ಸಚಿವರಿಂದ ನೂತನ ಅಂಗನವಾಡಿ ಕಟ್ಟಡ ಉದ್ಘಾಟನೆ
ಕೆಂಭಾವಿ :ಮಾ.5: ಪಟ್ಟಣದ ವಾರ್ಡ ನಂ 4 ರ ನೂತನವಾಗಿ ನಿರ್ಮಾಣಗೊಂಡ ಅಂಗನವಾಡಿ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ಕೈಗಾರಿಕ ಸಚಿವ ಶರಣಬಸಪ್ಪಗೌಡ ದರ್ಶನಾಪುರ್ ಉದ್ಘಾಟಿಸಿದರು.
ವಿವಿಧ ಯೋಜನೆಗಳಲ್ಲಿ ನಿರ್ಮಾಣಗೊಂಡ ನೂತನ ಕಟ್ಟಡಗಳ ಉದ್ಘಾಟನೆಗೆ ಆಗಮಿಸಿದ್ದ ಸಚಿವರು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ 2020 -21ನೇ ಸಾಲಿನ ಕೆ.ಕೆ.ಆರ್.ಡಿ.ಬಿ ಯೋಜನೆಯಲ್ಲಿ ನಿರ್ಮಾಣಗೊಂಡ ನೂತನ ಅಂಗನವಾಡಿ ಕೇಂದ್ರ ನಂ-2 ವನ್ನು ಉದ್ಘಾಟಿಸಿದರು.
ಈ ಸಂಧರ್ಭದಲ್ಲಿ : ಮುಖಂಡರಾದ ಶಂಕರಗೌಡ ವಣಿಕ್ಯಾಳ್ , ಬಸನಗೌಡ ಹೊಸಮನಿ ಯಾಳಗಿ , ಪುರಸಭೆ ಸದಸ್ಯರಾದ ರಹೇಮಾನ ಪಟೇಲ್ ಯಲಗೋಡ್ , ಲಕ್ಷ್ಮೀಬಾಯಿ ಕಂಬಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ವಿರಣ್ಣಗೌಡ , ಅಸಿಸ್ಟೆಂಟ್ ಕಮೀಷನರ್ ಹಂಪಣ್ಣ ಸಜ್ಜನ್ , ಸಿಡಿಪಿಓ ಅನಿಲ ಕುಮಾರ್ ಕಾಂಬಳೆ , ಮೇಲ್ವಿಚಾರಕಿಯರಾದ ಸುನೀತಾ ಎನ್ ಪಾಟೀಲ್ , ಶಾಂತಾ ಯಡ್ರಾಮಿ ಹಾಗೂ ಸುರೇಖಾ ಜಾಗೀರದಾರ ಕಾರ್ಯಕರ್ತೆಯರಾದ ಭದ್ರಮ್ಮ ಬ್ಯಾಕೋಡ , ರತ್ನಾಬಾಯಿ ಕುಲ್ಕರ್ಣಿ , ಇಸ್ರತ್ , ಮಾಸಾಬಿ , ಶಿರಿನ್ , ಶಿಲಾ, ಶ್ರೀದೇವಿ , ಬಸಮ್ಮ , ಮಾಲನ್ ,ಸಿದ್ದಮ್ಮ , ಸೇರಿದಂತೆ ಹಲವರು ಉಪಸ್ಥಿತರಿದ್ದರು.