ದಾನ ಧರ್ಮದಿಂದ ಪುಣ್ಯ ಪ್ರಾಪ್ತಿ ಆಗುತ್ತದೆ: ಶರಣ ಶಂಕರಲಿಂಗ ಮಹಾರಾಜರು
ಚಿಟಗುಪ್ಪ:ಮಾ.5: ಪುರಾಣ ಪ್ರವಚನ ಆಲಿಸುವುದರಿಂದ ಒಳ್ಳೆಯ ವಿಚಾರಗಳು ಮೂಡುತ್ತವೆ. ಭಗವಂತನ, ಶರಣರ, ಮಹಾತ್ಮರ ಜೀವನ ಚರಿತ್ರೆಗಳನ್ನು ಕೇಳುವುದರಿಂದ ವ್ಯಕ್ತಿತ್ವ ಉನ್ನತಿಗೊಳ್ಳುತ್ತದೆ ಎಂದು ಶ್ರೀ ಸದ್ಗುರು ದತ್ತ ದಿಗಂಬರ ಮಹಾಯೋಗಿ ಮಾಣಿಕೇಶ್ವರ ಮಹಾರಾಜರ ಭವ್ಯ ರಥ ನಿರ್ಮಾಣದ ನಿಮಿತ್ತವಾಗಿ ಸೊಂತ ಮುಲ್ಲಾಮಾರಿ ತೀರಕ್ಷೇತ್ರದ ಶ್ರೀ ಶ್ರೀ ಶ್ರೀ ಅಭಿನವ ಬಾಲಯೋಗಿ ಶರಣ ಶಂಕರಲಿಂಗ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ 11 ದಿನ ಕಲಬುರ್ಗಿಯ ಮಹಾದಾಸೋಹಿ ಶರಣ ಬಸವೇಶ್ವರ ಮಹಾಪುರಾಣ ಕಾರ್ಯಕ್ರಮದ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ನುಡಿದರು. ಭಕ್ತಿ ಬದುಕನ್ನು ದಿವ್ಯಗೊಳಿಸುವ ಮಧುರ ಸಾಧನ. ಹಿರಿಯರಾಗಲಿ ಕಿರಿಯರಾಗಲಿ ಅವರ ಮನಸ್ಸುಗಳಲ್ಲಿ ಭಕ್ತಿ ಭಾವವನ್ನು ಒಡ ಮೂಡಬೇಕು. ಭಗವಂತನ, ಮಹಾತ್ಮರ, ಶರಣರ ತತ್ವಾದರ್ಶಗಳನ್ನು ಆಲಿಸಿ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದಾನ, ಧರ್ಮದಿಂದ ಪುಣ್ಯ ಪ್ರಾಪ್ತಿ ಆಗುತ್ತದೆ. ಬೇಡುವ ಕೈಗಿಂತ ನೀಡುವ ಕೈ ಶ್ರೇಷ್ಠ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ದಾನ, ಧರ್ಮ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು. ಅಂದಾಗ ಆರೋಗ್ಯ ಮತ್ತು ನೆಮ್ಮದಿ ಸಿಗುತ್ತದೆ ಎಂದು ಹೇಳಿದರು. ಮಾರ್ಚ್ 01ಕ್ಕೆ ಬಾಲಯೋಗಿ ಮೌನ ತಪಸ್ವಿ ಶರಣ ಶಂಕರಲಿಂಗ ಮಾಹಾಜರ ಸಾನಿಧ್ಯದಲ್ಲಿ ಪುರಣ ಕಾರ್ಯಕ್ರಮವನ್ನು ಮುಕ್ತಾಯವಾಯಿತ್ತು. ಮಾರ್ಚ್ 3ರಂದು ಸೊಂತ ಗ್ರಾಮದ ಶ್ರೀ ಶಂಕರಲಿಂಗ ಮಾಹಾರಾಜರ ಆಶ್ರಮದಲ್ಲಿ ಬಾಲಯೋಗಿ ಮೌನ ತಪಸ್ವಿ ಶರಣ ಶಂಕರಲಿoಗ ಮಾಹಾಜರ ಸಾನಿಧ್ಯದಲ್ಲಿ ಚಿಟಗುಪ್ಪ ಪಟ್ಟಣದ ಸದ್ಭಕ್ತರಿಗೆ ಆಶ್ರಮದಲ್ಲಿ ಹೋಳಿಗೆ, ತುಪ್ಪ, ಹಾಲು, ಪಾಪಡ್, ಭಜಿ, ಪ್ರಸಾದವನ್ನು ಶ್ರೀಗಳು ಅಮೃತ ಹಸ್ತದಿಂದ ಎಲ್ಲಾ ಭಕ್ತಾದಿಗಳಿಗೆ ಬಡಿಸಿ, ಎಲ್ಲರಿಗೂ ಶಾಲು ಹೊದಿಸಿ ಸನ್ಮಾನಿಸಿ ಆಶೀರ್ವಾದಿಸಿದರು. ಈ ಸಂದರ್ಭದಲ್ಲಿ ಶರಣುಕುಮಾರ ಶಾಸ್ತ್ರೀಗಳು, ಸಿದ್ದಯ್ಯಾ ಸ್ವಾಮಿ,ಷಣ್ಮುಖಯ ಸ್ವಾಮಿ, ಹನುಮಂತ ಕಣಜಿಕರ್, ಗಿರೀಶ್ ಗೌಡಗಿ, ಮಲ್ಲಿಕಾರ್ಜುನ ಪಾಟೀಲ್, ವಿಜಯಕುಮಾರ ಬೊಮಣ್ಣಿ, ರೇವಣ್ಣಪ್ಪ ಹೂಗಾರ್, ಗುಂಡುರೆಡ್ಡಿ, ಮಲ್ಲಿಕಾರ್ಜುನ ರೆಡ್ಡಿ, ಶ್ರೀಮಂತರಾವ ಇಂಚುರೇ, ರಾಜಕುಮಾರ ಆರ್. ಹಡಪದ, ಎಂ.ಪಿ.ಚಿಂತಕೋಟಿ, ವಿಶಾಲ್, ಗುಂಡು ಭಾಸ್ಕರ್, ಶುಶೀಲ, ಪ್ರಕಾಶ ಬಡಗು ಹಾಗೂ ಹಿರಿಯರು, ಮಹಿಳಾ ತಾಯಿಯಂದಿಯರು, ಮಕ್ಕಳು ಸೇರಿದಂತೆ ಸಾವಿರಾರು ಭಕ್ತರು ಉಪಸ್ಥಿತರಿದ್ದರು.