್ಥೆ ಮಲ್ಲಿಕಾರ್ಜುನ ತರುಣ ಸಂಘದಿಂದ ಜರುಗುವುದು. ಭಕ್ತಾದಿಗಳು ಸದರಿ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಅಂಡಗಿ ತಿಳಿಸಿದ್ದಾರೆ.