ಏಳೂರು ದೇವತೆಗೆ ಯತ್ನಾಳ ಗ್ರಾಮದಿಂದ ಬೀಳ್ಕೊಡುಗೆ
ಯಡ್ರಾಮಿ:ಮಾ.5:ತಾಲೂಕಿನ ವಿಶೇಷ ಪ್ರಸಿದ್ಧ ದೇವತೆ ಏಳೂರು ಗ್ರಾಮ ದೇವತೆಯನ್ನು ಗಂಡನ ಮನೆಗೆ ಕಳಿಸುವ ಕಾರ್ಯಕ್ರಮ ಯತ್ನಾಳ ಗ್ರಾಮದ ಸರ್ವಜನಾಂಗದ ಜನರು ಸೇರಿಕೊಂಡು ಅದ್ದೂರಿಯಾಗಿ ಜರುಗಿತ್ತು.
ಎಲ್ಲರಿಗೂ ಅಚ್ಚರೇ ಪಡುವ ಘಟನೆ ಎಂದರೆ ಪ್ರತಿಯೊಂದು ಗ್ರಾಮದಲ್ಲಿ ಗ್ರಾಮ ದೇವತೆ ಇರುವುದು ಸಾಮಾನ್ಯ ಆದರೆ ಏಳೂರು ಗ್ರಾಮಕ್ಕೆ ಒಬ್ಬಳೇ ದೇವತೆ ಇರುವುದು ವಿಶೇಷ.ಈ ದೇವತೆಗೆ ಏಳು ಗ್ರಾಮಗಳು ತವರು ಮನೆ.ಒಂದು ಗ್ರಾಮದ ಅರ್ದ ಗ್ರಾಮ ಮಾಗಣಗೇರಿಯೂ ದೇವಿಯ ಗಂಡನ ಮನೆಯಾಗಿದ್ದು.
ಪ್ರತಿವರ್ಷ ಏಳು ಗ್ರಾಮಗಳಲ್ಲಿ ಗ್ರಾಮ ದೇವತೆ ಜಾತ್ರೆ ಮಾಡಬೇಕಾದರೆ.ತಮ್ಮ ಮನೆಯ ಮಗಳನ್ನು ಹೇಗೆ ಕರೆದುಕೊಂಡು ಬರುತ್ತಾರೆ ಹಾಗೆ ದೇವಿಯನ್ನು ಕರೆದುಕೊಂಡು ಬಂದು ಒಂದು ತಿಂಗಳು ಇಟ್ಟುಕೊಂಡು ಜಾತ್ರೆ ಮಾಡಿ ಮತ್ತೇ ಗಂಡನ ಮನೆಯವರಾದ ಮಾಗಣಗೇರಿ ಗ್ರಾಮದವರು ಬಂದು ದೇವಿಯನ್ನು ಕರೆದುಕೊಂಡು ಹೋಗುವದು ರೂಡಿಯಾಗಿದ್ದು.
ದೇವಿಯೂ ತನ್ನ ಗಂಡನ ಮನೆಗೆ ಹೋಗುವ ವೇಳೆಯಲ್ಲಿ ನೋಡುವದೇ ಒಂದು ಸೌಭಾಗ್ಯ.ದೇವಿಯೂ ಯಾವುದೇ ಬಂಡಿಯಲ್ಲಿ ಅಥವಾ ವಾಹನದಲ್ಲಿ ಹೋಗುವದಿಲ್ಲ ಭಕ್ತರ ತಲೆಯ ಮೇಲೆಯೇ ಹೊತ್ತಕೊಂಡು ಹೋಗುತ್ತಾರೆ.
ಹೋಗುವ ವೇಳೆಯಲ್ಲಿ ಗ್ರಾಮದ ಸರ್ವಜನಾಂಗದ
ಜನರು ತಮ್ಮ ಕುಟುಂಬದ ಸದಸ್ಯರು ಸೇರಿಕೊಂಡು ಬರುತ್ತಾರೆ.ದೇವಿಯೂ ಗ್ರಾಮದ ಸೀಮೆ ದಾಟುವರಿಗೂ ನಾಲ್ಕು,ಐದು ಬಾರಿ ಜನರಿಗೆ ತಮ್ಮ ಮುಖ ತಿರುಗಿಸಿ ಹೋಗಿ ಬರುತ್ತೇನೆ ಎಂದು ಹೇಳುತ್ತಾಳೆ.
ಅದಕ್ಕೆ ಗ್ರಾಮಸ್ಥರು ಹೋಗಿ ಬಾ ತಾಯಿ,ಹೋಗಿ ಬಾ ತಾಯಿ ಎಂದು ಕೈ ಮಾಡಿ ಕೈ ಮುಗಿದು ಮಗಳನ್ನು ಕಳಿಸುವ ರೀತಿಯಲ್ಲಿ ಹೇಳುವದೇ ಒಂದು ವಿಶೇಷವಾಗಿ ಕಂಡು ಬಂತು.
ತಾಲೂಕಿನ ಯತ್ನಾಳ ಗ್ರಾಮದಲ್ಲಿ ಅದ್ದೂರಿಯಾಗಿ ದೇವಿಯ ಜಾತ್ರೆ ಮುಗಿಸಿ.ದೇವಿಯನ್ನು ಗಂಡನ ಮನೆಗೆ ಕಳಿಸುವ ಕಾರ್ಯಕ್ರಮ ಅತೀ ವಿಜೃಂಭಣೆಯಿಂದ ಸರ್ವಜನಾಂಗದ ಜನರು ಸೇರಿಕೊಂಡು ಡೊಳ್ಳು ಹಲವಾರು ವಾದ್ಯಗಳೊಂದಿಗೆ ದೇವಿಯನ್ನು ಗಂಡನ ಮನೆಗೆ ಕಳಿಸುವ ಕಾರ್ಯ ಜರುಗಿತ್ತು.
—ಏಳೂರು ಗ್ರಾಮ ಯತ್ನಾಳ,ಹಂಚಿನಾಳ, ಕಾಚಾಪೂರ,ಕಡಕೋಳ,ಮುರಡಿ,ಕರ್ನಾಳ ಮಾಗಣಗೇರಿ ಈ ಗ್ರಾಮಗಳಿಗೆ ಒಬ್ಬಳೇ ದೇವತೆಯಾಗಿದ್ದು ವಿಶೇಷ.ಈ ದೇವತೆಗೆ ಬಂಗಾರದ ದೇವತೆ ಶಕ್ತಿ ದೇವತೆ ಏಳೂರು ಗ್ರಾಮ ದೇವತೆ ಎಂದು ಕರೆಯುತ್ತಾರೆ.