ಮಾನವ ಬಂಧುತ್ವ ವೇದಿಕೆಯಿಂದನೀರಿನ ಅರವಟಿಗೆ ಉದ್ಘಾಟನೆ
ಮುದಗಲ್.ಮಾ.೦೫- ಮಾನವ ಬಂಧುತ್ವ ವೇದಿಕೆ ಯಿಂದ ಪಟ್ಟಣದ ನಗರದ ಸಮುದಾಯ ಆರೋಗ್ಯ ಕೇಂದ್ರ ಮುದಗಲ್ಲ ಮುಂಭಾಗದಲ್ಲಿ ನೀರಿನ ಅರವಟಿಗೆ ಆರಂಭಿಸಲಾಯಿತು.
ಗುರುಬಸಪ್ಪ ಸಜ್ಜನ್ ಉದ್ಘಾಟಿಸಿ ಮಾತನಾಡಿ, ದಿನೇ ದಿನೇ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋದರೆ ಬಾಯಾರಿಕೆ ಆಗುತ್ತದೆ. ಬೇಸಿಗೆಯಲ್ಲಿ ಜನರ ನೀರಿನ ಬವಣೆ ನೀಗಿಸಲು ಅರವಟಿಗೆ ಆರಂಭಿಸಲಾಗಿದೆ. ಶುದ್ಧ ಕುಡಿಯುವ ನೀರಿಗೆ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಗೌಡರ್, ಮೈಬುಬ ಅಲಿ ಮೌಲಾನಾ ವೈದ್ಯಾಧಿಕಾರಿ ಮುದಗಲ್ಲ, ತಾಲೂಕು ಅಧ್ಯಕ್ಷರಾದ ಮಲ್ಲಿಕಾರ್ಜುನ ಚಿತ್ರನಾಳ, ಮಾನವ ಬಂಧುತ್ವ ವೇದಿಕೆ ಮುದಗಲ್ ಘಟಕದ ಸಂಜೀವ ಚಲುವಾದಿ, ಸಂಗಮೇಶ ಗೌರವ ಅಧ್ಯಕ್ಷರು, ಮೌನೇಶ ಸುರೇಶ, ಮಾನವ ಬಂಧುತ್ವ ವೇದಿಕೆ ಸದಸ್ಯರು ಉಪಸ್ಥಿತರಿದ್ದರು.