ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀಶೈಲಂಗೆ ವಿಶೇಷ ಬಸ್‍ಗಳ ಕಾರ್ಯಾಚರಣೆ
ಕಲಬುರಗಿ:ಮಾ.5:ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಇದೇ ಮಾರ್ಚ್ 8 ರಂದು ಶ್ರೀಶೈಲಂನಲ್ಲಿ ರಥೋತ್ಸವಕ್ಕೆ ಜರುಗಲಿದ್ದು, ಈ ಸಂದರ್ಭದಲ್ಲಿ ಭಕ್ತರ ಅನುಕೂಲಕ್ಕಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕಲಬುರಗಿ ವಿಭಾಗ-1 ವತಿಯಿಂದ ಇದೇ ಮಾರ್ಚ್ 6 ರಿಂದ 11 ರವರೆಗೆ ಕಲಬುರಗಿ ಘಟಕ-1 ಮತ್ತು 4, ಚಿಂಚೋಳಿ, ಚಿತ್ತಾಪುರ, ಕಾಳಗಿ ಮತ್ತು ಸೇಡಂ ಘಟಕಗಳಿಂದ ಶ್ರೀಶೈಲಂಗೆ ವಿಶೇಷ ಬಸ್‍ಗಳ ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕಲಬುರಗಿ ವಿಭಾಗ-1ರ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.