ಫಲಾನುಭವಿ ಸಂಪರ್ಕ ಅಭಿಯಾನ
ಬೀದರ :ಮಾ.5:ದಕ್ಷಿಣ ವಿಧಾನ ಸಭಾ ಕ್ಷೇತ್ರದ ನಿರ್ಣಾ ಗ್ರಾಮದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಗಾಂವ್ ಚಲೋ ಅಭಿಯಾನ ಹಾಗೂ ಫಲಾನುಭವಿ ಸಂಪರ್ಕ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಭಾಗವಾಗಿ ನೀರ್ಣಾ ಗ್ರಾಮದ ವಿವಿಧ ಬೂತಗಳಲ್ಲಿ ಗೋಡೆ ಬರಹ ಕಾರ್ಯಕ್ರಮ ಮಾಡಲಾಯಿತು, ಮತ್ತು ಫಲಾನುಭವಿ ಸಂಪರ್ಕದ ಭಾಗವಾಗಿ ಶ್ರೀ ನರೇಂದ್ರ ಮೋದಿ ಜೀ ಅವರ ನೇತೃತ್ವದ ಕೇಂದ್ರ ಸರ್ಕಾರದ ಜನಪ್ರಿಯ ಯೋಜನೆಗಳ ಯೋಜನೆ ಪಡೆದ ಫಲಾನುಭವಿಗಳಿಗೆ ಭೇಟಿ ಮಾಡಿ ಮಾಹಿತಿ ಪಡೆಯಲಾಯಿತು.
ಈ ಸಂದರ್ಭದಲ್ಲಿ ನಿರ್ಣಾ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಡಾ. ರವಿ ಸ್ವಾಮಿ ನಿರ್ಣಾ ಫಲಾನುಭವಿ ಸಂಪರ್ಕ ಅಭಿಯಾನದ ಸಂಚಾಲಕರಾದ ಯುವ ಮೋರ್ಚಾ ಅಧ್ಯಕ್ಷರು ಸಾಯಿನಾಥ ಪಾಟೀಲ, ಪ್ರಮುಖರಾದ ಪ್ರಶಾಂತ ಸಿಂದೋಲ, ಓಂಕಾರ ಮಜಗೆ ಮತ್ತಿತರರು ಇದ್ದರು.