೨೦೨೪-೨೫ ನೇ ಸಾಲಿನ ಪುರಸಭೆ ಆಯ-ವ್ಯಯ ಬಜೆಟ್ ಮುಂಗಡ ಪತ್ರದ ಪೂರ್ವಭಾವಿ ಸಭೆ
ಸಂಜೆವಾಣಿ ವಾರ್ತೆ
ಮಾನ್ವಿ.ಮಾ.೦೫- ಕೇಂದ್ರ ಮತ್ತು ರಾಜ್ಯ ಹಾಗೂ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿನ ಆಸ್ತಿಕರ ಸೇರಿದಂತೆ ವಿವಿಧ ಮೂಲಗಳಿಂದ ದೊರೆಯುವ ಸಂಪನ್ಮೂಲಗಳನ್ನು ಸಂಗ್ರಹಿಸಿ ಮಾನ್ವಿ ಪಟ್ಟಣದಲ್ಲಿ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸುವುದಾಕ್ಕಾಗಿ ಒಟ್ಟು ೧೧ಕೋಟಿ ಅಂದಾಜು ಮುಂಗಡ ಬಜೆಟ್ ಪತ್ರವನ್ನು ತಯಾರಿಸಬೇಕಾಗಿದ್ದು ಬಜೆಟನಲ್ಲಿ ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ರಸ್ತೆ,ಚರಂಡಿ, ಕುಡಿಯುವ ನೀರಿನ ಪೂರೈಕೆ ಸೇರಿದಂತೆ ಮಹಿಳೆಯರ, ವಿಶೇಷ ಚೇತನರು, ಪ.ಜಾತಿ. ಪ.ಪಂಗಡ ಸಮುದಾಯಗಳ ಕಲ್ಯಾಣಕ್ಕಾಗಿ ವಿದ್ಯಾರ್ಥಿ ವೇತನ, ಔಷಾದಿಗಳ ವಿತರಣೆ, ಆಡುಗೆ ಆನಿಲ ,ಸೇರಿದಂತೆ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು ಸದಸ್ಯರ ಸೂಚನೆ ಮೇರೆಗೆ ತಾಳಿಭಾಗ್ಯ ಯೋಜನೆಯನ್ನು ಪರಿಶೀಲಿಸಲಾಗುವುದು. ಪಟ್ಟಣದಲ್ಲಿ ಉದ್ಯಾನವನಗಳ ಅಭೀವೃದ್ದಿ. ಮಹಿಳಾ ಶೌಚಾಲಯ, ಚರಂಡಿ, ರಾಜಕಾಲೂವೆ ಸ್ವಚ್ಚತೆ, ಕುಡಿಯುವ ನೀರಿಗಾಗಿ ಕೊಳವೆ ಬಾವಿಗಳ ದುರಸ್ತಿ ಪುಟಪಾತ್‌ಗಳ ನಿರ್ವಹಣೆ, ಹಾಗೂ ಪುರಸಭೆಗೆ ನಿರಂತರವಾಗಿ ಅದಾಯವನ್ನು ತರಬಲ್ಲ ಅದಾಯ ಮೂಲಗಳನ್ನು ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಪುರಸಭೆಯ ಮುಖ್ಯ ಸ್ಥಳಗಳಲ್ಲಿ ಬ್ಯಾನರ್ ಅಳವಡಿಸುವುದಕ್ಕೆ ಟೆಂಡರೆ ಕರೆಯುವುದು.ರಸ್ತೆ ವಿಭಾಜಕಗಳ ವಿದ್ಯುತ್ ಕಂಬಗಳಿಗೆ ಜಾಹಿರಾತು ಫಲಕಗಳನ್ನು ಅಳವಡಿಸುವುದರ ಮೂಲಕ ಅದಾಯವನ್ನು ಪಡೆಯಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಗಂಗಾಧರ ತಿಳಿಸಿದರು.
ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಪುರಸಭೆಯ ೨೦೨೪-೨೫ ನೇ ಸಾಲಿನ ಆಯ-ವ್ಯಯ ಬಜೆಟ್ ಮುಂಗಡ ಪತ್ರದ ತಯಾರಿಕೆಗಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಹನುಮಂತ ವಾರ್ಡ ೧೮ ರ ನಿವಾಸಿ ಮಾತನಾಡಿ ಮಹಿಳೆಯರ ಶೌಚಾಲಯ ಒತ್ತುವರಿ ತೆರುಗೊಳಿಸಿ ತಡೆಗೋಡೆ ನಿರ್ಮಾಣ ಮಾಡಬೇಕು,ಕುಡಿಯುವ ನೀರಿನ ಶೌಚಾಲಯ ನಿರ್ಮಾಣ , ರಸ್ತೆ ಅಭಿವೃದಿ ಮಾಡುವಂತೆ ಕೋರಿದರು. ಹಿರಿಯ ವರದಿಗಾರ ಸಿದ್ರಾಮಯ್ಯಸ್ವಾಮಿ ಮಾತನಾಡಿ ಪಟ್ಟಣದಲ್ಲಿ ಪತ್ರಿಕಾ ಭವನಕ್ಕೆ ನಿವೇಶನ ಹಾಗೂ ಪತ್ರಕರ್ತರಿಗೆ ನಿವೇಶನ ನೀಡುವಂತೆ ಮನವಿ ಮಾಡಿದರು.ಶಿವುಜಗ್ಲಿ ಕೋನಾಪುರ ಪೇಟೆಯಲ್ಲಿ ರಾಜ ಕಾಲುವೆ ದುರಸ್ತಿ ಮಾಡುವಂತೆ ಕೋರಿದರು. ೪ನೇ ವಾರ್ಡ್ ಸದಸ್ಯ ಶರಣಪ್ಪ ಮೇದಾ ಆರ್.ಜಿ.ಕ್ಯಾಂಪ್ ರಾಜಕಾಲೂವೆ ದುರಸ್ತಿಮಾಡುವಂತೆ ಕೋರಿದರು.
ಪೂರ್ವಭಾವಿ ಸಭೆಯಲ್ಲಿ ಪುರಸಭೆಯ ವ್ಯವಸ್ಥಾಪಕರಾದ ನರಸಿಂಹ, ಸದಸ್ಯರಾದ ಸುಖಮುನಿ, ಸೇರಿದಂತೆ ಹಾಲಿ, ಮಾಜಿ ಸದಸ್ಯರು, ಜನಪ್ರತಿನಿಧಿಗಳು, ಸ್ಥಳಿಯ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಪಟ್ಟಣದ ನಾಗರಿಕರು ಅಗತ್ಯ ಸಲಹೆ ಮತ್ತು ಸೂಚನೆಗಳನ್ನು ನೀಡಿದರು.