ಸಂಶಯಾಸ್ಪದ ರೀತಿಯಲ್ಲಿ ಪೌರ ಕಾರ್ಮಿಕ ಸಾವು
ಕಲಬುರಗಿ,ಮಾ.5-ಪೌರ ಕಾರ್ಮಿಕನೊಬ್ಬ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಸಂಜುನಗರದಲ್ಲಿ ನಡೆದಿದೆ.
ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದ ನಿಲೇಶ ತಂದೆ ರಾಮು ಕಾಂಬಳೆ (27) ಸಾವನ್ನಪ್ಪಿದವರು.
ಸಂಜುನಗರದಲ್ಲಿರುವ ಬಾಡಿಗೆ ಮನೆಯಲ್ಲಿ ಓಡಣಿಯಿಂದ ಫ್ಯಾನಿಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ತನ್ನ ಗಂಡನ ಸಾವಿನ ವಿಷಯದಲ್ಲಿ ಸಂಶಯವಿದೆ ಎಂದು ಮೃತನ ಪತ್ನಿ ಸಾವಿತ್ರಿ ಕಾಂಬಳೆ ಅವರು ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಕಳೆದ 2-3 ತಿಂಗಳಿಂದ ವೇತನ ಸರಿಯಾದ ರೀತಿಯಲ್ಲಿ ಆಗಿರಲಿಲ್ಲ. ಇದರಿಂದ ಖರ್ಚಿಗೆ ಹಣ ಇಲ್ಲ ಎಂದು ನಿಲೇಶ್ ಹೇಳುತ್ತಿದ್ದ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.