ಸತತ ಪರಿಶ್ರಮದಿಂದ ಉತ್ತಮ ಫಲಿತಾಂಶ: ಮಾಗಶೆಟ್ಟಿ
ಚಿತ್ತಾಪುರ:ಮಾ.5: ವ್ಯವಸ್ಥಿತ ಅಧ್ಯಯನ, ಸತತ ಪರಿಶ್ರಮದಿಂದ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವೆಂದು ಪ್ರಾಂಶುಪಾಲ ಶರಣಬಸಪ್ಪ ಮಾಗಶೆಟ್ಟಿ ಹೇಳಿದರು.
ತಾಲ್ಲೂಕಿನ ಗುಂಡಗುರ್ತಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಸೋಮವಾರ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿಯರ ಬಿಳ್ಕೊಡುಗೆ ಹಾಗೂ ಶಾಲಾ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ,ಸರಕಾರ ಗ್ರಾಮೀಣ ಭಾಗದ ಮಕ್ಕಳ ಸವಾರ್ಂಗೀಣ ಅಭಿವೃದ್ಧಿಗಾಗಿ ವಸತಿ ಶಾಲೆಗಳು ಪ್ರಾರಂಭಿಸಿದೆ.ದೊರೆಯುವ ಎಲ್ಲಾ ಸೌಕರ್ಯಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡಿ ಒಳ್ಳೆಯ ಫಲಿತಾಂಶ ಪಡೆದು ಶಾಲೆಗೆ,ಇಲಾಖೆಗೆ ಮತ್ತು ಪೆÇೀಷಕರಿಗೆ ಕೀರ್ತಿ ತರಬೇಕೆಂದು ಕರೆ ನೀಡಿದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಕೋಡ್ಲಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ ಡಾ.ರಾಜಶೇಖರ ಮಾಂಗ್ , ಯಶಸ್ಸು ಸಾಧಕನ ಸೊತ್ತೆ ಹೊರತು ಸೋಮಾರಿಯದಲ್ಲ. ಡಾ.ಬಿ. ಆರ್.ಅಂಬೇಡ್ಕರ್, ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಸೇರಿದಂತೆ ಅನೇಕರ ಚಿಂತನೆಗಳು ನಮಗೆ ಆದರ್ಶವಾಗಬೇಕು.ಉತ್ತಮ ಫಲಿತಾಂಶ ಪಡೆದರೆ ಸಾಲದು ಉತ್ತಮ ವ್ಯಕ್ತಿತ್ವ ಕೂಡ ಮುಖ್ಯ. ಈ ದಿಸೆಯಲ್ಲಿ ಕೀಳರಿಮೆ ತೊರೆದು ಸಕಾರಾತ್ಮಕ ಆಲೋಚನೆಗಳತ್ತ ನಿಮ್ಮ ಚಿತ್ತ ಸಾಗಬೇಕೆಂದು ಕಿವಿಮಾತು ಹೇಳಿದರು.
ಅತಿಥಿಗಳಾಗಿ ಚವಡಾಪುರ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ನಿಲಯಪಾಲಕ ಡಾ.ನಾಗರಾಜ ಹಳಿಗೋಧಿ ಆಗಮಿಸಿದ್ದರು.
ಪಾಲಕ ಪ್ರತಿನಿಧಿಗಳಾದ ಸೀಮಾ,ಸಿದ್ದಲಿಂಗಪ್ಪ,ಹುಲೆಪ್ಪ ಶಿಕ್ಷಕ ಸಿದ್ಧರಾಜು ಬಿ.ಎಲ್.ವೇದಿಕೆ ಮೇಲಿದ್ದರು.
ಸಂತೋಷಕುಮಾರ ನಿರೂಪಿಸಿದರು. ಶಿವಾನಂದ ನಿರೋಣಿ ಸ್ವಾಗತಿಸಿದರು.ಅಂಕಿತ್ ವಂದಿಸಿದರು.ಆಯೇಷಾ,ರವಿ, ಪವಿತ್ರ,ಮಂಜುಳಾ,ಅಲ್ಕಾ, ವಾಣಿಶ್ರಿ,ನಾಗಮಣಿ,ಸಂಗೀತಾ,ಸಿದ್ದಲಿಂಗ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ಪೆÇೀಷಕರು ಉಪಸ್ಥಿತಿತರಿದ್ದರು.
ನಂತರ ವಿದ್ಯಾರ್ಥಿನಿಯರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.