ದಲಿತ ಸಂಘರ್ಷ ಸಮಿತಿಯಿಂದ ಧರಣಿ ಸತ್ಯಾಗ್ರಹ
ಚಿತ್ತಾಪುರ:ಮಾ.5: ಬಿಸಿ ಊಟ ನೌಕರರಿಗೆ ಮಾನಸಿಕ ಕಿರುಕುಳ ನೀಡುತ್ತಿರುವ ಶಾಲಾ ಮುಖ್ಯೋಪಾಧ್ಯಾಯರು ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷರ ಕ್ರಮ ಖಂಡಿಸಿ ದಲಿತ ಸಂಘರ್ಷ ಸಮಿತಿಯಿಂದ ಮಾರ್ಚ್ 11ಕ್ಕೆ ನಿರಂತರ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಆನಂದ ಕಲ್ಲಕ್ ತಿಳಿಸಿದ್ದಾರೆ.
ಪಟ್ಟಣದ ತಹಸಿಲ್ ಕಾರ್ಯಾಲಯದ ತಹಸಿಲ್ದಾರ್ ಸೈಯದ್ ಷಾಷವಲಿ ರವರಿಗೆ ಮನವಿ ಮಾಡಿ ಮಾತನಾಡಿದ ಅವರು
ಶಹಾಬಾದ್, ಚಿತ್ತಾಪುರ, ಮತ್ತು ಕಾಳಗಿ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿನ ಬಿಸಿ ಊಟ ನೌಕರರಿಗೆ ಆಗುತ್ತಿರುವ ಸಮಸ್ಯೆಯನ್ನು ಖಂಡಿಸಿ ನಿರಂತರ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದು ಬಿಸಿ ಊಟದ ನೌಕರರ ಸಮಸ್ಯೆಯನ್ನು ಈಡೇರಿಸುವರೆಗೂ ಧರಣಿ ಮುಂದುವರಿಸುವುದಾಗಿ ತಿಳಿಸಿದ್ದಾರೆ.
ಮಾರ್ಚ್ 11ರಂದು ನಡೆಯಲಿರುವ ಧರಣಿ ಸತ್ಯಾಗ್ರಹಕ್ಕೆ ಬಿಸಿಊಟ ನೌಕರು ದಲಿತ ಸಂಘರ್ಷ ಸಮಿತಿಯ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಧರಣಿ ಸತ್ಯಾಗ್ರ ಯಶಸ್ವಿಗೊಳಿಸಲು ಕೇಳಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಮುಖಂಡರಾದ ಉದಯ ಸಾಗರ್, ನಾಗೇಂದ್ರ ಬುರ್ಲಿ, ಮಹಾದೇವ ಅಲ್ಲೂರ, ಬಿಸಿ ಊಟ ನೌಕರ ಸಂಘದ ಪದಾಧಿಕಾರಿಗಳಾದ ಶ್ರೀಮತಿ ಮುಕ್ತಿ ಚಂದನ್, ಸಂಪತಕುಮಾರ್, ಶ್ರೀಮತಿ ಸುವರ್ಣ ಶಾಹಂಪೂರಹಳ್ಳಿ, ಸೇರಿದಂತೆ ಇತರರು ಇದ್ದರು.