ಜೂಜಾಟ: 15 ಜನರ ಬಂಧನ
ಕಲಬುರಗಿ,ಮಾ.5-ಆಜಾದಪುರ ಸೀಮೆಯ ಖಣಿ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಮತ್ತು ರಾಜಾಪುರ ನಾಲಾ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ವಿಶ್ವವಿದ್ಯಾಲ ಠಾಣೆ ಪೊಲೀಸರು ದಾಳಿ ನಡೆಸಿ 15 ಜನರನ್ನು ಬಂಧಿಸಿ 21,120 ರೂ.ನಗದು, ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ.
ಆಜಾದಪುರ ಸೀಮೆಯ ಖಣಿ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ಪಿಐ ಜಗದೀಶ ಕೆ.ಜಿ. ಮತ್ತು ಸಿಬ್ಬಂದಿ ದಾಳಿ ನಡೆಸಿ ನಜಿರೋದ್ದಿನ್ ಚೂಹೆ, ನಿಸಾರ್ ಅಹ್ಮದ್ ಆಳಂದ, ಅಬ್ದುಲ್ ಬಾಸೀದ್, ಅಬ್ದುಲ್ ಹಮೀದ್, ಅಬ್ದುಲ್ ಗನಿ, ಮಹ್ಮದ್ ಸಿರಾಜೋದ್ದಿನ್, ಅಬ್ದುಲ್ ಗನಿ ಖಾಸೀಮ್ ಅಲಿ, ಮಕಬೂಲ್ ಅಹ್ಮದ್, ಮಹ್ಮದ್ ಖಲೀಲ್, ಮಹ್ಮದ್ ಉಸ್ಮಾನ್ ಮತ್ತು ಸೈಯದ್ ಹಸನ್ ಎಂಬುವವರನ್ನು ಬಂಧಿಸಿ 18,120 ರೂ.ನಗದು, ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿದರೆ, ರಾಜಾಪುರ ನಾಲಾ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಎಎಸ್‍ಐ ನಿಜಲಿಂಗಪ್ಪ ಹಾಗೂ ಸಿಬ್ಬಂದಿ ದಾಳಿ ನಡೆಸಿ ಬಸವರಾಜ ಮಿಣಜಗಿ, ಬಸವರಾಜ ಹೊಸಮನಿ, ಶ್ರೀಕಾಂತ ಸುರವಾರ, ರತನ್ ಸರಡಗಿ ಎಂಬುವವರನ್ನು ಬಂಧಿಸಿ 3000 ರೂ.ನಗದು ಮತ್ತು ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.
45 ಲೀಟರ್ ಸೇಂಧಿ ಜಪ್ತಿ
ನಗರದ ಆಳಂದ ಚೆಕ್‍ಪೋಸ್ಟ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಸೇಂದಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಿಸಿಬಿ ಘಟಕದ ಪಿಐ ಪುಲ್ಲಯ್ಯ ಮತ್ತು ಸಿಬ್ಬಂದಿ ದಾಳಿ ನಡೆಸಿ ಆಳಂದ ಕಾಲೋನಿಯ ಅಂಬಯ್ಯ ಚೌದರಿ ಎಂಬಾತನನ್ನು ಬಂಧಿಸಿ 1800 ರೂ.ಮೌಲ್ಯದ 45 ಲೀಟರ್ ಸೇಂಧಿ ಜಪ್ತಿ ಮಾಡಿದ್ದಾರೆ. ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.